ಬೆಳಗಾವಿ: ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ನಿನ್ನೆ ರಾತ್ರಿ ಬಿಜೆಪಿ (BJP) ನಾಯಕರ ಹೈವೋಲ್ಟೇಜ್ ಸಭೆಗೂ ಮುನ್ನ ಆರ್‌ಎಸ್‌ಎಸ್‌ನ (RSS) 6 ಹಿರಿಯ ನಾಯಕರ ಜೊತೆ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
Advertisement
ನಗರದ ಕೊಲ್ಲಾಪುರ ಸರ್ಕಲ್ ಬಳಿ ಖಾಸಗಿ ಹೋಟೆಲ್‍ಗೆ ಅಮಿತ್ ಶಾ ಆಗಮನಕ್ಕೂ ಮುನ್ನವೇ ಆರ್‌ಎಸ್‌ಎಸ್ ನಾಯಕರು ಆಗಮಿಸಿದ್ದರು. ಈ ವೇಳೆ ಉತ್ತರ ಕರ್ನಾಟಕ ಪ್ರಾಂತದ ಆರ್‌ಎಸ್‌ಎಸ್ ನಾಯಕರ ಜೊತೆಗೆ ಅಮಿತ್ ಶಾ ರಹಸ್ಯ ಸಭೆ ನಡೆಸಿದ್ದಾರೆ. ಚುನಾವಣೆ ವರ್ಷ ಹಿನ್ನೆಲೆ ಆರ್‌ಎಸ್‌ಎಸ್ ಕಾರ್ಯಕರ್ತರ ಜೊತೆಗಿನ ಮಾತುಕತೆ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಬೆಳಗಾವಿ ನಾಯಕರಿಗೆ ಅಮಿತ್ ಶಾ ಒಗ್ಗಟ್ಟಿನ ಪಾಠ – 15 ಸ್ಥಾನ ಗೆಲ್ಲುವ ಗುರಿ
Advertisement
Advertisement
ಈ ವೇಳೆ ಆರ್‌ಎಸ್‌ಎಸ್ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಕಿತ್ತೂರು ಕರ್ನಾಟಕ ಭಾಗದಲ್ಲಿ ಬಿಜೆಪಿ ಅತಿ ಹೆಚ್ಚು ಸೀಟ್ ಗೆಲ್ಲುವ ವಿಶ್ವಾಸವಿದೆ. ಆದ್ರೆ ನಾಯಕರಲ್ಲಿ ಒಗ್ಗಟ್ಟಿನ ಅಗತ್ಯವಿದೆ ಎಂದು ಆರ್‌ಎಸ್‌ಎಸ್ ನಾಯಕರು ಸಲಹೆ ನೀಡಿದ್ದಾರೆ. ಚುನಾವಣೆ ತಂತ್ರಗಾರಿಕೆ, ಮಾರ್ಗಸೂಚಿ ಹಾಗೂ ಆರ್‌ಎಸ್‌ಎಸ್ ಜೊತೆ ಪಕ್ಷದ ನಾಯಕರ ಸಮನ್ವಯತೆ ಬಗ್ಗೆ ಚರ್ಚೆ ನಡೆದಿದ್ದು, ಕೆಲ ನಾಯಕರ ಸಮನ್ವಯತೆ ಕೊರತೆ ಬಗ್ಗೆ ಅಮಿತ್ ಶಾ ಬಳಿ ಆರ್‌ಎಸ್‌ಎಸ್ ನಾಯಕರ ದೂರು ನೀಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಇದನ್ನೂ ಓದಿ: ತಾರಕಕ್ಕೇರಿದ ಹಾಸನ `ಟಿಕೆಟ್’ ಸಂಘರ್ಷ – ಜೆಡಿಎಸ್‍ನಲ್ಲಿ ಕುಟುಂಬ ಕದನ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k