ಬೆಳಗಾವಿ: ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ಅವರ ನೇತೃತ್ವದಲ್ಲಿ ಬೆಳಗಾವಿ ನಾಯಕರ ಮಹತ್ವದ ಸಭೆ ಶನಿವಾರ ತಡರಾತ್ರಿ ನಡೆದಿದ್ದು, ಹಲವು ಖಡಕ್ ಸೂಚನೆಗಳನ್ನು ನೀಡಲಾಗಿದೆ. ಬೆಳಗಾವಿ ಭಾಗದ ಬಿಜೆಪಿಯೊಳಗಿನ ಸಂಘರ್ಷ, ರಾಜಕೀಯ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಅಮಿತ್ ಶಾ ಫೈನಲ್ ವಾರ್ನಿಂಗ್ ಕೊಟ್ಟಿದ್ದಾರೆ. ಪಕ್ಷದ ವರಿಷ್ಠರ ಅಂತಿಮ ತೀರ್ಪಿನ ಸಂದೇಶವಿದ್ದ ಸಭೆ ಇದಾಗಿತ್ತು. ಬೆಳಗಾವಿ ಬಣ ರಾಜಕಾರಣಕ್ಕೆ ತೆರೆ ಎಳೆಯುವ ನಿರ್ಧಾರದಿಂದಲೇ ಈ ಮಹತ್ವದ ಸಭೆಯನ್ನು ಅಮಿತ್ ಶಾ ನಡೆಸಿದ್ರು.
ನಿನ್ನೆ ರಾತ್ರಿ ಬೆಳಗಾವಿಯಲ್ಲಿ (Belagavi) ನಡೆದ ಸಭೆಯಲ್ಲಿ ಅಮಿತ್ ಶಾ ಅವರು ಸಂಘರ್ಷಕ್ಕೆ ಹೊಲಿಗೆ ಹಾಕುವ ಕಸರತ್ತು ನಡೆಸಿದರು. ಸಭೆಯ ಆರಂಭದಲ್ಲಿ ಅಮಿತ್ ಶಾ ಅವರು, ಬೆಳಗಾವಿ ಬಣ ಬಡಿದಾಟ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ನಂತರ ಮಾತು ಶುರು ಮಾಡಿದ ಅಮಿತ್ ಶಾ ಆರಂಭದಲ್ಲಿ ಪ್ರೋತ್ಸಾಹದಾಯಕ ಮಾತುಗಳನ್ನಾಡಿದ್ರು. ಪಕ್ಷದ ಬೆಳಗಾವಿ ನಾಯಕರನ್ನು ಹೊಗಳುತ್ತಲೇ ಒಗ್ಗಟ್ಟಿನ ಮಹತ್ವದ ಬಗ್ಗೆ ಪಾಠ ಮಾಡಿದ್ರು. ನಂತರ ಗಂಭೀರವಾದ ಅಮಿತ್ ಶಾ ಬೆಳಗಾವಿ ನಾಯಕರಿಗೆ ಫೈನಲ್ ವಾರ್ನಿಂಗ್ ಕೊಟ್ಟರು ಎನ್ನಲಾಗಿದೆ. ಇದನ್ನೂ ಓದಿ: ಜೆಡಿಎಸ್‌ಗೆ ಹಾಕೋ ಮತ ಕಾಂಗ್ರೆಸ್‌ಗೆ ಹಾಕಿದಂತೆ: ಅಮಿತ್ ಶಾ
ಮನೆಯೊಂದು ಮೂರು ಬಾಗಿಲು ಎಂಬಂತಾಗಿರೋ ಬೆಳಗಾವಿ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ಬೇಡ ಎಂದು ಅಮಿತ್ ಶಾ ತಾಕೀತ ಮಾಡಿದರು. ಪ್ರತಿಷ್ಠೆಯ ಮೇಲಾಟವಾಡ್ತಿದ್ದ ನಾಯಕರಿಗೆ ಎಚ್ಚರಿಕೆ ಪಾಠ ಮಾಡಿದರು. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರಿದ್ದರೂ ಬಣ ಸಂಘರ್ಷ ಮಾತ್ರ ನಿಲ್ಲುತ್ತಿಲ್ಲ. ಆಂತರಿಕವಾಗಿ ಬಣ ರಾಜಕೀಯದಿಂದ ಹೈಕಮಾಂಡ್‌ಗೆ ಇರುಸು ಮುರುಸು ಆಗಿದೆ ಅನ್ನುವುದನ್ನೂ ಪರೋಕ್ಷವಾಗಿ ತಮ್ಮ ಮಾತುಗಳಲ್ಲಿ ಹೇಳಿದ್ರಂತೆ ಅಮಿತ್ ಶಾ.
ಬೆಳಗಾವಿ ರಾಜಕಾರಣ ರಾಜ್ಯ ರಾಜಕೀಯದಲ್ಲಿ ಪ್ರತ್ಯೇಕ ಅಧ್ಯಾಯ ಇದ್ದ ಹಾಗೆ. ಆದರೆ ಜಿಲ್ಲೆಯ ಬಿಜೆಪಿ ನಾಯಕರು ಪಕ್ಷದ ತತ್ವ-ಸಿದ್ಧಾಂತ, ನಿಯಮಗಳನ್ನು ಬದಿಗಿಟ್ಟು ತಮ್ಮದೇ ಗುಂಪು ರಚನೆ ಮಾಡಿಕೊಂಡು ರಾಜಕಾರಣ ಮಾಡಿಕೊಂಡು ಬರ್ತಿದ್ದಾರೆ. ಪಕ್ಷಕ್ಕಿಂತ ವೈಯಕ್ತಿಕ ಪ್ರತಿಷ್ಠೆ, ಕಚ್ಚಾಟ, ಗುಂಪುಗಾರಿಕೆಗಳ ಮೇಲಾಟವೇ ಇವರಿಗೆ ಹೆಚ್ಚಾಗಿದೆ. ಇದೇ ಕಾರಣದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಂದೆರಡು ಸ್ಥಾನಗಳು ಲಾಸ್ ಆಯ್ತು. ನಂತರ ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಡಬಲ್ ಸೋಲು ಅನುಭವಿಸಬೇಕಾಯಿತು. ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ – ಕಾಂಗ್ರೆಸ್‌ನವರು ಸಹ ಶಾಮೀಲು: ಸಿ.ಟಿ ರವಿ ಆರೋಪ
ಪರಿಷತ್ ಚುನಾವಣೆಯಲ್ಲಿ ವೈಯಕ್ತಿಕ ಪ್ರತಿಷ್ಠೆಯಿಂದ ಬಿಜೆಪಿಗೆ ಎರಡು ಸ್ಥಾನಗಳು ಕೈತಪ್ಪಿದವು. ಇದೀಗ ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಆಂತರಿಕ ಸಂಘರ್ಷದಿಂದ ಪರಿಣಾಮ ಬೀರಬಹುದೆಂಬ ಆತಂಕ ಸಹಜವಾಗಿ ಇದೆ. ಇದೇ ಆತಂಕದಿಂದ ಬೆಳಗಾವಿ ಲೀಡರ್‌ಗಳ ಜತೆ ನಿನ್ನೆ ಅಮಿತ್ ಶಾ ಮಹತ್ವದ ಸಭೆ ನಡೆಸಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ವಿಧಾನಸಭೆ ಚುನಾವಣೆ ಮುಗಿಯುವರೆಗೂ ಬೆಳಗಾವಿಯಿಂದ ಮತ್ಯಾವ ಕಂಪ್ಲೈಂಟ್ ಬರಬಾರದು ಅಂತ ಷಾ ತಾಕೀತು ಮಾಡಿದ್ದಾರೆ. ಅಷ್ಟೇ ಅಲ್ಲ, ಬೆಳಗಾವಿ ನಾಯಕರಿಗೆ 15+ ಸೀಟ್ ಗೆಲ್ಲುವ ಬಿಗ್ ಟಾಸ್ಕ್ ಕೊಟ್ಟಿದ್ದಾರೆ.
ಅಮಿತ್ ಶಾ ಫೈನಲ್ ವಾರ್ನಿಂಗ್ ಏನ್ ಗೊತ್ತಾ?
ಇಷ್ಟು ದಿನ ಹೇಗಿತ್ತೋ ಗೊತ್ತಿಲ್ಲ, ಅದು ಈಗ ನಮಗೆ ಬೇಡವೂ ಬೇಡ. ಆದ್ರೆ ಇನ್ಮುಂದೆ ನಿಮ್ಮ ಹಿಂದಿನ ಆಟಗಳೆಲ್ಲ ನಡೆಯಲ್ಲ. ನಿಮ್ಮ ಪ್ರತಿಷ್ಠೆ, ನಿಮ್ಮ ಸಂಘರ್ಷಕ್ಕೆ ಇನ್ಮೇಲೆ ಬಿಲ್‌ಕುಲ್ ಅವಕಾಶ ಇಲ್ಲ. ಪಕ್ಷದ ಶಿಸ್ತು ಮೀರದೇ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಿ. ಇನ್ಮುಂದೆ ಬೆಳಗಾವಿಯಿಂದ ನಮಗೆ ಕಂಪ್ಲೈಟ್ ಬರಬಾರದು. ಕಂಪ್ಲೈಂಟ್ ಬಂದ್ರೆ ನಮ್ಮ ವರಸೆ ಆಗ ಬೇರೆ ರೀತಿಯೇ ಇರುತ್ತೆ ಹುಷಾರ್. ಸಂಘರ್ಷ ಬಿಟ್ಟು ಒಂದಾದ್ರೆ ಅದೇ ಬಿಜೆಪಿ ಶಕ್ತಿ, ಸಾಮರ್ಥ್ಯ. ವಿಪಕ್ಷಗಳೇ ಗೊಂದಲ, ಅಚ್ಚರಿ ಆಗೋ ಥರ ಹೆಚ್ಚಿನ ಸೀಟ್ ಗೆಲ್ಲಿಸಿ. ಬೆಳಗಾವಿಯಲ್ಲಿ ಈ ಸಲ 15+ ಸ್ಥಾನ ಗೆಲ್ಲಲೇಬೇಕು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k