ಮುಂಬೈ: ಟೀಂ ಇಂಡಿಯಾ ತಂಡಕ್ಕೆ ಆಯ್ಕೆ ಆಗಲು ಕಡ್ಡಾಯ ಪಡಿಸಿರುವ ಯೋ-ಯೋ ಟೆಸ್ಟ್ ಕುರಿತು ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಸಹ ಯೋಯೋ ಟೆಸ್ಟ್ ವಿರುದ್ಧ ಹೇಳಿಕೆ ನೀಡಿದ್ದಾರೆ.
ಖಾಸಗಿ ಮಾಧ್ಯಮ ಕಾರ್ಯಕ್ರಮದಲ್ಲಿ ಕಪಿಲ್ ದೇವ್ ಅವರಿಗೆ ಎದುರಾದ ಯೋ-ಯೋ ಟೆಸ್ಟ್ ಕುರಿತು ಪ್ರಶ್ನೆಗೆ ಉತ್ತರಿಸಿ, ಯಾವುದೇ ಒಬ್ಬ ಆಟಗಾರ ಫಿಟ್ ಆಗಿದ್ದರಾ ಎಂಬುವುದು ಅವರು ಆನ್ ಫೀಲ್ಡ್ ನಲ್ಲಿ ನೀಡುವ ಪ್ರದರ್ಶನದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಯೋ-ಯೋ ಫಿಟ್ ನೆಸ್ ಟೆಸ್ಟ್ ಬೌಲರ್ ಗಳ ಪಾಲಿಗೆ ಸಲುಭವಾಗಿದ್ದು, ಬ್ಯಾಟ್ಸ್ ಮನ್ ಪಾಲಿಗೆ ಕಠಿಣ ವಾಗಿದೆ. ಕೇವಲ ಈ ಪರೀಕ್ಷೆ ಒಂದರಿಂದಲೇ ಆಟಗಾರರ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Advertisement
Advertisement
ಇದೇ ವೇಳೆ ಟೀಂ ಇಂಡಿಯಾ ಮಾಜಿ ಆಟಗಾರರು ಯಾರು ಈ ಟೆಸ್ಟ್ ಪೂರ್ಣಗೊಳಿಸಲು ಸಾಧ್ಯ ಎಂಬ ಪ್ರಶ್ನೆಗೆ ಉತ್ತರಿಸಿ, ಸುನೀಲ್ ಗವಾಸ್ಕರ್ 15 ನಿಮಿಷಕ್ಕಿಂತ ಹೆಚ್ಚು ಸಮಯ ರನ್ ಮಾಡಲು ಬಯಸುವುದಿಲ್ಲ. ಆದರೆ 3 ದಿನಗಳು ಮೈದಾನದಲ್ಲಿ ಬ್ಯಾಟ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೇ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಸಹ ಯೋಯೋ ಟೆಸ್ಟ್ ಪೂರ್ಣಗೊಳಿಸಲು ವಿಫಲರಾಗಬಹುದು ಎಂದು ಹೇಳಿದ್ದಾರೆ.
Advertisement
ಫುಟ್‍ಬಾಲ್ ದಂತಕತೆ ಅರ್ಜೆಂಟೀನಾದ ಡಿಯಾಗೋ ಮರಡೋನಾ ವೇಗವಾಗಿ ಓಡುಲಾರರು. ಆದರೆ ಆಟದ ವೇಳೆ ಬಾಲ್ ಸಿಕ್ಕರೆ ವೇಗವಾಗಿ ಓಡುತ್ತಾರೆ ಎಂದು ಉದಹಾರಣೆ ನೀಡಿ ತನ್ನ ವಾದವನ್ನು ಸಮರ್ಥಿಸಿಕೊಂಡರು.
Advertisement
ಐರ್ಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ ಟೂರ್ನಿಗೆ ಟೀಂ ಇಂಡಿಯಾ ತಂಡದಿಂದ ಅಂಬಟಿ ರಾಯುಡು ಯೋಯೋ ಟೆಸ್ಟ್ ಫೈಲ್ ಆದ ಬಳಿಕ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ. ಇಂಗ್ಲೆಂಡ್ ವಿರುದ್ಧದ ಟೂರ್ನಿಗೆ ಅಂಬಟಿ ರಾಯುಡು ಸ್ಥಾನದಲ್ಲಿ ಸುರೇಶ್ ರೈನಾರನ್ನು ಆಯ್ಕೆ ಮಾಡಲಾಗಿತ್ತು.
ಏನಿದು ಯೋ ಯೋ ಫಿಟ್‍ನೆಸ್ ಟೆಸ್ಟ್:
ಕ್ರಮಬದ್ಧ ಹಾಗೂ ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮಥ್ರ್ಯ ವನ್ನು ಈ ಪರೀಕ್ಷೆಯಲ್ಲಿ ಆಟಗಾರ ತೋರಿಸಬೇಕಾಗುತ್ತದೆ. ಯೋ-ಯೋ ಫಿಟ್‍ನೆಸ್ 20 ಮೀ ಅಳತೆಯಲ್ಲಿ ಎರಡು ಕೋನ್ ಗಳನ್ನು ನೇರವಾಗಿ ಇರಿಸಲಾಗಿರುತ್ತದೆ. ಆಟಗಾರ ಒಂದು ಲೈನ್ ನಿಂದ ಓಟವನ್ನು ಆರಂಭಿಸಬೇಕು. ಎರಡೂ ಲೈನ್ ನಲ್ಲಿಟ್ಟ ಕೋನ್ ಗಳನ್ನು ಬೀಪ್ ಧ್ವನಿ ಅನುಸರಿಸಿ ಸುತ್ತಬೇಕು. ಒಟ್ಟಾರೆ ಮೂರು ಬೀಪ್ ಧ್ವನಿ ಒಳಗಾಗಿ ಸುತ್ತಬೇಕು. ಈ ಬೀಪ್ ಸ್ಟಾರ್ಟ್, ಟರ್ನ್ ಹಾಗೂ ಫಿನಿಶ್ ಸೂಚನೆಯಾಗಿರುತ್ತದೆ. ಪ್ರತೀ ಬಾರಿ ಸುತ್ತಿದಾಗಲೂ ಬೀಪ್ ಧ್ವನಿಯ ಅಂತರ ಕಡಿಮೆಯಾಗುತ್ತ ಹೋಗುತ್ತದೆ. 2 ಬಾರಿ ಬೀಪ್ ಸಮಯದೊಳಗೆ 40 ಮೀ ಕ್ರಮಿಸಲಾಗದೇ ಹೋದರೆ ಪರೀಕ್ಷೆ ಮುಕ್ತಾಯಗೊಳ್ಳುತ್ತದೆ. ಲ್ಯಾಪ್ಸ್ ಹಾಗೂ ಓಟದ ವೇಗ ಆಧರಿಸಿ ಅಂಕ ನೀಡಿ ಆಯ್ಕೆ ಮಾಡಲಾಗುತ್ತದೆ.