ಪ್ರತಿಭಾವಂತ ಕ್ರಿಕೆಟ್ ಆಟಗಾರರಿಗೆ ಶೋಧ – ಕಪಿಲ್ ಕ್ರಿಕೆಟ್ ಕ್ಲಬ್‍ನಿಂದ ತರಬೇತಿ ಶಿಬಿರ

Public TV
1 Min Read
KAPIL CRICKRT CLUB

ಬೆಂಗಳೂರು: ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಷ್ಠಿತ ಕಪಿಲ್ ಕ್ರಿಕೆಟ್ ಕ್ಲಬ್ ವಾರ್ಷಿಕ ತರಬೇತಿ ಶಿಬಿರವನ್ನು ಆರಂಭಿಸಿದೆ.

KAPIL CRICKET CLUB 2

ಬೆಂಗಳೂರಿನ ಬಸವೇಶ್ವರ ನಗರದ ಕಪಿಲ್ ಕ್ರಿಕೆಟ್ ಕ್ಲಬ್ ಪ್ರತಿಭಾವಂತ ಕ್ರಿಕೆಟ್ ಪಟುಗಳಿಗಾಗಿ ಆಯೋಜಿಸಿರುವ ಶಿಬಿರ ಜೂನ್ 3 ರಿಂದ ಆರಂಭಗೊಂಡಿದ್ದು, ಸುತ್ತಮುತ್ತಲ 3 ಮೈದಾನಗಳಲ್ಲಿ ಶಿಬಿರ ನಡೆಸಿ ತರಬೇತಿ ನೀಡುತ್ತಿದೆ. 5 ವರ್ಷದ ಮಕ್ಕಳಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಇಲ್ಲಿ ತರಬೇತಿ ನೀಡಿ ಪ್ರತಿಭಾವಂತರನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದೆ. ಇದನ್ನೂ ಓದಿ: ಕಪಾಳಮೋಕ್ಷ ಪ್ರಕರಣ: 14 ವರ್ಷಗಳ ಬಳಿಕ ಶ್ರೀಶಾಂತ್‍ಗೆ ಕ್ಷಮೆಯಾಚಿಸಿದ ಭಜ್ಜಿ

KAPIL CRICKET CLUB 1

ಕಳೆದ 14 ವರ್ಷಗಳಿಂದ ಸತತವಾಗಿ ವಾರ್ಷಿಕ ತರಬೇತಿ, ಬೇಸಿಗೆ ಶಿಬಿರಗಳನ್ನು ನಡೆಸುತ್ತಿರುವ ಕಪಿಲ್ ಕ್ರಿಕೆಟ್ ಕ್ಲಬ್, ಇತ್ತೀಚೆಗೆ ಎರಡು ತಿಂಗಳ ಕಾಲ 150 ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿತ್ತು. ಉತ್ಸಾಹಿ ಹಿರಿಯ ಆಟಗಾರರು ಮತ್ತು ತಜ್ಞ ಕ್ರಿಕೆಟ್ ಪಟುಗಳ ಮಾರ್ಗದರ್ಶನದಲ್ಲಿ ತರಬೇತಿ ನೀಡಿ, ಪ್ರತಿಭಾವಂತರನ್ನು ವೃತ್ತಿಪರ ಕ್ರಿಕೆಟ್‍ಗೆ ಪೂರಕವಾಗಿ ತಯಾರಿ ನಡೆಸಲಾಗುತ್ತದೆ. ಎಂದು ಕ್ಲಬ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ. ಇದನ್ನೂ ಓದಿ: French Open 2022 ಗಾಯಗೊಂಡ ಅಲೆಕ್ಸಾಂಡರ್ ಜೆರೆವ್ – ಕ್ರೀಡಾ ಸ್ಪೂರ್ತಿ ಮೆರೆದ ನಡಾಲ್ ನಡೆಗೆ ಮೆಚ್ಚುಗೆ

KAPIL CRICKET CLUB

ಇಲ್ಲಿ ತರಬೇತಿ ಪಡೆದ ಸಾಕಷ್ಟು ಮಕ್ಕಳು ಜಿಲ್ಲಾಮಟ್ಟ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿರುವ ಅವರು, ಆಸಕ್ತ ಕ್ರಿಕೆಟ್ ಪ್ರೇಮಿಗಳು ಒಟ್ಟುಗೂಡಿ ಈ ಸತ್ಕಾರ್ಯದಲ್ಲಿ ತೊಡಗಿರುವುದಾಗಿ ಹೇಳಿದ್ದಾರೆ.

ಪ್ರಸ್ತುತ ಬಸವೇಶ್ವರನಗರದ ಕಾರ್ಮೆಲ್ ಶಾಲಾ ಮೈದಾನ, ವಿಜಯನಗರದ ಸರ್ವಜ್ಞ ಶಾಲಾ ಮೈದಾನದಲ್ಲಿ ವಾರ್ಷಿಕ ತರಬೇತಿ ನೀಡಲಾಗುತ್ತಿದ್ದು ಮಕ್ಕಳನ್ನು ದೈಹಿಕ ಮತ್ತು ಮಾನಸಿಕವಾಗಿ ತಯಾರುಗೊಳಿಸಿ ಭವಿಷ್ಯದ ಕ್ರಿಕೆಟ್ ಪಟುಗಳಾಗಿ ರೂಪುಗೊಳಿಸುವುದೇ ನಮ್ಮ ಗುರಿ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನರಸಿಂಹಮೂರ್ತಿ 9845066713 ಅಥವಾ ವಿಲಿಯಂ, ಉಪಾಧ್ಯಕ್ಷ  9242997043, ಕಾರ್ಯದರ್ಶಿ ಲಕ್ಷ್ಮೀಕಾಂತ್, 9538676716 ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *