ಪ್ಯಾನ್ ಸ್ಟಾರ್ ಆಗಿ ಮಿಂಚ್ತಿರುವ ರಿಷಬ್ ಶೆಟ್ಟಿ (Rishab Shetty) ನಟನೆಯ ಕನ್ನಡದ `ಕಾಂತಾರ’ (Kantara) ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗಿ ಕಮಾಲ್ ಮಾಡುತ್ತಿದೆ. ಒಟಿಟಿಯಲ್ಲಿ ಸದ್ದು ಮಾಡ್ತಿರುವ `ಕಾಂತಾರ’ ಈಗ ಹೊಸ ಹೆಜ್ಜೆ ಇಡುತ್ತಿದೆ. ಅಂತರಾಷ್ಟ್ರೀಯ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ, ವಿದೇಶಿ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
Advertisement
ಕನ್ನಡದ `ಕಾಂತಾರ’ ಈಗಾಗಲೇ ತೆಲುಗು, ತಮಿಳು, ಮಲಯಾಳಂ, ಹಿಂದಿ, ತುಳು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗಿದೆ. ಇದೀಗ ʻಕಾಂತಾರʼ ಇಂಗ್ಲೀಷ್ ಭಾಷೆಗೆ ಡಬ್ ಆಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಎಲ್ಲಾ ಭಾಷೆಯ ಪ್ರೇಕ್ಷಕರನ್ನ ಸೆಳೆಯುತ್ತಿರುವ ಕಾಂತಾರ ಈಗ ವಿದೇಶಿಗರನ್ನು ಸೆಳೆಯಲು ಚಿತ್ರತಂಡ ರೆಡಿಯಾಗಿದೆ.
Advertisement
Advertisement
ಇನ್ನೂ ʻಕಾಂತಾರʼ ಇಂಗ್ಲೀಷ್ ವರ್ಷನ್ (English Version) ಜನವರಿಯಿಂದ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. ತುಳುನಾಡಿನ ನೆಲ, ಸಂಸ್ಕೃತಿಯ ಇಂಗ್ಲೀಷ್ ಭಾಷೆಗೆ ಹೇಗೆ ಡಬ್ ಮಾಡುತ್ತಾರೆ ಎಂಬ ಕುತೂಹಲ ಮೂಡಿಸಿದೆ. ಗಗ್ಗರ, ಕಂಬಳ, ಕೋಲ, ಕಾರ್ಣೀಕ, ನೇಮ ಎಂಬುದನ್ನ ವಿದೇಶಿ ಭಾಷೆಗೆ ಹೇಗೆ ಡಬ್ ಮಾಡುತ್ತಾರೆ ಎಂಬುದು ಅನೇಕರಿಗೆ ಈ ಬಗ್ಗೆ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ವಿಷ್ಣುವರ್ಧನ್ ನೂತನ ಮನೆಗೆ ಯಶ್ ದಂಪತಿ, ಸುದೀಪ್ ಭೇಟಿ
Advertisement
ಪರಭಾಷೆಯಲ್ಲೂ ʻಕಾಂತಾರʼ (Kantara) ಗೆದ್ದು ಬೀಗಿದ ಹಾಗೇ ವಿದೇಶಿಗರನ್ನ ಸೆಳೆಯುತ್ತಾ ಎಂಬುದನ್ನು ಕಾದುನೋಡಬೇಕಿದೆ.