ಬೆಂಗಳೂರು: ಗುರುವಾರ ನಡೆದ ಆರ್‌ಸಿಬಿ (RCB) ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಗೆಲುವು ಸಾಧಿಸಿತ್ತು. ಗೆಲುವಿನ ಸಂಭ್ರಮದಲ್ಲಿ ಕನ್ನಡಿಗ ಕೆಎಲ್ ರಾಹುಲ್ (KL Rahul) ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ್ದರು. ಇದೀಗ `ಕಾಂತಾರ’ (Kantara) ನನ್ನ ಫೆವರಿಟ್ ಸಿನಿಮಾ. ಸಿನಿಮಾದಲ್ಲಿರುವಂತೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ನಡೆದ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 163 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ತಂಡ 17.5 ಓವರ್‌ನಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಗೆಲುವು ಸಾಧಿಸಿತ್ತು. ಡೆಲ್ಲಿ ಪರ ಆಡಿದ ಕೆಎಲ್ ರಾಹುಲ್ ಅಜೇಯರಾಗಿ 53 ಎಸೆತಗಳಲ್ಲಿ ಭರ್ಜರಿ 93 ರನ್ ಗಳಿಸಿದ್ದರು.ಇದನ್ನೂ ಓದಿ: It Is My Territory – ಉಗ್ರಂ ಶೈಲಿಯಲ್ಲಿ ವೃತ್ತ ಬರೆದು ರಾಹುಲ್ ಸಂಭ್ರಮ
ಗೆಲುವಿನ ಸಂಭ್ರಮದಲ್ಲಿದ್ದ ಕೆಎಲ್ ರಾಹುಲ್ ಬ್ಯಾಟ್‌ನಿಂದ ಸುತ್ತು ಗೆರೆ ಎಳೆದು, ಬ್ಯಾಟ್ ಅನ್ನು ಗೆರೆ ನಡುವೆ ನೆಲಕ್ಕೆ ಗುದ್ದಿ ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದಲ್ಲದೇ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಹೊಸ ಸ್ಟೈಲ್ ಹಿಂದಿನ ಕಾರಣವನ್ನು ಬಿಚ್ಚಿಟ್ಟಿರುವ ಕೆಎಲ್ ರಾಹುಲ್, ಇದು ನನಗೆ ವಿಶೇಷವಾದ ಜಾಗ, ಕಾಂತಾರ ಸಿನಿಮಾ ನೆನಪಿಸಿಕೊಂಡೆ. ನಾನು ಸಿನಿಮಾ ನೋಡಿದ್ದೇನೆ. ಸಿನಿಮಾದ ದೃಶ್ಯವೊಂದು ನನ್ನೊಳಗೆ ಹಾಗೆಯೇ ಇದೆ. ಪಂದ್ಯದಲ್ಲಿ ಗೆದ್ದಾಗ ನನಗೆ ಆ ಸಿನಿಮಾದ ದೃಶ್ಯ ನೆನಪಾಯಿತು. ಹಾಗಾಗಿ ನಾನು ಅದೇ ರೀತಿ ಮಾಡಿದೆ. ಅದು ನನ್ನ ನೆಚ್ಚಿನ ಸಿನಿಮಾ. ಈ ಕ್ರೀಡಾಂಗಣ, ಈ ನೆಲ ಇದೆಲ್ಲ ನಾನು ಹುಟ್ಟಿ ಬೆಳೆದ ಜಾಗ. ಇದೆಲ್ಲ ನನ್ನದು ಎಂದು ಹೇಳಿಕೊಂಡಿದ್ದಾರೆ.ಇದನ್ನೂ ಓದಿ: RCB | ಪಾಟಿದಾರ್ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನ – ಡಿಕೆಗೆ ಕೊಹ್ಲಿ ದೂರು?