ಏಳು ವರ್ಷಗಳ ಹಿಂದೆ ಕನ್ನಡದಲ್ಲಿ ಹೊಸ ಸಂಚಲನ ಮೂಡಿಸಿದ್ದ ರಂಗಿತರಂಗ ಸಿನಿಮಾ ಇದೀಗ ಬಾಲಿವುಡ್ ಅಂಗಳ ತಲುಪಿದೆ. ನೂರು ಕೋಟಿಗೂ ಹೆಚ್ಚು ಬಜೆಟ್ ನಲ್ಲಿ ನಿರ್ಮಾಣವಾದ ಬಾಹುಬಲಿ ಸಿನಿಮಾದ ಜೊತೆ ಜೊತೆಯಾಗಿಯೇ ಬಿಡುಗಡೆಯಾದ ರಂಗಿತರಂಗ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿತ್ತು. ಈ ಸಿನಿಮಾದ ಮೂಲಕ ಅನೂಪ್ ಭಂಡಾರಿ ನಿರ್ದೇಶಕನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟರೆ, ನಿರೂಪ್ ಭಂಡಾರಿ ಹೀರೋ ಆಗಿ ಲಾಂಚ್ ಆದರು. ಇದೀಗ ಈ ಸಿನಿಮಾ ಹಿಂದಿಯಲ್ಲಿ ರೀಮೇಕ್ ಆಗುತ್ತಿದೆ.
Advertisement
ತನ್ನ ನಿರೂಪಣೆ ಮತ್ತು ಮೇಕಿಂಗ್ ಕಾರಣದಿಂದಾಗಿ ರಂಗಿತರಂಗಿ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಕಡಿಮೆ ಬಜೆಟ್ ನಲ್ಲಿ ತಯಾರಾದ ಈ ಚಿತ್ರ ಹೆಚ್ಚು ದುಡ್ಡು ಮಾಡಿತ್ತು. ಅಲ್ಲದೇ, ಹೊಸ ಪ್ರೇಕ್ಷಕರನ್ನು ಅದು ಹುಟ್ಟು ಹಾಕಿತ್ತು. ಈ ಸಿನಿಮಾದಿಂದ ಸ್ಯಾಂಡಲ್ ವುಡ್ ಗೆ ಪರಿಚಯವಾದ ಅನೂಪ್ ಭಂಡಾರಿ ಆನಂತರ ಹಲವು ಸಿನಿಮಾಗಳನ್ನು ಮಾಡಿದರು. ಇದೀಗ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರಕ್ಕೂ ಇವರೇ ನಿರ್ದೇಶಕರು. ಇದನ್ನೂ ಓದಿ:ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಂಬನಿ ಮಿಡಿದ ನಟ ಜಗ್ಗೇಶ್
Advertisement
Advertisement
ಈಗಾಗಲೇ ಮುಂಬೈನ ಕಾರ್ಪೊರೇಟ್ ಕಂಪನಿಯೊಂದಿ ರೀಮೇಕ್ ರೈಟ್ಸ್ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಅಂದುಕೊಂಡಂತೆ ಆದರೆ, ನಿರೂಪ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮಾಡಲಿದ್ದಾರೆ ಎನ್ನುವ ಸುದ್ದಿಯಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರ ಬೀಳದೇ ಇದ್ದರೂ, ಹಿಂದಿ ರೈಟ್ಸ್ ವಿಚಾರವಾಗಿ ಅನೂಪ್ ಭಂಡಾರಿ ಖಚಿತತೆಯನ್ನು ನೀಡಿದ್ದಾರೆ.