ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಚಂದ್ರಶೇಖರ್ ಗುರೂಜಿ ಹತ್ಯೆಯನ್ನು ಖಂಡಿಸಿ ನಟ ಜಗ್ಗೇಶ್ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
Advertisement
ಚಂದ್ರಶೇಖರ್ ಗುರೂಜಿ ಮತ್ತು ನಟ ಜಗ್ಗೇಶ್ ಸಾಕಷ್ಟು ವರ್ಷಗಳಿಂದ ಪರಿಚಿತರು ಜಗ್ಗೇಶ್ ಅವರ ಏಳಿಗೆಯನ್ನ ಸದಾ ಪ್ರೋತ್ಸಾಹಿಸುತ್ತಿದ್ದರು. ಈಗ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆಗೆ ನಟ ಕಂಬನಿ ಮಿಡಿದಿದ್ದಾರೆ. ಇಂದಿನ ಕಾಲದಲ್ಲಿ ಯಾರನ್ನು ನಂಬಲು ಸಾಧ್ಯವಿಲ್ಲ ಅಂತಾ ಗುರೂಜಿ ಸಾವಿಗೆ ಟ್ವೀಟ್ ಮೂಲಕ ಕಂಬಿನಿ ಮಿಡಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ಸಿನಿಮಾ ಸಲಿಂಗ ಪ್ರೇಮಕಥೆ ಎಂದ ಆಸ್ಕರ್ ಪ್ರಶಸ್ತಿ ವಿಜೇತ ರೆಸೂಲ್
Advertisement
ನನ್ನ ಆತ್ಮೀಯ ಸ್ನೇಹಿತರು
ನನ್ನ ಅವರ ಒಡನಾಟ ಆಧ್ಯಾತ್ಮಿಕ
ಹಾಗು ವಾಸ್ತು ಸಂಬಂಧಿಸಿದ್ದು.
ಸದ ನನ್ನಒಳಿತು ಬಯಸುತ್ತಿದ್ದ ಆತ್ಮ.ನಾವಿಬ್ಬರು ಮಾತಿಗೆ ಕೂತರೆ ಘಂಟೆಗಟ್ಟಲೆ.ನನ್ನ ರಾಜ್ಯಸಭೆ ಸ್ಥಾನಕ್ಕೆ ತಮಗೆ ಸಿಕ್ಕಂತೆ ಸಂಭ್ರಮಿಸಿದ್ದರು.ಅವರ ಅಮಾನುಷವಾಗಿ ಕೊಲೆಗೈದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲಿ.ಇಂದಿನ ಕಾಲದಲ್ಲಿ ಯಾರನ್ನ ನಂಬುವುದು.RIP pic.twitter.com/fukOGlFtW4
— ನವರಸನಾಯಕ ಜಗ್ಗೇಶ್ (@Jaggesh2) July 5, 2022
Advertisement
ನನ್ನ ಆತ್ಮೀಯ ಸ್ನೇಹಿತರು, ನನ್ನ ಅವರ ಒಡನಾಟ ಆಧ್ಯಾತ್ಮಿಕ ಹಾಗು ವಾಸ್ತು ಸಂಬಂಧಿಸಿದ್ದು, ಸದಾ ನನ್ನ ಒಳಿತು ಬಯಸುತ್ತಿದ್ದ ಆತ್ಮವಾಗಿತ್ತು. ನಾವಿಬ್ಬರು ಮಾತಿಗೆ ಕೂತರೆ ಘಂಟೆಗಟ್ಟಲೆ ಮಾತನಾಡುತ್ತಿದ್ದೆವು, ನನ್ನ ರಾಜ್ಯಸಭೆ ಸ್ಥಾನಕ್ಕೆ ತಮಗೆ ಸಿಕ್ಕಂತೆ ಸಂಭ್ರಮಿಸಿದ್ದರು. ಅವರ ಅಮಾನುಷವಾಗಿ ಕೊಲೆಗೈದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲಿ. ಇಂದಿನ ಕಾಲದಲ್ಲಿ ಯಾರನ್ನ ನಂಬುವುದು ಕಷ್ಟ ಅಂತಾ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ಸಖತ್ ವೈರಲ್ ಆಗುತ್ತಿದೆ.