ನವೆಂಬರ್ 1 ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ನಮ್ಮ ಹೆಮ್ಮೆಯ ಬಾವುಟವನ್ನು ಹಾರಿಸುವ ಮೂಲಕ ಕನ್ನಡಿಗರು ರಾಜ್ಯೋತ್ಸವನ್ನು ಸಂಭ್ರಮಿಸುತ್ತಾರೆ. ಎಲ್ಲೆಲ್ಲೂ ಅರಿಶಿಣ-ಕೆಂಪು ಬಣ್ಣವೇ ರಾರಾಜಿಸುತ್ತಿರುತ್ತದೆ. ಆದ್ದರಿಂದ ನಿಮಗಾಗಿ ಎರಡು ಬಣ್ಣದ ರೈಸ್ ಗಳನ್ನು ಸುಲಭವಾಗಿ ಮಾಡುವ ವಿದಾನ ಇಲ್ಲಿದೆ.
ಲೆಮನ್ ರೈಸ್
ಬೇಕಾಗುವ ಸಾಮಾಗ್ರಿಗಳು
1. ಎಣ್ಣೆ – 2 ಚಮಚ
2. ನಿಂಬೆ ಹಣ್ಣು – 1 (ಸಣ್ಣದಿದ್ದರೆ ಎರಡು ತೆಗೆದುಕೊಳ್ಳಿ)
3. ಕರಿಬೇವು – ಸ್ವಲ್ಪ
4. ಸಾಸಿವೆ – 1/2 ಚಮಚ
5. ಅರಿಶಿಣ ಪುಡಿ – 1/4
6. ಕೊತ್ತಂಬರಿ ಸೊಪ್ಪು – ಸ್ವಲ್ಪ
7. ಶೇಂಗಾ(ಕಡ್ಲೆ ಬೀಜ) – 2 ಚಮಚ
8. ಉದ್ದಿನ ಬೇಳೆ – 1 ಚಮಚ
9. ಕಡ್ಲೇ ಬೇಳೆ – 1 ಚಮಚ
10. ಉಪ್ಪು ರುಚಿಗೆ ತಕ್ಕಷ್ಟು
11. ಹಸಿ ಮೆಣಸಿನಕಾಯಿ- 2-3
Advertisement
Advertisement
ಮಾಡುವ ವಿಧಾನ
* ಎರಡು ಕಪ್ ಅಕ್ಕಿಯಲ್ಲಿ ಉದುರು-ಉದುರಾಗಿ ಅನ್ನ ಮಾಡಿ ಇಟ್ಟುಕೊಳ್ಳಿ.
* ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಹಾಕಿ ಫ್ರೈ ಮಾಡಿ. (ಕಡಿಮೆ ಉರಿಯಲ್ಲಿ)
* ನಂತರ ಹಸಿ ಮೆಣಸಿನ ಕಾಯಿ, ಶೇಂಗಾ, ಕರಿಬೇವು, ಅರಿಶಿಣ ಹಾಕಿ ಫ್ರೈ ಮಾಡಿ.
* ಸ್ಟೌವ್ ಆಫ್ ಮಾಡಿ, ಅದು ತಣ್ಣಗಾದ ಮೇಲೆ ನಿಂಬೆರಸ, ರುಚಿಕೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
* ಈಗ ರೆಡಿ ಮಾಡಿಕೊಂಡಿದ್ದ ರೈಸ್ ಹಾಕಿ ಮಿಕ್ಸ್ ಮಾಡಿ.
* ಈಗ ಸಣ್ಣಗೆ ಕಟ್ ಮಾಡಿದ್ದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಲೆಮನ್ ರೈಸ್ ಸವಿಯಲು ಸಿದ್ಧ.
Advertisement
Advertisement
ಟೊಮೆಟೋ ರೈಸ್
ಬೇಕಾಗುವ ಸಾಮಾಗ್ರಿಗಳು
1. ಟೊಮೆಟೋ -5
2. ಈರುಳ್ಳಿ – 2
3. ಹಸಿ ಮೆಣಸಿನ ಕಾಯಿ – 4-5
4. ಕೊತ್ತಂಬರಿ ಸೊಪ್ಪು – ಅರ್ಧ ಕಪ್
5. ಪುದೀನ – ಸ್ವಲ್ಪ
6. ಖಾರದ ಪುಡಿ – 2 ಚಮಚ
7. ಉಪ್ಪು – ರುಚಿಗೆ ತಕ್ಕಷ್ಟು
8. ಬಟಾಣಿ -1/4 ಕಪ್(ನೆನೆಸಿರುವುದು)
9. ಎಣ್ಣೆ – 3 ಚಮಚ
10. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಒಗ್ಗರಣೆಗೆ
1. ಸಾಸಿವೆ – 1 ಚಮಚ
2. ಜೀರಿಗೆ – 1 ಚಮಚ
3. ಅರಿಶಿಣ – ಚಿಟಿಕೆ
4. ಚಕ್ಕೆ, ಲವಂಗ, ಏಲಕ್ಕಿ – 2
ಮಾಡುವ ವಿಧಾನ
* ಮೊದಲಿಗೆ ಒಂದು ಲೋಟ ಅಕ್ಕಿ ತೆಗೆದುಕೊಂಡು ನೆನೆಸಿಕೊಳ್ಳಿ.
* ಕುಕ್ಕರಿಗೆ ಎಣ್ಣೆ ಹಾಕಿ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಫೈ ಮಾಡಿ.
* ಬಳಿಕ ಬಟಾಣಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.
* ಹಸಿ ಮೆಣಸಿನಕಾಯಿ, ಈರುಳ್ಳಿ(ಮೀಡಿಯಮ್ ಆಗಿ ಕಟ್ ಮಾಡಿರಬೇಕು) ಹಾಕಿ ಫ್ರೈ ಮಾಡಿ.
* ಈರುಳ್ಳಿ ಬ್ರೌನ್ ಬಣ್ಣ ಬಂದ ಮೇಲೆ ಟೊಮೆಟೋ, ಖಾರದ ಪುಡಿ, ಚಿಟಿಕೆ ಅರಿಶಿಣ ಹಾಕಿ ಚೆನ್ನಾಗಿ ಫ್ರೈ ಮಾಡಿ.
* ಈಗ ರುಚಿಗೆ ತಕ್ಕಷ್ಟು ಉಪ್ಪು, ಪುದೀನ, ಕೊತ್ತಂಬರಿ ಸೊಪ್ಪು ಹಾಕಿ ಫ್ರೈ ಮಾಡಿ.
* ಒಂದು ಲೋಟ ಅಕ್ಕಿಗೆ ಎರಡು ಲೋಟ ನೀರು ಹಾಕಿ ಕುದಿಸಿರಿ.
* ಈಗ ನೆನೆಸಿದ ಅಕ್ಕಿ ಹಾಕಿ ಕ್ಯಾಪ್ ಹಾಕಿ.
* ಕುಕ್ಕರಿನಲ್ಲಿ ಎರಡು ವಿಶಲ್ ಕೂಗಿಸಿದರೆ ಸಿಂಪಲ್ ಆಗಿ ಟೊಮೆಟೋ ರೈಸ್ ರೆಡಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv