ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ `ಕಮಲಿ'(Kamali) ಈ ಸೀರಿಯಲ್ನಲ್ಲಿ ಕಮಲಿಯಾಗಿ ಅಭಿನಯಿಸಿರೋ ಅಮೂಲ್ಯ ಗೌಡ (Amulya Gowda) ಹೆಸರು ಚಿರಪರಿಚಿತ.
ಕಿರುತೆರೆಯಲ್ಲಿ ಪಕ್ಕಾ ಹಳ್ಳಿ ಹುಡ್ಗಿಯಾಗಿ (Village Girl) ಕಾಣಿಸಿಕೊಂಡಿರುವ ಅಮೂಲ್ಯ ಗೌಡರ ಹಾಟ್ಫೋಟೋಗಳು (Hot Photos) ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಭಾರೀ ಸದ್ದು ಮಾಡ್ತಿವೆ. ಇದನ್ನೂ ಓದಿ: ಬೆಳಗ್ಗೆ ಎದ್ದಾಗ್ಲೇ ಬಿಕ್ಕಳಿಕೆ- ಯಾರೋ ಮಿಸ್ ಮಾಡಿಕೊಳ್ತಿದ್ದಾರೆ ಅಂದ್ರು ರಶ್ಮಿಕಾ
`ಕಮಲಿ’ ಸೀರಿಯಲ್ ನಲ್ಲಿ ಲಂಗ ದಾವಣಿ, ಎರಡು ಜಡೆ ಹಾಕಿಕೊಳ್ಳೊ ಅಮೂಲ್ಯ ಗೌಡ ನಿಜ ಜೀವನದಲ್ಲಂತೂ ಅದಕ್ಕೆ ಪಕ್ಕಾ ಆಪೊಸಿಟ್ ಆಗಿದ್ದಾರೆ. ರಿಯಲ್ ಲೈಫ್ನಲ್ಲಿ ಅಮೂಲ್ಯ ಗೌಡ ಪಕ್ಕಾ ಮಾಡರ್ನ್ ಹುಡುಗಿ ಎಂಬುದಕ್ಕೆ ಈ ಫೋಟೋಗಳಿಗಿಂತ ಬೇರೆ ಸಾಕ್ಷಿ ಬೇಕಿಲ್ಲ. ಇದನ್ನೂ ಓದಿ: Bigg Boss Special- ಈ ಬಾರಿ ಬಿಗ್ ಬಾಸ್ 9 ಮನೆ ಪ್ರವೇಶ ಮಾಡಿರುವ ಖ್ಯಾತ ಕಿರುತೆರೆ ನಟಿಯರಿವರು
ಮೂಲತಃ ಮೈಸೂರಿನವರೇ ಆದ ಅಮೂಲ್ಯ ಸ್ವಾತಿ ಮುತ್ತು ಧಾರಾವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಜೀ ವಾಹಿನಿಯ ಕಮಲಿ ಧಾರವಾಹಿ ಇವರಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತು. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮೂರು ಅಚ್ಚರಿಯ ಹೆಸರುಗಳು
ಅಷ್ಟೇ ಅಲ್ಲ ಪುನರ್ ವಿವಾಹ, ಅರಮನೆ ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ತೆಲುಗಿನ ಕಾರ್ತಿಕ ದೀಪಂ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಇವರ ಪೂರ್ತಿ ಹೆಸರು ಅಮೂಲ್ಯ ಓಂಕಾರ ಗೌಡ. ಇದೀಗ ಅಮೂಲ್ಯ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದು, ಈ ಬೆನ್ನಲ್ಲೇ ಅಮೂಲ್ಯಗೌರಡ ಹಾಟ್ ಫೋಟೋಗಳು ವೈರಲ್ ಆಗಿವೆ.