ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗುರುವಾರ ಮಧ್ಯಾಹ್ನ 3ಕ್ಕೆ ಜರ್ಮನಿಯ ಬವೇರಿಯಾ ರಾಜ್ಯದ ರಾಜಧಾನಿಯಾದ ಮ್ಯೂನಿಕ್ ನಗರದ ಸಿರಿಗನ್ನಡ ಕೂಟದ ಸದಸ್ಯರೊಂದಿಗೆ ಹಾಗೂ ಭಾರತದ ರಾಯಭಾರಿ ಕಚೇರಿಯ ವಾಣಿಜ್ಯ, ಶಿಕ್ಷಣ ಮತ್ತು ಮಾಹಿತಿ ವಿಭಾಗದ ಕಾನ್ ಸುಲ್ ಅಧಿಕಾರಿಗಳಾದ ಡಾ.ಸುಯಶ್ ಚವ್ಹಾಣ್ ಅವರೊಂದಿಗೆ ಸಂಪರ್ಕ ಜಾಲ ಸಭೆ ನಡೆಸಲಾಯಿತು.
ಮ್ಯೂನಿಕ್ ನಗರದ ಸಿರಿಗನ್ನಡ ಕೂಟದ ಸದಸ್ಯರಾದ ಶ್ರೀಧರ್ ಲಕ್ಷ್ಮೀಪುರ ಅವರು ಮೊದಲಿಗೆ ಸಿರಿಗನ್ನಡ ಕೂಟದ ಬಗ್ಗೆ ಮಾಹಿತಿ ನೀಡಿದ್ದು, ಜರ್ಮನಿಯಲ್ಲಿರುವ ಹಳೆಯ ಕನ್ನಡ ಕೂಟ ಇದಾಗಿದೆ. 10 ವರ್ಷಗಳಿಂದ ಸಕ್ರಿಯವಾಗಿರುವ ಕೂಟ ಮ್ಯೂನಿಕ್ ನಗರದಲ್ಲಿ ಕನ್ನಡದ ಸಾಂಸ್ಕೃತಿಕ ವಾತಾವರಣ ಸೃಷ್ಟಿಸುವುರೊಂದಿಗೆ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಜರ್ಮನ್ ದೇಶದಲ್ಲಿ ಸಾರುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಿ ಭಾವುಕರಾದ ಶಾಸಕ ಡಾ.ಭರತ್ ಶೆಟ್ಟಿ
Advertisement
Advertisement
ನಂತರ ಮ್ಯೂನಿಕ್ ನಗರದಲ್ಲಿರುವ ಭಾರತದ ರಾಯಭಾರಿ ಕಚೇರಿಯ ವಾಣಿಜ್ಯ, ಶಿಕ್ಷಣ ಮತ್ತು ಮಾಹಿತಿ ವಿಭಾಗದ ಕಾನ್ ಸುಲ್ ಅಧಿಕಾರಿಗಳಾದ ಡಾ.ಸುಯಶ್ ಚವ್ಹಾಣ್ ಮಾತನಾಡಿದರು. ಶಿಕ್ಷಣದಲ್ಲಿ ಕನ್ನಡ ಅನುಷ್ಠಾನ ವಿಚಾರದಲ್ಲಿ ಪ್ರಾಧಿಕಾರದ ಕ್ರಮಗಳನ್ನು ಬಗ್ಗೆ ಶಾಘ್ಲಿಸಿದ ಅವರು, ಮ್ಯೂನಿಕ್ ನಗರದಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಪಸರಿಸಲು ಪ್ರಾಧಿಕಾರದ ಸಹಯೋಗವನ್ನು ಕೋರಿದರು.
Advertisement
ಭದ್ರತೆ, ಶಿಕ್ಷಣ, ಮಾಹಿತಿ, ಸಾಂಸ್ಕೃತಿಕ ವಿನಿಯಮ ವಿಚಾರಗಳಲ್ಲಿ ಕರ್ನಾಟಕ ಸರ್ಕಾರ ಮತ್ತು ಬವೇರಿಯಾ ಸರ್ಕಾರ ಯೋಚಿಸುವ ರೀತಿ ಒಂದೇ ತೆರನಾದ್ದಗಿರುತ್ತದೆ ಎಂದರು. ಸಿರಿಗನ್ನಡ ಕೂಟದ ಸದಸ್ಯರಾದ ರಶ್ಮಿ ನಾಗರಾಜ್ ಅವರು ಮಾತನಾಡಿ, ಮ್ಯೂನಿಕ್ ನಗರದಲ್ಲಿ ಕನ್ನಡ ಕಲಿಯಲು ಆಸಕ್ತಿ ಇರುವವರಿಗೆ ಕನ್ನಡ ಭಾಷೆಯನ್ನು ಕಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಗತ್ಯ ನೆರವನ್ನು ಒದಗಿಸಬೇಕೆಂದು ಮನವಿ ಮಾಡಿದರು.
Advertisement
ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು, ಮ್ಯೂನಿಕ್ ನಗರದಲ್ಲಿ ಕನ್ನಡ ಕಲಿಯಲು ಇಚ್ಛಿಸುವ ಮಂದಿಗೆ ಹಾಗೂ ಸಿರಿಗನ್ನಡ ಕೂಟದ ಕನ್ನಡ ಕಲಿ ನಲಿಯ ಶಿಕ್ಷಕರಿಗೆ ಪ್ರಾಧಿಕಾರದಿಂದ 2022 ಏಪ್ರಿಲ್ 3ರಂದು ಆನ್ಲೈನ್ ನಲ್ಲಿ ಕನ್ನಡ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಮತ್ತು ಬವೇರಿಯಾ ಸರ್ಕಾರದ ಮಧ್ಯೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ವೇದಿಕೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಧ್ಯಸ್ಥಿಕೆ ವಹಿಸಲಿದೆ. ಕರ್ನಾಟಕ ಸರ್ಕಾರ ಮತ್ತು ಬವೇರಿಯಾ ಸರ್ಕಾರದ ಮಧ್ಯೆ ಈ ಹಿಂದೆ ಒಡಂಬಡಿಕೆಯ ಅಂಶಗಳನ್ನು ಊರ್ಜಿತಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಹಾಗೂ ಕನ್ನಡ ಭಾಷೆಯನ್ನು ಕಲಿಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಬವೇರಿಯಾ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲು ಕ್ರಮ ವಹಿಸುವುದು. ಕನ್ನಡ ಭಾಷೆಯ ಆಯ್ಕೆಗೆ ಅಲ್ಲಿನ ಸರ್ಕಾರ ಅವಕಾಶ ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಟಿ.ಎಸ್.ನಾಗಾಭರಣ ಅವರು ತಿಳಿಸಿದರು. ಇದನ್ನೂ ಓದಿ: ಪಿಯಾನೋ ನುಡಿಸುತ್ತಾ ಹಾಡಲು ಪ್ರಯತ್ನಿಸುತ್ತಿರುವ ನಾಯಿ – ವೀಡಿಯೋ ಎಂಜಾಯ್ ಮಾಡುತ್ತಿರುವ ನೆಟ್ಟಿಗರು
ಇದಕ್ಕೆ ಕಾನ್ ಸುಲ್ ಅಧಿಕಾರಿಗಳಾದ ಡಾ.ಸುಯಶ್ ಚವ್ಹಾಣ್ ಅವರು ಒಪ್ಪಿಗೆ ಸೂಚಿಸಿದರು. ನಂತರ ವಿದೇಶದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ಸಿರಿಗನ್ನಡ ಕೂಟದ ಕಾರ್ಯ ಶಾಘ್ಲನೀಯವಾದ್ದು. ಈ ಕೂಟದ ಕಾರ್ಯಗಳು ಇತರೆ ದೇಶಗಳಲ್ಲಿರುವ ಕನ್ನಡ ಕೂಟಗಳಿಗೆ ಮಾದರಿಯಾಗಲಿ ಎಂದು ಹಾರೈಸಿದ ಪ್ರಾಧಿಕಾರದ ಅಧ್ಯಕ್ಷರು ಕನ್ನಡ ಸಂಸ್ಕøತಿಯನ್ನು ಅನ್ಯ ನೆಲೆದಲ್ಲಿ ಪಸರಿಸುವ ಕಾರ್ಯಕ್ಕೆ ಪ್ರಾಧಿಕಾರ ಅಗತ್ಯ ಸಹಕಾರ ಒದಗಿಸಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಿರಿಗನ್ನಡಕೂಟದ ಇತರೆ ಸದಸ್ಯರು ಹಾಜರಿದ್ದರು.