ಸೋಶಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಒಂದೊಂದು ವೀಡಿಯೋ ವೈರಲ್ ಆಗುತ್ತಿರುತ್ತೆ. ಅದರಲ್ಲಿಯೂ ಪ್ರಾಣಿಗಳ ತರಲೆ, ತಮಾಷೆ, ಮಾಲೀಕರ ಜೊತೆ ಸಾಕುಪ್ರಾಣಿಗಳು ನಡೆದುಕೊಳ್ಳುವ ರೀತಿ ಎಲ್ಲವನ್ನು ಜನರು ತುಂಬಾ ಆನಂದಿಸುತ್ತಾರೆ. ಅದೇ ರೀತಿ ನಾಯಿ ಪಿಯಾನೋ ನುಡಿಸುತ್ತ ಹಾಡಲು ಪ್ರಯತ್ನಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಆಕರ್ಷಿಸುತ್ತಿದೆ. ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.
ನಾಯಿಗಳ ಮತ್ತು ಸಾಕುಪ್ರಾಣಿಗಳ ಆಟೋಟಗಳು ಮಾಲೀಕರಿಗೆ ರಿಲ್ಯಾಕ್ಸ್ ಕೊಡುತ್ತೆ. ಸಾಕುಪ್ರಾಣಿಗಳು ಇದ್ರೆ ಅವುಗಳ ಆಟವನ್ನು ನೋಡಿಕೊಳ್ಲುತ್ತ ಮಾಲೀಕರು ಎಲ್ಲವನ್ನು ಮರೆಯುತ್ತಾರೆ. ಅದೇ ರೀತಿ ಇಲ್ಲೊಂದು ನಾಯಿ ಮನೆಯಲ್ಲಿ ಪಿಯಾನೋ ನುಡಿಸುತ್ತಿರುವ ದೃಶ್ಯವನ್ನು ಮಾಲೀಕರು ಫೋನ್ನಲ್ಲಿ ಚಿತ್ರಿಸಿದ್ದಾರೆ. ಈ ವೀಡಿಯೋವನ್ನು @dogsofinstagram ಶೇರ್ ಮಾಡಿಕೊಂಡಿದೆ. ವೀಡಿಯೋದಲ್ಲಿ ನಾಯಿ ಎರಡು ಕಾಲಿನ ಮೇಲೆ ನಿಂತುಕೊಂಡು ತನ್ನ ಇನ್ನೆರೆಡು ಕೈಗಳನ್ನು ಪಿಯಾನೋ ಮೇಲೆ ಇಟ್ಟು ಕೂಗುತ್ತಿದೆ. ಇದನ್ನೂ ಓದಿ: ಮೊದಲ ದಿನದಿಂದ ಗೆಲುವು ಸ್ಪಷ್ಟವಾಗಿದೆ: ಯುಪಿ ಡಿಸಿಎಂ ಸೋಲಿಸಿದ ಪಲ್ಲವಿ ಪಟೇಲ್
- Advertisement 2
View this post on Instagram
- Advertisement 3
ವೀಡಿಯೋ ಶೇರ್ ಮಾಡಿದ @dogsofinstagram, ನನ್ನ ನಾಯಿ ಸಾಂಗ್ ಹಾಡಲು ಮತ್ತು ಪಿಯಾನೋ ನುಡಿಸಲು ಇಷ್ಟಪಡುತ್ತೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಅದರಲ್ಲಿಯೂ ಈ ವೀಡಿಯೋದಲ್ಲಿ ನಾಯಿ ರಿಯಾಕ್ಷನ್ ಸಖತ್ ಆಗಿದೆ.
- Advertisement 4
ಈ ವೀಡಿಯೋಗೆ 50,000ಕ್ಕೂ ಹೆಚ್ಚು ಲೈಕ್ ಸಿಕ್ಕಿದೆ. ನಾಯಿಯ ಚೇಷ್ಟೆಗಳನ್ನು ಪ್ರೀತಿಸಿದ ನೆಟ್ಟಿಗರು ಸಂತೋಷಗೊಂಡಿದ್ದಾರೆ. ಶ್ವಾನ ಪ್ರೇಮಿಗಳು ಕಾಮೆಂಟ್ಗಳಲ್ಲಿ ಲವ್ ಎಮೋಜಿಗಳನ್ನು ಕಳುಹಿಸುತ್ತಿದ್ದಾರೆ. ಅದರಲ್ಲಿಯೂ ಕೆಲವರು, ಈ ಪ್ರತಿಭಾವಂತ ಕಲಾವಿದನ ಇಡೀ ವರ್ಷದ ಸಂಗೀತ ಕಚೇರಿ ಟಿಕೆಟ್ಗಳನ್ನು ಖರೀದಿಸಲು ನಾನು ಸಿದ್ಧ ಎಂದು ಕಾಮೆಂಟ್ ಮಾಡಿದರೆ ಇನ್ನೊಬ್ಬರು, ಇದು ಅತ್ಯುತ್ತಮವಾಗಿದೆ ಎಂದು ತಮಾಷೆ ಮಾಡಿದರು. ಇದನ್ನೂ ಓದಿ: ಡಾ.ಪುನೀತ್ ರಾಜ್ಕುಮಾರ್ ನೆನೆದು ಗುಣಗಾನ ಮಾಡಿದ ಪ್ರಿಯಾಂಕ್ ಖರ್ಗೆ
ಓಹ್ ನನ್ನ ಗುಡ್ನೆಸ್ ಇದು ತುಂಬಾ ಸ್ವೀಟ್ ವೀಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ. ನಾಯಿಯು ಮನೆಯ ಸಂಗೀತಗಾರನಾಗಿರುವ ಆ ಕ್ಷಣ… ಎಂದು ಬರೆದು ಕಾಮೆಂಟ್ ಮಾಡಿದ್ದು, ವೀಡಿಯೋ ನೆಟ್ಟಿಗರಿಗೆ ಸಖತ್ ಇಷ್ಟವಾಗುತ್ತಿದೆ.