ಹೊಸ ಹೀರೋಯಿನ್ ಕಾಲಿಟ್ಟರೆ ಕೊಂಚ ಹಳೇ ಹೀರೋಯಿನ್‌ಗೆ ಹೊಟ್ಟೆ ಕಿಚ್ಚು ಸಹಜ. ಅದೂ ಇಬ್ಬರು ಕನ್ನಡ ನಟಿಯರ ಮಧ್ಯೆ ಶುರುವಾಗಿದೆ. ಆದರೆ ಇಬ್ಬರೂ ಕನ್ನಡಕ್ಕಿಂತ ಟಾಲಿವುಡ್‌ನಲ್ಲಿ ಹೆಚ್ಚು ಫೇಮಸ್ಸು. ಒಬ್ಬರು ಪೂಜಾ ಹೆಗ್ಡೆ (Pooja Hegde). ಇನ್ನೊಬ್ಬರು ಶ್ರೀಲೀಲಾ. ಇದೀಗ ಇವರು ಇನ್ನಿಬ್ಬರು ಸ್ಟಾರ್ಸ್ ಜೊತೆ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶ್ರೀಲೀಲಾ (Sreeleela) ಕೂಡ ಕುಣಿಯುತ್ತಿದ್ದಾರೆ. ಅದಕ್ಕೇ ಹಳೆ ಹೀರೋಯಿನ್ ಪೂಜಾ ಮುಖ ಗಂಟು ಗಂಟು. ಏನಿದು ನಯಾ ಜಡೆ ಜಗಳ.?

ನಿನ್ನೆ ಮೊನ್ನೆ ಬಂದ ಶ್ರೀಲೀಲಾ ಏಕಾಏಕಿ ಪ್ರಿನ್ಸ್ ಹಾಗೂ ಪವರ್‌ಸ್ಟಾರ್ ಜೊತೆ ನಟಿಸೋದಾ? ನಾನು ನಟಿಸೋ ಸಿನಿಮಾದಲ್ಲಿ ಚೈಲ್ಡ್ ಲೀಲಾನಾ? ಇಬ್ಬರಲ್ಲಿ ಯಾರ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇದೆಯೋ? ಇದು ಪೂಜಾ ಅನುಮಾನದ ಹುತ್ತ. ಹೀಗಾಗಿಯೇ ಶ್ರೀಲೀಲಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಗುಂಟೂರು ಖಾರಂ ಸಿನಿಮಾದ ಪೋಸ್ಟರ್‌ಗೆ ಲೈಕ್ ಒತ್ತಿಲ್ಲ. ಕಾಮೆಂಟ್ಸ್ ಒಗೆದಿಲ್ಲ ಇನ್ನು ಶೇರ್ ಮಾಡುವ ಅಪರಾಧಕ್ಕೆ ಕೈ ಹಾಕುತ್ತಾರಾ? ಇದನ್ನು ನೋಡಿ ಜನರು ಜಡೆ ಜಗಳ ಸ್ಟಾರ್ಟು ಕಮ್ಮಿ ಅಗುತ್ತಾ ಹೀಟು ಎಂದು ಟ್ರೋಲಿಸುತ್ತಿದ್ದಾರೆ. ಇದೇ ಪೂಜಾ ಈ ಚಿತ್ರದ ಪೋಸ್ಟರ್ ಪ್ರಿನ್ಸ್ ಹಾಕಿದಾಗ ಶೇರ್ ಮಾಡಿದ್ದರು. ಶ್ರೀಲೀಲಾ ಹಾಕಿದಾಗ ಸೈಲೆಂಟ್ ಸನ್ಯಾಸಿನಿ.
ಇಬ್ಬರು ಹೀರೋಯಿನ್ಸ್ ನಡುವೆ ಜಗಳ, ಮುನಿಸು, ಕಿತ್ತಾಟ ಎಲ್ಲವೂ ಅನಾದಿ ಕಾಲದಿಂದ ಇಲ್ಲಿ ನಡೆದುಕೊಂಡು ಬಂದಿದೆ. ರಕ್ಷಿತಾ ಹಾಗೂ ರಮ್ಯಾ ಹೆಂಗೆ ನಾಲಿಗೆಯಲ್ಲಿ ಹೊಡೆದಾಡಿಕೊಂಡಿದ್ದರೆಂದು ಎಲ್ಲರಿಗೂ ಗೊತ್ತು. ಪೂಜಾ ಅಂಡ್ ಶ್ರೀಲೀಲಾ ಅದನ್ನು ಮುಂದುವರೆಸಿದ್ದಾರೆ. ಪೂಜಾ ನಟಿಸಿದ ಸಿನಿಮಾ ಸೋಲುತ್ತಿವೆ. ಶ್ರೀಲೀಲಾ ಚಿತ್ರ ಜಾಕ್‌ಪಾಟ್ ಹೊಡೆಯುತ್ತಿವೆ. ನನ್ನ ಅನ್ನಕ್ಕೆ ಎಲ್ಲಿ ಕೈ ಹಾಕಿ ತಿಂದು ತೇಗುತ್ತಾಳೋ ಲೀಲಾ ಅನ್ನೋದು ಪೂಜಾ ಸಂಕಟ. ನೀನು ಆಗ್ಲೇ ಬೋರ್ ಆಗಿದ್ದೀಯಾ, ಮದ್ವೆ ಮಕ್ಳು ಮಾಡ್ಕೊಂಡಿರು ಬಹುಶಃ ಇದು ಶ್ರೀಲೀಲಾ ಸವಾಲ್.
ಒಟ್ನಲ್ಲಿ ಶ್ರೀಲೀಲಾ ಎಂಟ್ರಿಯಿಂದ ರಶ್ಮಿಕಾ (Rashmika Mandanna), ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ (Kriti Shetty) ಅವಕಾಶಗಳು ಕಮ್ಮಿಯಾಗಿರೋದಂತೂ ನಿಜ. ಎಲ್ಲಾ ಸ್ಟಾರ್ ನಟರ ಸಿನಿಮಾಗಳು ಶ್ರೀಲೀಲಾ ಲಿಸ್ಟ್‌ಗೆ ಜಮಾ ಆಗುತ್ತಿರೋದು ನೋಡಿ ಈ ನಟಿಯರಿಗೆ ತಲೆನೋವಾಗಿದೆ.



