‘ಸಲಾರ್’ ಅಡ್ಡಾಗೆ ಎಂಟ್ರಿ ಕೊಟ್ಟ ಕನ್ನಡದ ನಟ ಸೌರವ್ ಲೋಕಿ

Public TV
1 Min Read
saurav loki

ಹುನಿರೀಕ್ಷಿತ ‘ಸಲಾರ್’ (Salaar) ಸಿನಿಮಾದಲ್ಲಿ ‘ಪ್ರೀಮಿಯರ್ ಪದ್ಮಿಯಿನಿ’ ಖ್ಯಾತಿಯ ಪ್ರಮೋದ್ (Pramod) ಎಂಟ್ರಿ ಬಳಿಕ ಇದೀಗ ಮತ್ತೊಬ್ಬ ಕನ್ನಡದ ನಟನ ಎಂಟ್ರಿಯಾಗಿದ್ದಾರೆ. ಪ್ರಭಾಸ್- ಪ್ರಶಾಂತ್ ನೀಲ್ ಕಾಂಬೋ ಸಿನಿಮಾಗೆ ಪ್ರತಿಭಾನ್ವಿತ ನಟ ಸೌರವ್ ಲೋಕಿ (Saurav Lokesh) ನಟಿಸಿದ್ದಾರೆ. ಈ ಮೂಲಕ ಭರ್ಜರಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

salara 2

ಕನ್ನಡದ ‘ಭಜರಂಗಿ’, ‘ಭಜರಂಗಿ 2’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಬಹುಮುಖ ಪ್ರತಿಭೆ ಸೌರವ್ ಲೋಕಿ ಅವರು ಇದೀಗ ಹೆಚ್ಚೆಚ್ಚು ಪರಭಾಷಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸ್ಟಾರ್ ನಟರ ಸಿನಿಮಾಗಳಿಗೆ ನಟಿಸಲು ಸೌರವ್ ಲೋಕಿಗೆ ಬಂಪರ್ ಆಫರ್ ಸಿಗುತ್ತಿದೆ.

saurav loki

ಈಗಾಗಲೇ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ನಟನೆಯ ‘ಆಚಾರ್ಯ’ ಸಿನಿಮಾದಲ್ಲಿ ಸೌರವ್ ನಟಿಸಿದ್ದರು. ಬಳಿಕ ಒಂದಿಷ್ಟು ತೆಲುಗು ಸಿನಿಮಾಗಳಿಗೆ ನಟ ಬಣ್ಣಹಚ್ಚಿದ್ದರು. ಈ ಪ್ರಭಾಸ್ ಮುಂದೆ ವಿಲನ್ ಆಗಿ ಘರ್ಜಿಸುವ ಅವಕಾಶ ಕನ್ನಡದ ನಟ ಸೌರವ್‌ಗೆ ಸಿಕ್ಕಿದೆ.

prabhas

ಪ್ರಶಾಂತ್ ನೀಲ್ (Prashanth Neel) ನಿರ್ದೇಶದ ‘ಸಲಾರ್’ ಸಿನಿಮಾದಲ್ಲಿ ಈಗಾಗಲೇ ಸೌರವ್ ಲೋಕಿ ನಟಿಸಿ ಬಂದಿದ್ದಾರೆ. ನೆಗೆಟಿವ್ ಶೇಡ್‌ಗಳಲ್ಲಿ ಸೌರವ್ ನಟಿಸಿ ಈಗಾಗಲೇ ಗಮನ ಸೆಳೆದಿದ್ದಾರೆ. ಸಲಾರ್‌ನಲ್ಲಿಯೂ ಪ್ರಭಾಸ್‌ಗೆ (Prabhas) ವಿಲನ್ ಆಗಿ ಟಕ್ಕರ್ ಕೊಟ್ಟಿದ್ದಾರೆ. ವಿಶೇಷ ಅಂದರೆ, ಸೌರವ್ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ಕೆಲ ದಿನಗಳ ಕಾಲ ನಡೆದಿದೆ. ಪ್ರಸ್ತುತ ಹೈದರಾಬಾದ್‌ನಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಸೌರವ್ ಲೋಕಿ ಕೂಡ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:‘ಕೆರಾಡಿ’ ಹೆಸರಿನಲ್ಲಿ ಹೊಸ ಉದ್ಯಮಕ್ಕೆ ರಿಷಬ್‌ ಶೆಟ್ಟಿ ಎಂಟ್ರಿ

sourav lokesh

‘ಸಲಾರ್’ ಪ್ರಾಜೆಕ್ಟ್ ಮಲ್ಟಿ ಸ್ಟಾರರ್ ಸಿನಿಮಾವಾಗಿದ್ದು, ಜಗಪತಿ ಬಾಬು, ಸುಕುಮಾರನ್ ಜೊತೆ ಪ್ರಮುಖ ಖಳನಾಯಕನಾಗಿ ಸೌರವ್ ಲೋಕಿ ನಟಿಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸೌರವ್ ಲೋಕಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

Share This Article