ಡಾ.ರಾಜ್‌ಕುಮಾರ್ ನಟನೆಯ ‘ಬೇಡರ ಕಣ್ಣಪ್ಪ’ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಹೊಸ ರೂಪದಲ್ಲಿ ‘ಭಕ್ತ ಕಣ್ಣಪ್ಪ’ ಸಿನಿಮಾವಾಗಿ ಮೂಡಿ ಬರಲಿದ್ದು, ಬಾಹುಬಲಿ ಪ್ರಭಾಸ್ (Prabhas) ಪ್ರಮುಖ ಪಾತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗಿತ್ತು. ಈ ಸಿನಿಮಾದಲ್ಲಿ ಪ್ರಭಾಸ್ ಶಿವನಾಗಿ ಕಾಣಿಸಿಕೊಳ್ಳಲಿದ್ಧಾರೆ.
ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ಶಿವನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡರೆ, ಪಾರ್ವತಿಯ ಪಾತ್ರಕ್ಕೆ ಕಂಗನಾ ರಣಾವತ್ (Kangana Ranaut) ಅವರನ್ನು ಆಯ್ಕೆ ಮಾಡಲಾಗಿದೆಯಂತೆ. 16 ವರ್ಷಗಳ ನಂತರ ಪ್ರಭಾಸ್ ಮತ್ತು ಕಂಗನಾ ಒಟ್ಟಾಗಿ ನಟಿಸಲಿದ್ದಾರೆ. ಈ ಹಿಂದೆ ಪ್ರಭಾಸ್ ನಟನೆಯ ಏಕ್ ನಿರಂಜನ್ ಹೆಸರಿನ ತೆಲುಗು ಚಿತ್ರದಲ್ಲಿ ನಟಿಸಿದ್ದರು.
1952ರಲ್ಲಿ ಡಾ.ರಾಜ್‌ಕುಮಾರ್ ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ನಟಿಸಿದ್ದರು. ಅಣ್ಣಾವ್ರು ಮಾಡಿದ್ದ ಪಾತ್ರವನ್ನೇ ಕೃಷ್ಣಂ ರಾಜು ಅವರು ನಟಿಸಿ ಸೈ ಎನಿಸಿಕೊಂಡಿದ್ದರು. ಈ ಸಿನಿಮಾ ಕೃಷ್ಣಂ ರಾಜು (Krishnam Raju) ಅವರ ವೃತ್ತಿರಂಗದಲ್ಲಿ ಬಿಗ್ ಬ್ರೇಕ್ ಕೊಟ್ಟಿತ್ತು. ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ಇದೇ ಸಿನಿಮಾವನ್ನು ಹೊಸ ವರ್ಷನ್‌ನಲ್ಲಿ ಪ್ರಭಾಸ್ ನಿರ್ಮಿಸುವ ಕನಸು ಅವರಿಗಿತ್ತು. ಆದರೆ ಕಳೆದ ವರ್ಷ ಅವರು ನಿಧನರಾದರು.
‘ಬೇಡರ ಕಣ್ಣಪ್ಪ’ (Bhakta Kannappa) ಸಿನಿಮಾವನ್ನು ಹೊಸ ರೂಪದಲ್ಲಿ ನಟ ಮಂಚು ವಿಷ್ಣು (Manchu Vishnu) ನಿರ್ಮಾಣ ಮಾಡುತ್ತಿದ್ದಾರೆ. ಕಣ್ಣಪ್ಪನ ಪಾತ್ರದಲ್ಲಿ ಮಂಚು ವಿಷ್ಣು ನಟಿಸುತ್ತಿದ್ದಾರೆ. 150 ಕೋಟಿ. ರೂ ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಆಗಲೇ ಹಲವಾರು ಕಂತುಗಳನ್ನು ಚಿತ್ರೀಕರಣ ಕೂಡ ಆಗಿದೆ.