ನವದೆಹಲಿ: ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸಂಸದೆಯೂ ಆಗಿರುವ ನಟಿ ಕಂಗನಾ ರಣಾವತ್ (Kangana Ranaut) ತಮ್ಮನ್ನು ಭೇಟಿ ಮಾಡಲು ಬಯಸುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ (Aadhaar Card) ತನ್ನಿ ಎಂದು ಹೇಳಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ಹೆಚ್ಚಿನ ಸಂಖ್ಯೆಯ ಪ್ರವಾಸಿಗರು (Tourists) ಹಾಗೂ ಹೊರಗಿನವರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ನಿಯಮ ಜಾರಿಗೊಳಿಸುತ್ತಿರುವುದಾಗಿ ಕಂಗನಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮಂಡಿ ಕ್ಷೇತ್ರದಲ್ಲಿದ್ದರೆ ನಿಯೋಜಿತವಾದ ಸಂವಾದ ಕೇಂದ್ರದಲ್ಲಿ ಸಂದರ್ಶಕರನ್ನ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
Advertisement
Advertisement
ಹಿಮಾಚಲ ಪ್ರದೇಶದ (Himachal Pradesh) ದೊಡ್ಡ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹೆಚ್ಚಿನ ಪ್ರವಾಸಿಗರು ಬರುವುದರಿಂದ ಕ್ಷೇತ್ರದ ಜನರಿಗೆ ಅನಾನುಕೂಲ ಆಗಬಹುದು. ಹಾಗಾಗಿ ಕ್ಷೇತ್ರದ ಜನ ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಕ್ಷೇತ್ರದ ಯಾವುದೇ ಕೆಲಸಕ್ಕೆ ಸಂಬಂಧಿಸಿದ ವಿವರವನ್ನು ಒಂದು ಪತ್ರದಲ್ಲಿ ಬರೆದುಕೊಡಬೇಕು. ಇದರಿಂದ ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದು ಸುಲಭವೂ ಆಗುತ್ತದೆ. ಜೊತೆಗೆ ಅನಾನುಕೂಲವಾಗದಂತೆ ಎಚ್ಚರ ವಹಿಸಬಹುದು ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ: ಅಪರ್ಣಾಗೆ ಇಷ್ಟು ಬೇಗ ಸಾವು ಪಟ್ ಅಂತ ಬರುತ್ತೆ ಎಂದು ಗೊತ್ತಿರಲಿಲ್ಲ: ಮಂಡ್ಯ ರಮೇಶ್
Advertisement
Advertisement
ಕಾಂಗ್ರೆಸ್ ಕಿಡಿ:
ಕಂಗನಾ ರಣಾವತ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಕಂಗನಾ ವಿರುದ್ಧ 2024ರ ಲೋಕಸಭಾ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್, ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಮಗೆ ಕುರಾನೇ ಮೊದಲ ಸಂವಿಧಾನ: ಸುಪ್ರೀಂ ತೀರ್ಪಿನ ಬಗ್ಗೆ ಮುಸ್ಲಿಂ ಮಹಿಳೆ ಪ್ರತಿಕ್ರಿಯೆ
ಜನರು ಜನಪ್ರತಿನಿಧಿಗಳನ್ನು ಭೇಟಿಯಾಗಲು ಬಯಸಿದರೆ, ಆಧಾರ್ ಕಾರ್ಡ್ ತರುವ ಅಗತ್ಯವಿಲ್ಲ. ಜನಪ್ರತಿನಿಧಿಗಳು ರಾಜ್ಯದ ಪ್ರತಿಯೊಂದು ವರ್ಗದ ಜನರನ್ನೂ ಭೇಟಿ ಮಾಡುವುದು ನಮ್ಮ ಜವಾಬ್ದಾರಿ. ಸಣ್ಣ ಕೆಲಸವಾಗಲಿ, ದೊಡ್ಡ ಕೆಲಸವಾಗಲಿ, ನೀತಿ ವಿಷಯವಾಗಲಿ ಅಥವಾ ವೈಯಕ್ತಿಕ ಕೆಲಸವಾಗಲಿ, ಯಾವುದೇ ಗುರುತಿನ ಚೀಟಿಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ – ಸಿಐಎಸ್ಎಫ್ ಅಧಿಕಾರಿಗೆ ಸ್ಪೈಸ್ಜೆಟ್ ಮಹಿಳಾ ಸಿಬ್ಬಂದಿಯಿಂದ ಕಪಾಳಮೋಕ್ಷ