ಕಮಲ್ ಹಾಸನ್ ರನ್ನು ಮೂರ್ಖರ ಪಟ್ಟಿಗೆ ಸೇರಿಸಿದ ‘ದಿ ಕೇರಳ ಸ್ಟೋರಿ’ ಡೈರೆಕ್ಟರ್

Public TV
1 Min Read
The Kerala Story 9

ಕೆಲ ದಿನಗಳ ಹಿಂದೆಯಷ್ಟೇ ನಟ ಕಮಲ್ ಹಾಸನ್ (Kamal Hanas) ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಮಾತನಾಡಿದ್ದರು. ಅದೊಂದು ಪ್ರೊಪೊಗಾಂಡ ಸಿನಿಮಾ. ಅಸತ್ಯವನ್ನು ಹೇಳುವಂಥದ್ದು ಎಂದು ಪ್ರತಿಕ್ರಿಯಿಸಿದ್ದರು. ಕಮಲ್ ಮಾತಿಗೆ ದಿ ಕೇರಳ ಸ್ಟೋರಿ (The Kerala Story) ನಿರ್ದೇಶಕ ಸುದೀಪ್ತೋ ಸೇನ್ ರಿಯ್ಯಾಕ್ಟ್ ಮಾಡಿದ್ದಾರೆ. ಕಮಲ್ ಹಾಸನ್ ಅವರನ್ನು ಮೂರ್ಖರ ಪಟ್ಟಿಗೆ ಸೇರಿಸಿದ್ದಾರೆ.

THE KERALA STORY 4

ಮಾಧ್ಯಮವೊಂದರಲ್ಲಿ ಮಾತನಾಡಿದ ಸುದೀಪ್ತೋ ಸೇನ್ (Sudipto Sen), ‘ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಮಾತನಾಡಿದಾಗ ಈವರೆಗೂ ನಾನು ವಿವರಣೆ ಕೊಡುವುದಕ್ಕೆ ಹೋಗುತ್ತಿದ್ದೆ. ಇತ್ತೀಚೆಗೆ ಅದನ್ನು ಬಿಟ್ಟುಬಿಟ್ಟಿದ್ದೇನೆ. ಕೆಲವರು ಮೂರ್ಖರು ಇರುತ್ತಾರೆ. ಅವರಿಗೆ ಇದೇ ಕೆಲಸ. ಯಾರೆಲ್ಲ ಸಿನಿಮಾವನ್ನು ಪ್ರೊಪೊಗಾಂಡ (Propoganda) ಎಂದು ಕರೆಯುತ್ತಾರೋ ಅವರು ಸಿನಿಮಾ ನೋಡಿಯೇ ಇಲ್ಲ. ಸಿನಿಮಾ ನೋಡಿದವರು ಹಾಗೆ ಹೇಳಿಲ್ಲ’ ಎಂದು ಅವರು ಮಾತನಾಡಿದ್ದಾರೆ.  ಇದನ್ನೂ ಓದಿ:ಅಂಬರೀಶ್ ಜನ್ಮದಿನಕ್ಕೆ ಸುಮಲತಾ ಅಂಬರೀಶ್ ಭಾವುಕ ಪತ್ರ

The Kerala Story 5

ಸಿನಿಮಾದಲ್ಲಿ ಸುಳ್ಳು ಹೇಳಿದ್ದರೆ, ಜನರು ನೋಡುತ್ತಲೇ ಇರಲಿಲ್ಲ. ಹೆಚ್ಚು ಸಂಖ್ಯೆಯಲ್ಲಿ ಜನರು ತಮ್ಮ ಚಿತ್ರವನ್ನು ನೋಡಿದ್ದಾರೆ. ನೋಡದೇ ಇರುವವರು ಮಾತನಾಡುತ್ತಾರೆ. ತಮಿಳು ನಾಡಿನಲ್ಲಿ ಸಿನಿಮಾ ರಿಲೀಸ್ ಆಗಿಲ್ಲ. ಹಾಗಾಗಿ ಕಮಲ್ ಹಾಸನ್ ಸಿನಿಮಾ ನೋಡಿಲ್ಲ. ನೋಡದೇ ಆ ರೀತಿ ಮಾತನಾಡುವುದು ತಪ್ಪು ಎಂದಿದ್ದಾರೆ ಸೇನ್.

The Kerala Story 2

ಅಬುಧಾಬಿಯಲ್ಲಿ ನಡೆಯುತ್ತಿರುವ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ್ದ ಕಮಲ್ ಹಾಸನ್, ‘ನಾನು ದಿ ಕೇರಳ ಸ್ಟೋರಿ ಸಿನಿಮಾವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕಾಗಿ ನನ್ನನ್ನೂ ವಿರೋಧಿಸಿದ್ದಾರೆ. ಸಿನಿಮಾದಲ್ಲಿ ಸತ್ಯ ಘಟನೆ ಆಧರಿಸಿದ ಸಿನಿಮಾ ಎಂದು ಹೇಳಿದರೆ ಸಾಲದು. ಅದರಲ್ಲಿ ಸತ್ಯ ಇರಬೇಕು’ ಎಂದು ಪ್ರತಿಕ್ರಿಯಿಸಿದ್ದರು.

Share This Article