ಎರಡು ದಿನಗಳ ಹಿಂದೆಯಷ್ಟೇ ‘ನಾನು ಎಂದಿಗೂ ರಜನಿಕಾಂತ್ ಅವರನ್ನು ದ್ವೇಷಿಸಿಲ್ಲ. ಅವರು ನನ್ನ ವೈರಿಯಲ್ಲ’ ಎಂದು ಕಮಲ್ ಹಾಸನ್ ಹೇಳಿದ ಬೆನ್ನೆಲ್ಲೇ, ರಜನಿ ಮನೆಗೆ ಕಮಲ್ ಹೋಗಿದ್ದಾರೆ. ಮನೆಗೆ ಬಂದ ಅತಿಥಿಯನ್ನು ಆತ್ಮೀಯವಾಗಿಯೇ ಬರಮಾಡಿಕೊಂಡಿದ್ದಾರೆ ರಜನಿ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ : ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ
ರಜನಿಕಾಂತ್ ಮತ್ತು ಕಮಲ್ ಹಾಸನ್ ಒಟ್ಟೊಟ್ಟಿಗೆ ಸಿನಿಮಾ ರಂಗದಲ್ಲಿ ಬದುಕು ಕಟ್ಟಿಕೊಂಡವರು. ಒಟ್ಟೊಟ್ಟಿಗೆ ಸಿನಿಮಾ ಮಾಡಿದವರು. ಒಂದೇ ದಿನಕ್ಕೆ ಇಬ್ಬರೂ ಸಿನಿಮಾಗಳನ್ನು ರಿಲೀಸ್ ಮಾಡಿ ತೊಡೆತಟ್ಟಿದವರು. ಹೀಗಾಗಿ ಇಬ್ಬರ ಫ್ಯಾನ್ಸ್ ಕೂಡ ಆಗಾಗ್ಗೆ ಫ್ಯಾನ್ಸ್ ವಾರ್ ಮಾಡಿದ್ದಿದೆ. ನಮ್ಮಿಬ್ಬರ ಮಧ್ಯೆ ವೈರತ್ವ ಇಲ್ಲವೆಂದು ಇಬ್ಬರೂ ಹೇಳಿಕೊಂಡರೂ, ಅಭಿಮಾನಿಗಳು ಮಾತ್ರ ಅದನ್ನು ನಂಬಲು ತಯಾರಿಲ್ಲ. ಇದನ್ನೂ ಓದಿ : ಒಟಿಟಿಯಲ್ಲೂ ರಾಜಮೌಳಿ ‘RRR’ ದಾಖಲೆ
ಸದ್ಯ ಕಮಲ್ ಹಾಸನ್ ನಟನೆಯ ‘ವಿಕ್ರಮ್ ‘ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ವಾರವೇ ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ರಜನಿಕಾಂತ್ ಮನೆಗೆ ಕಮಲ್ ಹಾಸನ್ ಭೇಟಿ ನೀಡಿದ್ದಾರೆ. ವಿಕ್ರಮ್ ಸಿನಿಮಾ ನೋಡುವಂತೆ ಆಹ್ವಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ರಜನಿ ಅಭಿಮಾನಿಗಳು ಕೂಡ ವಿಕ್ರಮ್ ಸಿನಿಮಾವನ್ನು ನೋಡಬಹುದು ಎನ್ನುವ ಅಂದಾಜಿದೆ. ಇದನ್ನೂ ಓದಿ : ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಸಿನಿಮಾ ಫಸ್ಟ್ ಲುಕ್ ರಿಲೀಸ್
ದಕ್ಷಿಣದಲ್ಲಿ ಕಮಲ್ ನಟನೆಯ ವಿಕ್ರಮ್ ಚಿತ್ರ ರಿಲೀಸ್ ಆಗುತ್ತಿದ್ದರೆ, ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಅವರ ಸಾಮ್ರಾಟ್ ಫೃಥ್ವಿರಾಜ್ ಸಿನಿಮಾ ಕೂಡ ತೆರೆಗೆ ಬರುತ್ತಿದೆ. ಆ ಸಿನಿಮಾ ಕೂಡ ನಿರೀಕ್ಷೆಯನ್ನು ಹೆಚ್ಚಿಸಿದೆ. ಹೀಗಾಗಿ ಸಹಜವಾಗಿಯೇ ಎರಡೂ ಚಿತ್ರಗಳ ಮಧ್ಯೆ ಪೈಪೋಟಿ ನಡೆಯಲಿದೆ. ಎರಡು ಸಿನಿಮಾಗಳಲ್ಲಿ ಪ್ರೇಕ್ಷಕ ಯಾರಿಗೆ ಒಲಿಯುತ್ತಾನೆ ಎನ್ನುವುದು ಸದ್ಯಕ್ಕಿರುವ ಕುತೂಹಲ.