CinemaDistrictsKarnatakaLatestMain PostSandalwood

ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಸಿನಿಮಾ ಫಸ್ಟ್ ಲುಕ್ ರಿಲೀಸ್

ಮುಂಗಾರು ಮಳೆ ಚಿತ್ರಖ್ಯಾತಿಯ ಸಿನಿಮಾಟೋಗ್ರಾಫರ್, ಪೈಲ್ವಾನ್ ಸಿನಿಮಾದ ನಿರ್ದೇಶಕ ಕೃಷ್ಣ ಅವರು ಅಭಿಷೇಕ್ ಅಂಬರೀಶ್ ಅವರಿಗಾಗಿ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಫಸ್ಟ್ ಲುಕ್ ಅನ್ನು ಅಂಬರೀಶ್ ಅವರ ಹುಟ್ಟು ಹಬ್ಬದಂದು ಬಿಡುಗಡೆ ಮಾಡಲಾಗಿದೆ. ಯಂಗ್ ರೆಬಲ್ ಸ್ಟಾರ್ ಫಸ್ಟ್ ಲುಕ್ ನಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ : ‘ವಿಕ್ರಾಂತ್ ರೋಣ’ ಸಿನಿಮಾ ನಟಿ ಜಾಕ್ವೆಲಿನ್ ಗೆ ವಿದೇಶಕ್ಕೆ ತೆರಳಲು ಅನುಮತಿ

ಸದ್ಯ ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಈ ನಡುವೆ ಅವರು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ.  ಇಂದು ಮಂಡ್ಯದ ಗಂಡು ಅಂಬರೀಶ್ ಅವರ ಹುಟ್ಟು ಹಬ್ಬ. ಈ ಹುಟ್ಟು ಹಬ್ಬಕ್ಕಾಗಿ ಕೃಷ್ಣ ಅವರು ತಮ್ಮ ಹೊಸ ಸಿನಿಮಾದ ನಾಯಕನ ಫಸ್ಟ್ ಲುಕ್ ರೆಡಿ ಮಾಡಿಸಿ, ಅಂಬರೀಶ್ ಅವರ ಪ್ರೀತಿಗಾಗಿ ಅದನ್ನು ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ : ‘ಮುದುಕನ ಲವ್ ಸ್ಟೋರಿ’ಗೆ ಕೆಜಿಎಫ್ ತಾತ ಕೃಷ್ಣರಾವ್ ಹೀರೋ

ಕಾವೇರಿ ನದಿ ನೀರಿನ ಹೋರಾಟದ ಹಿನ್ನೆಲೆಯಾಗಿಟ್ಟುಕೊಂಡು ಈ ಕಥೆಯನ್ನು ಬರೆದಿದ್ದಾರಂತೆ ಕೃಷ್ಣ. ಈ ಹೋರಾಟದ ದಿನಗಳಲ್ಲಿ ನಡೆದ ನೈಜ ಘಟನೆಯನ್ನೇ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ಲವ್ ಸ್ಟೋರಿ ಆಗಿದ್ದು, ಕಾವೇರಿ ಹೋರಾಟದ ಸಂದರ್ಭದಲ್ಲಿ ಈ ಪ್ರೇಮಿಗಳಿಗೆ ಆದ ತೊಂದರೆಯನ್ನು ಚಿತ್ರವಾಗಿ ಕಟ್ಟಿಕೊಡಲಿದ್ದಾರಂತೆ. ಇದನ್ನೂ ಓದಿ : ಅಪ್ಪು ಅಗಲಿ ಇಂದಿಗೆ 7 ತಿಂಗಳು : ಸಮಾಧಿ ಮುಂದೆ ಜನಸಾಗರ

ಸದ್ಯ ಸೂರಿ ನಿರ್ದೇಶನದ ಬ್ಯಾಡ್ ಮಾನರ್ಸ್ ಸಿನಿಮಾದ ಕೊನೆಯ ಹಂತದ ಶೂಟಿಂಗ್ ನಲ್ಲಿದ್ದಾರಂತೆ ಅಭಿಷೇಕ್. ಈ ಸಿನಿಮಾ ಮುಗಿಯುತ್ತಿದ್ದಂತೆಯೇ ಕಾಳಿ ಚಿತ್ರದ ಚಿತ್ರೀಕರಣದಲ್ಲಿ ಅವರು ಪಾಲ್ಗೊಳ್ಳಲಿದ್ದಾರಂತೆ.

Leave a Reply

Your email address will not be published.

Back to top button