ಯಶ್ ನಟನೆಯ ಕೆಜಿಎಫ್ ಚಾಪ್ಟರ್ ಒಂದು ಮತ್ತು ಕೆಜಿಎಫ್ 2 ಸಿನಿಮಾದಲ್ಲಿ ದೃಷ್ಟಿ ವಿಶೇಷಚೇತನ ಮುದುಕನಾಗಿ ಕಾಣಿಸಿಕೊಂಡು ಫೇಮಸ್ ಆಗಿದ್ದ ಹಿರಿಯ ನಟ ಕೃಷ್ಣ ಜಿ ರಾವ್ ಇದೀಗ ವಿಶೇಷ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಈ ಚಿತ್ರಕ್ಕೆ ಇವರೇ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಮುದುಕನ ಲವ್ ಸ್ಟೋರಿ’ ಎಂದು ಹೆಸರು ಇಡಲಾಗಿದೆ. ಇದನ್ನೂ ಓದಿ : ಅಪ್ಪು ಅಗಲಿ ಇಂದಿಗೆ 7 ತಿಂಗಳು : ಸಮಾಧಿ ಮುಂದೆ ಜನಸಾಗರ
Advertisement
ಕೆಜಿಎಫ್ ಸಿನಿಮಾದಲ್ಲಿ ಇವರದ್ದು ಪುಟ್ಟ ಪಾತ್ರವಾಗಿದ್ದರೂ, ವಿಶೇಷ ಸಂದರ್ಭದಲ್ಲಿ ಆ ಪಾತ್ರ ಕಾಣಿಸಿಕೊಂಡ ಕಾರಣಕ್ಕಾಗಿ ನೋಡುಗರ ಗಮನ ಸೆಳೆದಿತ್ತು. ಈ ಕಾರಣದಿಂದಾಗಿಯೇ ಈ ಇಳಿವಯಸ್ಸಿನಲ್ಲೂ ಅವರಿಗೆ ಹೀರೋ ಪಾತ್ರ ಒಲಿದು ಬಂದಿದೆ. ಈಗಾಗಲೇ ಈ ಸಿನಿಮಾದ ಸಂಪೂರ್ಣ ಶೂಟಿಂಗ್ ಕೂಡ ಮುಗಿದಿದೆ. ಇಂಥದ್ದೊಂದು ಸಿನಿಮಾ ಇವರಿಗೆ ಸಿಗುವುದಕ್ಕೆ ಕಾರಣ ಕೆಜಿಎಫ್ ಸಿನಿಮಾ ಎಂದಿದ್ದಾರೆ ಕೃಷ್ಣರಾವ್. ಇದನ್ನೂ ಓದಿ : ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್
Advertisement
Advertisement
ಕೆಜಿಎಫ್ 1 ಸಿನಿಮಾದ ನಂತರ ಈವರೆಗೂ ಅವರು ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರಂತೆ. ಕೆಜಿಎಫ್ 2 ರಿಲೀಸ್ ಆದ ನಂತರ ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವುದಾಗಿ ಹೇಳಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ, ಏನೂ ಸಂಪಾದನೆ ಮಾಡಲಿಲ್ಲ. ಪುಟ್ಟದೊಂದು ಪಾತ್ರ ಮಾಡುವ ಮೂಲಕ ಇದೀಗ ನೆಮ್ಮದಿ ಜೀವನ ನಡೆಸುವಂತಾಗಿದೆ ಎಂದಿದ್ದಾರೆ ಕೃಷ್ಣರಾವ್. ಇದನ್ನೂ ಓದಿ : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಸಾರಥಿ ಭಾ.ಮಾ. ಹರೀಶ್
Advertisement
ಮುದುಕನ ಲವ್ ಸ್ಟೋರಿ ಅದೊಂದು ಕಾಮಿಡಿ ಮಿಶ್ರಿತ ಸಿನಿಮಾವಾಗಿದ್ದು, ಮುದುಕನ ಮದುವೆ ಮಾಡಲು ಏನೆಲ್ಲ ತಾಪತ್ರೆಯಗಳು ಎದುರಾಗುತ್ತವೆ ಎನ್ನುವುದನ್ನು ತೋರಿಸಲು ಹೊರಟಿದ್ದಾರಂತೆ ನಿರ್ದೇಶಕರು. ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್ ಶುರುವಾಗಿ, ಸೆನ್ಸಾರ್ ಕೂಡ ಆಗಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.