ನಾಯಕ ನಟ ಉಪೇಂದ್ರ (Upendra), ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ನಟಿಸಿರುವ, ಆರ್ ಚಂದ್ರು (R. Chandru) ನಿರ್ದೇಶನದ ಕಬ್ಜ (Kabzaa) ಚಿತ್ರವು ದೋಹ ಕತಾರ್ ನಲ್ಲಿ (Qatar) ಕರ್ನಾಟಕ ಸಂಘ ಕತಾರ್ ಹಾಗೂ ಕೋರ್ಸಿಸ್ ಕನ್ನಡ ಮೂವೀಸ್ ಸಂಯೋಗದೊಂದಿಗೆ ಸ್ಪೆಷಲ್ ಶೋ ಆಯೋಜಿಸಿದರು. ಚಿತ್ರವು ಕತಾರ್ ನಲ್ಲಿ ಮೊಟ್ಟಮೊದಲ ಬಾರಿಗೆ 11 ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಪೂರ್ಣವಾಗಿ ಸ್ಕ್ರಿಪ್ಟ್, ಸ್ಕ್ರೀನ್ ಪ್ಲೇ, ಚಿತ್ರಕಥೆ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.
ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಕೇಕ್ ಕತ್ತರಿಸಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು. ವಿಶೇಷ ಪ್ರದರ್ಶನಕ್ಕೆ ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಮಹೇಶ್ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಶ್ರೀ ಪ್ರಭುರಾಜ್ ಅವರು ಏರ್ಪಡಿಸಿದ್ದರು.
ಶ್ರೀಯುತ ಮಹೇಶ್ ಗೌಡರವರ ಮಾತನಾಡಿ ಕಬ್ಜ ಚಿತ್ರವು 100ದಿನಗಳು ಸಸಿಯಾಗಿ ಸಾಗಲಿ ಎಂದು ಹಾರೈಸಿದರು, ಶ್ರೀಯುತ ಸುಬ್ರಮಣ್ಯ ಹೆಬ್ಬಾಗಿಲು ಅವರು ಮಾತನಾಡಿ ಕನ್ನಡ ಸಿನಿಮಾಗಳು ಕತಾರ್ ನಲ್ಲಿ ಇದೇ ರೀತಿ ಅದ್ದೂರಿಯಾಗಿ ತೆರೆ ಗೊಳ್ಳಲು ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅನೇಕ ಕನ್ನಡ ಚಿತ್ರ ಪ್ರೇಮಿಗಳು ಕಬ್ಜ 2 ಕ ಚಿತ್ರವು ಇನ್ನು ಅದ್ದೂರಿಯಾಗಿ ಬರುತ್ತಿರುವ ನಿರೀಕ್ಷೆಯಲ್ಲಿದ್ದಾರೆ.
ಕೆಜಿಎಫ್, ಕಾಂತಾರ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಬ್ಜ ಸಖತ್ ಸದ್ದು ಮಾಡುತ್ತಿದೆ. ಆರ್.ಚಂದ್ರು ಅವರ ಆಪ್ತರ ಮಾಹಿತಿಯಂತೆ, ಹಲವು ಸಿನಿಮಾ ರಂಗಗಳಿಂದ ಚಂದ್ರು ಅವರಿಗೆ ಆಫರ್ ಕೂಡ ಬರುತ್ತಿವೆಯಂತೆ. ಅದರಲ್ಲೂ ಬಾಲಿವುಡ್ ನ ಹೆಸರಾಂತ ಸಂಸ್ಥೆಯೊಂದು ಕಬ್ಜ ಸಿನಿಮಾ ವೀಕ್ಷಿಸಿದ ನಂತರ ಚಂದ್ರು ಅವರನ್ನು ಕಾಂಟ್ಯಾಕ್ಟ್ ಮಾಡಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಬ್ಜ ಸಿನಿಮಾ ರಿಲೀಸ್ ಆಗಿದ್ದು, ವೀಕೆಂಡ್ ನಲ್ಲಿ ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ ಎಂದು ವಿತರಕ ಮೋಹನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಮತ್ತಷ್ಟು ಪ್ರದರ್ಶನಗಳ ಬೇಡಿಕೆ ಬರುತ್ತಿದೆ ಎಂದು ಅವರು ಹೇಳಿದರು. ಕಳೆದ ಮೂರು ದಿನಗಳಿಂದ ಭಾರತದಾದ್ಯಂತ ಕಬ್ಜ ಕ್ರೇಜ್ ಕ್ರಿಯೇಟ್ ಮಾಡಿದ್ದು, ಕನ್ನಡದ ಮತ್ತೊಂದು ಚಿತ್ರ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ.