ಬೋಲ್ಡ್ ಫೋಟೋಗಳಿಂದ ಇನ್‌ಸ್ಟಾದಲ್ಲಿ ಕಿಚ್ಚು ಹಚ್ಚುವ ಮಾದಕ ಚೆಲುವೆ ಜ್ಯೋತಿ ರೈ. ಇದೀಗ ಹೊಸ ಫೋಟೋಗಳನ್ನ ಅಪ್‌ಲೋಡ್ ಮಾಡಿದ್ದು, ಪಡ್ಡೆಗಳ ನಿದ್ದೆ ಕದ್ದಿದ್ದಾರೆ.
ಸ್ಕಿನ್‌ಫಿಟ್ ಜೀನ್ಸ್ ಧರಿಸಿರುವ ಸಿಂಪಲ್ ಫೋಟೋಶೂಟ್ ಇದು. ಆದರೆ ಇದರಲ್ಲಿ ಜ್ಯೋತಿ ರೈ ಕ್ಯಾಪ್ಷನ್ ಹಾಕಿರುವುದೇ ಭಾರೀ ವಿಶೇಷ.
ಮತ್ತೊಂದು ಮಾದಕ ಫೋಟೋದೊಂದಿಗೆ ಬಂದ ಜ್ಯೋತಿ ರೈ ಕಾಮೆಂಟ್ಸ್ ಸೆಕ್ಷನ್ ಆಫ್ ಮಾಡಿದ್ದಾರೆ. ಒಂದ್ವೇಳೆ ಆನ್ ಇದ್ರೆ ಅದೆಂತೆಂಥಾ ಕಾಮೆಂಟ್ಸ್ ಬರ್ತಿದ್ದವೋ ಏನೋ. ಅಷ್ಟಕ್ಕೂ ಜ್ಯೋತಿ ರೈ ಫೋಟೋಗಿಂತ ಅವರು ಹಾಕಿರುವ ಕ್ಯಾಪ್ಷನ್ ಭಾರಿ ಚರ್ಚೆಯಾಗುತ್ತಿದೆ. ಯಾಕಂದ್ರೆ ಅವರು ಹೇಳಿರುವುದು ʻಹೊಂದಿಕೊಳ್ಳೋದಕ್ಕೆ ಇಲ್ಲಿ ಇಲ್ಲ, ಇನ್ನಷ್ಟು ಬೆಳೆಯೋದಕ್ಕೆʼ ಎಂದಿದ್ದಾರೆ.
ಒಳ್ಳೆಯ ರೀತಿಯಲ್ಲಿ ಯೋಚಿಸಿದ್ರೆ ಹೊಂದಿಕೊಂಡು ಹೋಗುವುದು ಯಾರಿಗೂ ಬೇಕಾಗಿಲ್ಲ, ಇನ್ನಷ್ಟು ಬೆಳೆಯಬೇಕು ಎಂದು ಅರ್ಥ ಮಾಡಿಕೊಳ್ಳಬಹುದು. ಅದೇನೇ ಇದ್ದರೂ ಇನ್‌ಸ್ಟಾದಲ್ಲಿ ಜ್ಯೋತಿ ರೈ ಪೋಸ್ಟ್‌ವೊಂದು ಬಂದಿದೆ. ಅಂದರೆ ಅದು ರೋಚಕತೆ ಹುಟ್ಟಿಸೋದ್ರಲ್ಲಿ ಮಿಸ್ ಆಗಲ್ಲ.