ಕೊಪ್ಪಳ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ (BJP) ಹೈಕಮಾಂಡ್ ನಾಯಕರ ದಂಡಯಾತ್ರೆ ಅಧಿಕೃತವಾಗಿ ಪ್ರಾರಂಭವಾಗಿದೆ. ಕೊಪ್ಪಳದಲ್ಲಿ (Koppal) ನಡೆದ ಬೃಹತ್ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಪಾಲ್ಗೊಂಡಿದ್ದಾರೆ. ಕೊಪ್ಪಳದಲ್ಲಿ ನಿಂತು ವರ್ಚುವಲ್ ಆಗಿ 10 ಜಿಲ್ಲೆಗಳ ಬಿಜೆಪಿ ಕಚೇರಿಯನ್ನು ಉದ್ಘಾಟಿಸಿದ್ದಾರೆ.
ಉದ್ಘಾಟನೆಯ ಬಳಿಕ ಮಾತನಾಡಿದ ನಡ್ಡಾ, ರಾಷ್ಟ್ರೀಯತೆಗಾಗಿ ರಚನೆಯಾದ ದೇಶದ ಏಕೈಕ ಪಕ್ಷ ನಮ್ಮದು. ರಾಷ್ಟ್ರೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಪರವಾದ ಗಾಳಿ ಬೀಸುತ್ತಿದೆ ಎಂದರು.
ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಅವರು, ಸಿದ್ದರಾಮಯ್ಯ ಏನು ಮಾಡಿದ್ದಾರೆ ಅದನ್ನು ಹೇಳಲು ಆಗುವುದಿಲ್ಲ. ಬರೀ ಜಾತಿ ಒಡೆಯೋ ಕೆಲಸ ಮಾಡಿದ್ದಾರೆ. ಡಿಕೆ ಶಿವಕುಮಾರ್ ದಿನಕ್ಕೊಂದು ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಬಗ್ಗೆ ಮತನಾಡೋಕೆ ಆಗದಷ್ಟು ಹಗರಣ ಇದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಕ್ಕಟ್ಟಿಗೆ ಮೂಲ ಕಾರಣವಾಗಿದ್ದ ವಿಷಯಕ್ಕೆ ತೆರೆ – ಕೊನೆಗೂ ಬಿಎಸ್‍ವೈಗೆ ಮಣಿದ ಸಿಎಂ
ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಂದು ಕಚೇರಿ ಉದ್ಘಾಟನೆಗೆ ಇಷ್ಟು ಸಂಖ್ಯೆಯಲ್ಲಿ ಜನ ಸೇರಿರುವುದು ಮುಂದಿನ ಬಾರಿಯೂ ಬಿಜೆಪಿ ಪರವಾದ ಗಾಳಿ ಬೀಸಿದೆ ಎಂದು ಅರ್ಥ. ಬಿಜೆಪಿಯಲ್ಲಿ ವಿಶ್ವಮಾನ್ಯ ನಾಯಕತ್ವ ಇದೆ. ಸದೃಢವಾದ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಪಕ್ಷ ನಮ್ಮದು ಎಂದು ಹಾಡಿ ಹೊಗಳಿದರು. ಇದನ್ನೂ ಓದಿ: ಉಗ್ರನನ್ನು ಉಗ್ರ ಎನ್ನದೇ ಡಿಕೆಶಿಯವರ ಹಾಗೆ ʼನಮ್ಮ ಬ್ರದರ್ಸ್ʼ ಎನ್ನಬೇಕಿತ್ತೇ – ಬಿಜೆಪಿ