BollywoodCinemaDistrictsKarnatakaLatestLeading NewsMain Post

ಪತ್ನಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದ ಹಾಲಿವುಡ್ ಸ್ಟಾರ್ ನಟ ಜಾನಿ ಡೆಪ್ : ನೂರಾರು ಕೋಟಿ ಪರಿಹಾರ

ಳೆದ ಆರು ವಾರಗಳಲ್ಲಿ ನೂರು ಗಂಟೆಗೂ ಹೆಚ್ಚು ಕಾಲ ನಡೆದ ಸಾಕ್ಷ್ಯದ ವಿಚಾರಣೆ ನಂತರ ಹಾಲಿವುಡ್ ಖ್ಯಾತ ನಟ ಜ್ಯೂರಿ ಜಾನಿ ಡೆಪ್ ತಮ್ಮ ಪತ್ನಿ ಅಂಬರ್ ಹರ್ಡ್ ವಿರುದ್ಧದ ಮಾನಹಾನಿ ಮೊಕದ್ದಮೆ ಕೇಸ್ ಗೆದ್ದಿದ್ದಾರೆ. ಈ ಮೂಲಕ ಸುದೀರ್ಘ ಕಾನೂನು ಹೋರಾಟ ಅಂತ್ಯವಾಗಿದೆ. ಇದನ್ನೂ ಓದಿ: ಸಿಧು ಮೂಸೆ ವಾಲಾ ಹತ್ಯೆ: ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲು

ತಮ್ಮ ಗೌರವನ್ನು ಧಕ್ಕೆ ತರುವಂತೆ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದಾರೆ ಎಂದು ಮಾಜಿ ಪತ್ನಿ ಅಂಬರ್ ಹರ್ಡ್ ವಿರುದ್ಧವೇ ಜಾನಿ ಡೆಪ್ ದೂರು ದಾಖಲಿಸಿದ್ದರು. ಹೀಗಾಗಿ ನ್ಯಾಯಾಧೀಶರು ಸುದೀರ್ಘ ವಿಚಾರಣೆ ನಂತರ ತೀರ್ಪು ನೀಡಿದ್ದು, ಅಂಬರ್ ಹರ್ಡ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದಷ್ಟೇ ಅಲ್ಲ, ಜಾನಿ ಡೆಪ್ ಗೆ ಪರಿಹಾರವಾಗಿ 10 ಮಿಲಿಯನ್ ಡಾಲರ್ ಮೊತ್ತ ಹಾಗೂ ದಂಡವಾಗಿ 5 ಮಿಲಿಯನ್ ಡಾಲರ್ ಹಣವನ್ನು ಪಾವತಿಸಲು ಆದೇಶಿಸಿದ್ದಾರೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಚಿತ್ರಕ್ಕೆ ಜೋಡಿಯಾಗಿ ಕರಾವಳಿ ನಟಿ ಫಿಕ್ಸ್

ಜಾನಿ ಡೆಪ್ ಮತ್ತು ಅಂಬರ್ ಹರ್ಡ್ ಇಬ್ಬರೂ ಹಾಲಿವುಡ್ ನ ಖ್ಯಾತ ತಾರಾ ಜೋಡಿ, ಮೊದ ಮೊದಲು ಪ್ರೀತಿಸುತ್ತಿದ್ದವರು ನಂತರ 2015ರಲ್ಲಿ ಮದುವೆಯಾದರು. ಮದುವೆಯಾಗಿ ಒಂದು ವರ್ಷವೂ ಸರಿಯಾಗಿ ಜೀವನ ನಡೆಸಲಿಲ್ಲ ವಿಚ್ಛೇದನ ಪಡೆದುಕೊಂಡು ದೂರವಾದರು. ಇದೇ ಸಮಯದಲ್ಲೇ ಜಾನಿ ವಿರುದ್ಧ ಮಾನಹಾನಿ ಆಗುವಂತೆ ಪತ್ರಿಕೆಯೊಂದರಲ್ಲಿ ಹರ್ಡ್ ಲೇಖನವೊಂದನ್ನು ಬರೆದಿದ್ದರು. ಅದು ಸಾಕಷ್ಟು ವೈರಲ್ ಕೂಡ ಆಗಿತ್ತು. ಇದನ್ನೂ ಓದಿ:ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಕ್ಲಾಸ್: ಅಷ್ಟಕ್ಕೂ ಆಗಿದ್ದೇನು?

ಈ ಪ್ರಕರಣದ ಕುರಿತು ನನಗೆ ನ್ಯಾಯ ಸಿಕ್ಕಿದೆ. ನ್ಯಾಯದ ಪರ ಗೆಲುವು ಎಂದು ಜಾನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರೆ, ಈ ತೀರ್ಪು ನನಗೆ ನಿರಾಸೆಯಾಗಿದೆ ಎಂದು ಹರ್ಡ್ ಬರೆದುಕೊಂಡಿದ್ದಾರೆ. ಮಹಿಳೆಯರಿಗೆ ಈ ತೀರ್ಪು ಸರಿಯಾದ ಸಂದೇಶ ರವಾಣಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published.

Back to top button