ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ `ಭೂಲ್ ಭುಲಯ್ಯ’ ಸಕ್ಸಸ್ ಖುಷಿಯಲ್ಲಿದ್ದಾರೆ. ಸಿನಿಮಾ ವಿಚಾರದ ಜೊತೆ ವಯಕ್ತಿಕ ವಿಚಾರವಾಗಿಯೂ ಕಿಯಾರಾ ಸುದ್ದಿಯಲ್ಲಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್ ಕುರಿತು ಹೊಸ ವಿಚಾರ ಇದೀಗ ಸೌಂಡ್ ಮಾಡುತ್ತಿದೆ.
Advertisement
ಬಿಟೌನ್‌ನಲ್ಲಿ ಸಿದ್ಧಾಥ್ ಮತ್ತು ಕಿಯಾರಾ ಲವ್ವಿ ಡವ್ವಿ ಬಗ್ಗೆ ಸಾಕಷ್ಟು ವಿಚಾರಗಳು ಈಗಾಗಲೇ ಹರಿದಾಡುತ್ತಾ ಇದೆ. ಬ್ರೇಕಪ್ ಮಾಡಿಕೊಂಡಿದ್ದ ಈ ಜೋಡಿ ಮತ್ತೆ ಒಂದಾಗಿದ್ದಾರೆ ಅನ್ನೋ ಸುದ್ದಿ ಕೂಡ ಇದೆ. ಈ ಬೆನ್ನಲ್ಲೇ ಕಿಯಾರಾಗೆ ಸಿದ್ಧಾರ್ಥ್ ಬೈತಾರಂತೆ ಅನ್ನೋ ವಿಚಾರವನ್ನ ನಿರ್ದೇಶಕ ಕಮಾಲ್ ಆರ್ ಖಾನ್ ಹೇಳಿದ್ದಾರೆ. ಇದನ್ನೂ ಓದಿ: ಜೂನ್ 3ಕ್ಕೆ ತೆರೆಮೇಲೆ ಸಂದೀಪ್ ಉನ್ನಿಕೃಷ್ಣನ್ ಜೀವನಚರಿತ್ರೆ
Advertisement
Advertisement
ಈಗ ಕಿಯಾರಾ ಮತ್ತು ಸಿದ್ಧಾರ್ಥ್ ಬಗ್ಗೆ ಮಾತನಾಡಿರುವ ನಿರ್ದೇಶಕ ಕಮಾಲ್ ಖಾನ್ ಸದಾ ವಿವಾದಗಳಿಂದ ಸುದ್ದಿ ಆಗುತ್ತಾರೆ. ಬೇರೆ ನಟ, ನಟಿಯರ ಬಗ್ಗೆ ಮಾತನಾಡಿ ಕಾಲೆಳೆಯುವ ಕೆಲಸ ಮಾಡುತ್ತಾರೆ. ಅಂತೆಯೇ ಈಗ ಕಮಾಲ್ ಆರ್ ಖಾನ್ ಈಗ ಕಿಯಾರಾ ತನ್ನ ಬಗ್ಗೆ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಲು ಕಾರಣ ಸಿದ್ಧಾರ್ಥ್ ಮಲ್ಹೋತ್ರ ಎಂದಿದ್ದಾರೆ. ಕಮಾಲ್ ಖಾನ್ ತಮ್ಮ ಜೀವನ ಚರಿತ್ರೆಯ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ. ಅಮಿತಾಬ್ ಬಚ್ಚನ್ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಕಮಾಲ್ ಖಾನ್‌ಗೆ ಶುಭಕೋರಿ ಕಿಯಾರಾ ಟ್ವೀಟ್ ಮಾಡಿದ್ದರು. ಆದರೆ 10 ನಿಮಿಷದಲ್ಲಿ ಈ ಟ್ವೀಟ್ ಡಿಲೀಟ್ ಮಾಡಿದ್ದಾರೆ.
Advertisement
Actress #KiaraAdvani did this tweet and deleted after 10 minutes. When I asked her reason? She said that @SidMalhotra got angry and asked her to delete the tweet. Yaar Sid Tu Itna Bada Nalla Kyon hai? Ladkiyon Ko Aage Karke Kyon Ladta Hai? Pahle Alia Ab Kiara. Mard Banna Seekh. pic.twitter.com/A4KF7ZXPBu
— KRK (@kamaalrkhan) May 30, 2022
ಕಿಯಾರಾ ಟ್ವೀಟ್ ಡಿಲೀಟ್ ಮಾಡಲು ಕಾರಣ ಏನು ಎಂದು ನಾನು ಕೇಳಿದೆ. ಆಗ ಕಿಯಾರಾ, ಸಿದ್‌ಗೆ ಕೋಪ ಬಂದಿದೆ. ಇದನ್ನು ಡಿಲೀಟ್ ಮಾಡಲು ಸಿದ್ಧಾರ್ಥ್ ಮಲ್ಹೋತ್ರಾ ಹೇಳಿದ್ದಾರೆ. ಈ ಮೂಲಕ ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಬೈಯುತ್ತಾರೆ ಎಂಬ ವಿಚಾರವನ್ನ ಕಮಲ್ ಖಾನ್ ತಿಳಿಸಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಈ ಸುದ್ದಿಯೇ ಜೋರಾಗಿದೆ.