ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್‌ನ ಹೊಸ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ಡ್ಯುಯೇಟ್ ಹಾಡಲು ಮಂಗಳೂರು ಬೆಡಗಿ ಪೂಜಾ ಹೆಗ್ಡೆ ರೆಡಿಯಾಗಿದ್ದಾರೆ.
Advertisement
ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ `ಅರ್ಜುನ್ ರೆಡ್ಡಿ’ ಸಿನಿಮಾ ಖ್ಯಾತಿಯ ವಿಜಯ್ ದೇವರಕೊಂಡ ಕಾಂಬಿನೇಶನ್‌ನ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ನಾಯಕಿಯ ಆಯ್ಕೆ ಆಗಿದೆ. ತುಳುನಾಡಿನ ಕುವರಿ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ.ಇದನ್ನೂ ಓದಿ:ಕಿಚ್ಚ ಸುದೀಪ್ ಅವರನ್ನ ಕಾಪಿ ಹೊಡೆದ ಸ್ಟಾರ್ ನಟ ಕಮಲ್ ಹಾಸನ್
Advertisement
Advertisement
ಇದೊಂದು ಆಕ್ಷನ್ ಕಥೆಯಾಗಿದ್ದು, ಜೂನ್ ಮೊದಲ ವಾರದಲ್ಲಿಯೇ ಈ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯಲಿದೆ. ಪೂಜಾ ಹೆಗ್ಡೆ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾವನ್ನು ಐದು ಭಾಷೆಯಲ್ಲಿ ರಿಲೀಸ್ ಮಾಡಲು ತಯಾರಿ ನಡೆಸಲಾಗುತ್ತಿದೆ.
Advertisement
ಪೂಜಾ ಹೆಗ್ಡೆ ಅವರಿಗೆ ಸಾಲು ಸಾಲು ಸಿನಿಮಾ ಸೋತಿದೆ. ಗೆಲುವಿಗಾಗಿ ಕಾಯುತ್ತಿರುವ ಪೂಜಾ ಈ ಚಿತ್ರದಲ್ಲಿಯಾದರೂ ಅವರು ಗೆಲುವು ಸಿಗಲಿದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಪದೇ ಪದೇ ಸೋಲು ಸಿಕ್ಕಿದ್ದಕ್ಕೆ ಪೂಜಾ ಹೆಗ್ಡೆ ಅವರಿಗೆ ಐರನ್ ಲೆಗ್ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಮುಂಬರುವ ಚಿತ್ರದ ಮೂಲಕ ಪೂಜಾ ಹೆಗ್ಡೆ ಅದೃಷ್ಟ ಖುಲಾಯಿಸುತ್ತಾ ಅಂತಾ ಕಾದು ನೋಡಬೇಕಿದೆ.