ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ ಮಣೆ ಹಾಕ್ತಿರಲಿಲ್ಲ. ಸೌತ್ ಚಿತ್ರಗಳನ್ನ ಅಲ್ಲಿನ ಕಲಾವಿದರನ್ನ ಬಾಲಿವುಡ್ ಮಂದಿ ಅಸಡ್ಡೆಯಿಂದ ನೋಡ್ತಿದ್ರು. ಈಗ ಭಾರತೀಯ ಚಿತ್ರರಂಗದ ಸ್ವರೂಪವೇ ಬದಲಾಗಿದೆ.
ದಕ್ಷಿಣದ ಸಿನಿಮಾಗಳನ್ನ ಬಿಟೌನ್‌ನಲ್ಲಿ ಅಪ್ಪಿ ಒಪ್ಪಿಕೊಳ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ `ಪುಷ್ಪ’ ಸಿನಿಮಾ, ಈಗೀಗ ದಕ್ಷಿಣ ಭಾರತದ ಸಿನಿಮಾಗಳಿಗೆ ಬಾಲಿವುಡ್ ಮನ್ನಣೆ ದೊರೆಯುತ್ತಿದೆ. ಸೌತ್ ಚಿತ್ರಗಳನ್ನ ಹಿಂದಿ ಸಿನಿಮಾ ರಸಿಕರು ಮುಗಿಬಿದ್ದು ನೋಡ್ತಿದ್ದಾರೆ. ಆದರೆ ಇತ್ತೀಚಿನ ಬಿಟೌನ್ ನಟ ಜಾನ್ ಅಬ್ರಹಾಂ ಕೊಟ್ಟಿರೋ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.
ಜಾನ್ ಅಬ್ರಾಹಾಂ ನಟನೆಯ ಅಟ್ಯಾಕ್ ಚಿತ್ರ ಏ.೧ರಂದು ತೆರೆಕಂಡಿತ್ತು. ಈ ಚಿತ್ರದ ಪ್ರಚಾರದ ವೇಳೆ ನಟ ಜಾನ್, ನಾನು ಎಂದೂ ತೆಲುಗು ಸಿನಿಮಾ ಮಾಡುವುದಿಲ್ಲ. ನಾನು ಬಾಲಿವುಡ್ ಹೀರೋ, ಬಿಸಿನೆಸ್ ಮಾಡುವ ಸಲುವಾಗಿ ತೆಲುಗು ಅಥವಾ ಪರಭಾಷಾ ಚಿತ್ರಗಳಲ್ಲಿ ನಟಿಸೋದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಜಾನ್ ನಟನೆಯ `ಅಟ್ಯಾಕ್’ ಸಿನಿಮಾ ಕಲೆಕ್ಷನ್‌ಗೆ ಪೆಟ್ಟು ಬಿದ್ದಿದೆ.
ಜಾನ್ ಅಬ್ರಾಹಾಂ ನಟನೆಯ `ಅಟ್ಯಾಕ್’ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ. ಚಿತ್ರದ ಮೊದಲ ದಿನದ ಕಲೆಕ್ಷನ್ ೩.೫ ಕೋಟಿ ಗಳಿಸಿ ಚಿತ್ರ ಸೋಲುವ ಲಕ್ಷಣ ಕಾಣುತ್ತಿದೆ. `ಅಟ್ಯಾಕ್’ ಚಿತ್ರಕ್ಕೆ ಪೈಪೋಟಿ ನೀಡುತ್ತಿರುವ ಚಿತ್ರ `ಆರ್‌ಆರ್‌ಆರ್’ ಈ ಚಿತ್ರವನ್ನ ಅಭಿಮಾನಿಗಳು ಮುಗಿಬಿದ್ದು ನೋಡ್ತಿದ್ದಾರೆ. ಇದನ್ನು ಓದಿ:ಜಾನ್ ಅಬ್ರಾಹಾಂ ಹೊಸ ಚಿತ್ರದಲ್ಲಿ ಬಿಟೌನ್ ಕಿಲಾಡಿ
Lol you talk about South cinema.
Telugu – Big budget
Malayalam – Strong content
Tamil – High action
Kanada – Unique concepts
Even if you want to act in south no one's gonna give you offer.#AttackMovie#RRR#Beast #JohnAbraham
— Git Life (@jonsnoww608) April 2, 2022
`ಆರ್‌ಆರ್‌ಆರ್’ ಚಿತ್ರದ ಎದುರು ಹೀನಾಯವಾಗಿ ಅಟ್ಯಾಕ್ ಸೋಲ್ತಿರೋದಕ್ಕೆ ನೆಟ್ಟಿಗರು ನಟ ಜಾನ್‌ರನ್ನ ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ. ತೆಲುಗಿನಲ್ಲಿ ಬಿಗ್ ಬಜೆಟ್ ಚಿತ್ರ, ತಮಿಳಿನಲ್ಲಿ ಹೈ ಒಲ್ಟೇಜ್ ಆಕ್ಷನ್, ಮಲೆಯಾಳಂನಲ್ಲಿ ಸೂಪರ್ ಕಂಟೆAಟ್, ಕನ್ನಡದಲ್ಲಿ ಭಿನ್ನ ಕಾನ್ಸೆಪ್ಟ್ ಇರುತ್ತದೆ. ಇಂತಹ ಚಿತ್ರಗಳಲ್ಲಿ ನಟಿಸಬೇಕು ಅಂದ್ರು ನಿಮಗೆ ಯಾರು ಅವಕಾಶ ಕೊಡಲ್ಲ ಅಂತಾ ಜಾನ್‌ಗೆ ನೆಟ್ಟಿಗರು ಲೆಫ್ಟು ರೈಟು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.