ಮುಂಬೈ: ನಿರೀಕ್ಷೆಯಂತೆ ಜಿಯೋದ ಪ್ರೈಮ್ ಮೆಂಬರ್‍ಶಿಪ್ ಡೆಡ್‍ಲೈನ್ ಅವಧಿ ವಿಸ್ತರಣೆಯಾಗಿದೆ. ಇದರ ಜೊತೆ ಹೊಸದಾಗಿರುವ ಸಮ್ಮರ್ ಸರ್‍ಪ್ರೈಸ್ ಆಫರನ್ನು ಜಿಯೋ ಪ್ರಕಟಿಸಿದೆ.
ಈ ಹಿಂದೆ ಏಪ್ರಿಲ್ ಒಂದರಿಂದ ಉಚಿತವಾಗಿ ಡೇಟಾ ನೀಡಲು ಸಾಧ್ಯವಿಲ್ಲ. ಆದರೆ ಕಡಿಮೆ ಬೆಲೆಯಲ್ಲಿ ಡೇಟಾ ಪಡೆಯಬೇಕಾದರೆ ಗ್ರಾಹಕರು 99 ರೂ. ನೀಡಿ ಮಾರ್ಚ್ 31ರ ಒಳಗಡೆ ಪ್ರೈಮ್ ಸದಸ್ಯರಾಗಬೇಕು. ಮಾರ್ಚ್ 31ರ ಒಳಗಡೆ ಸದಸ್ಯರಾದ ಗ್ರಾಹಕರಿಗೆ ಮಾತ್ರ ನಾವು ಕಡಿಮೆ ಬೆಲೆ ಡೇಟಾವನ್ನು ನೀಡುತ್ತೇವೆ ಎಂದು ಜಿಯೋ ತಿಳಿಸಿತ್ತು. ಆದರೆ ಈಗ ಈ ಡೆಡ್‍ಲೈನ್ ಅವಧಿ ಏಪ್ರಿಲ್ 15ರವರೆಗೆ ವಿಸ್ತರಣೆಯಾಗಿದೆ. ಹೀಗಾಗಿ ಯಾರೆಲ್ಲ 99 ರೂ. ನೀಡಿ ಪ್ರೈಮ್ ಸದಸ್ಯರಾಗಿಲ್ಲವೋ ಅವರು ಜಿಯೋ ಆ್ಯಪ್, ಜಿಯೋ ವೆಬ್‍ಸೈಟ್‍ಗೆ ಹೋಗಿ ರಿಚಾರ್ಜ್ ಮಾಡಿ ಸದಸ್ಯರಾಗಬಹುದು.
Advertisement
ಏನಿದು ಸಮ್ಮರ್ ಸರ್‍ಪ್ರೈಸ್ ಆಫರ್?
ಜಿಯೋ ಸಮ್ಮರ್ ಆಫರ್ ನಿಮಗೆ ಬೇಕಾದ್ರೆ ಮೊದಲು ನೀವು ಜಿಯೋದ ಯಾವ ಗ್ರಾಹಕರ ವಿಭಾಗದಲ್ಲಿ ಇದ್ದೀರಿ ಎನ್ನುವುದನ್ನು ತಿಳಿದುಕೊಳ್ಳಬೇಕು. ಜಿಯೋದಲ್ಲಿ ಸದ್ಯಕ್ಕೆ ಎರಡು ವರ್ಗದ ಗ್ರಾಹಕರಿದ್ದಾರೆ. ಒಂದನೇಯ ಗ್ರಾಹಕರು 99 ರೂ. ನೀಡಿ ಪ್ರೈಮ್ ಸದಸ್ಯರಾದವರು. 99 ರೂ. ನೀಡದೇ ಈಗಲೂ ಜಿಯೋ ಸೇವೆಯನ್ನು ಬಳಸುತ್ತಿರುವವರು ಎರಡನೇ ವರ್ಗದ ಗ್ರಾಹಕರು. ಹೀಗಾಗಿ ಜಿಯೋ ಸಮ್ಮರ್ ಆಫರ್ ಲಾಭ ನಿಮಗೆ ಬೇಕಿದ್ದಲ್ಲಿ ಮೊದಲು ನೀವು 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಬೇಕಾಗುತ್ತದೆ.
Advertisement
ಸಮ್ಮರ್ ಸರ್‍ಪ್ರೈಸ್ ಆಫರ್ ವಿಶೇಷತೆ ಏನು?
ಈ ಆಫರ್ ಲಾಭ ನಿಮಗೆ ಸಿಗಬೇಕಾದರೆ ನೀವು 303 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಬೇಕಾಗುತ್ತದೆ. ನೀವು ಯಾವ ಪ್ಯಾಕ್ ಹಾಕಿದ್ದೀರೋ ಆ ಪ್ಯಾಕ್‍ನ ಆಫರ್ ಮತ್ತೆ ಮೂರು ತಿಂಗಳು ವಿಸ್ತರಣೆಯಾಗುತ್ತದೆ. ಇದರ ಅರ್ಥ ನೀವು ಈಗ 303 ರೂಪಾಯಿ ಪ್ಯಾಕ್ ಹಾಕಿದ್ರೆ ಇದರಲ್ಲಿ ಈಗ ಪ್ರತಿ ದಿನ ನಿಮಗೆ ಗರಿಷ್ಠ ಒಂದು ಜಿಬಿ ಡೇಟಾದ ಜೊತೆ ಹೊರ ಹೋಗುವ ಎಲ್ಲ ಕರೆಗಳು ಮತ್ತು ಮೆಸೇಜ್ ಉಚಿತವಾಗಿ ಸಿಗುತ್ತದೆ. ಆದರೆ ಈ ಆಫರ್ ವ್ಯಾಲಿಡಿಟಿ 28 ದಿನಗಳು ಮಾತ್ರ ಇತ್ತು. ಆದರೆ ಈಗ ಈ ವ್ಯಾಲಿಡಿಟಿ ಅವಧಿ ಜೂನ್ 30ರವರೆಗೆ ವಿಸ್ತರಣೆಯಾಗಿದೆ.
Advertisement
ಇದನ್ನೂ ಓದಿ:ಎಷ್ಟು ರೂ. ರಿಚಾರ್ಜ್ ಮಾಡಿದ್ರೆ ಪ್ರೈಮ್ ಗ್ರಾಹಕರಿಗೆ ಎಷ್ಟು ಡೇಟಾ ಸಿಗುತ್ತೆ? ಉಳಿದ ಗ್ರಾಹಕರಿಗೆ ಎಷ್ಟು ಸಿಗುತ್ತೆ?
ಸಮ್ಮರ್ ಸರ್‍ಪ್ರೈಸ್ ಆಫರ್ ಲಾಭವೇ?
19 ರೂ. ನಿಂದ ಆರಂಭವಾಗಿ 149 ರೂ. ವರೆಗಿನ ಡೇಟಾ ರಿಚಾರ್ಜ್ ಮಾಡಿರುವ ಗ್ರಾಹಕರಿಗೆ ಈ ಆಫರ್ ಲಾಭ ಸಿಗುವುದಿಲ್ಲ. ನೀವು 149 ರೂ. ರಿಚಾರ್ಜ್ ಮಾಡಿದ್ರೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 2ಜಿಬಿ ಡೇಟಾ ಮಾತ್ರ ಸಿಗುತ್ತದೆ. ಅಷ್ಟೇ ಅಲ್ಲದೇ ಪ್ರತಿ ತಿಂಗಳು ನೀವು ರಿಚಾರ್ಜ್ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ನೀವು 301 ರೂ. ರಿಚಾರ್ಜ್ ಮಾಡಿದ್ದಲ್ಲಿ ಮೂರು ತಿಂಗಳ ಕಾಲ 101 ರೂ. ಬೆಲೆಯಲ್ಲಿ ಪ್ರತಿ ದಿನ 1 ಜಿಬಿ ಡೇಟಾವನ್ನು ಬಳಸಿದಂತೆ ಆಗುತ್ತದೆ. ಈಗಾಗಲೇ ಪ್ರೈಮ್ ಸದಸ್ಯರಿಗೆ ನೀಡಿದ ಡೇಟಾ ಪ್ಯಾಕ್‍ಗಳು ಜುಲೈ ತಿಂಗಳಿನಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಜಿಯೋ ಹೇಳಿದೆ.
Advertisement
ಮೊದಲ ಸರ್‍ಪ್ರೈಸ್ ಆಫರ್:
ಜಿಯೋ ಮುಂದೆ ಈ ರೀತಿಯ ಸಾಕಷ್ಟು ಸರ್‍ಪ್ರೈಸ್ ಆಫರ್‍ಗಳನ್ನು ನೀಡಲಿದೆ. ಇಂತಹ ಆಫರ್‍ಗಳ ಮೊದಲ ಆಫರ್ ಇದಾಗಿದೆ ಎಂದು ಜಿಯೋ ಹೇಳಿಕೊಂಡಿದೆ.
7.2 ಕೋಟಿ ಗ್ರಾಹಕರು:
ಒಂದು ತಿಂಗಳಿನಲ್ಲಿ 7.2 ಕೋಟಿ ಗ್ರಾಹಕರು ಪ್ರೈಮ್ ಸದಸ್ಯರಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆ ಗ್ರಾಹಕರು ಸೇರ್ಪಡೆಯಾಗಿರುವುದು ಇದೇ ಮೊದಲು. ದೇಶದಲ್ಲಿ ಈಗಾಗಲೇ 1 ಲಕ್ಷ ಮೊಬೈಲ್ ಟವರ್‍ಗಳನ್ನು ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ಹೊಸದಾಗಿ 1 ಲಕ್ಷ ಟವರ್‍ಗಳನ್ನು ಸ್ಥಾಪಿಸಲಾಗುವುದು. ವಿಶ್ವದಲ್ಲಿ ಅತಿ ದೊಡ್ಡ 4ಜಿ ಎಲ್‍ಟಿಇ ವೈರ್‍ಲೆಸ್ ಬ್ರಾಡ್‍ಬ್ಯಾಂಡ್ ಸೇವೆಯನ್ನು ನಾವು ನೀಡುತ್ತಿದ್ದೇವೆ. 2 ಲಕ್ಷ ಕೋಟಿ ರೂ. ಹಣವನ್ನು ಹೂಡಿದ್ದೇವೆ. ವಿಶ್ವದಲ್ಲಿ ಎಲ್ಲೂ ಈ ಕ್ಷೇತ್ರದಲ್ಲಿ ಇಷ್ಟೊಂದು ಮೊತ್ತ ಹೂಡಿಕೆಯಾಗಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಗೂಗಲ್ ಜೊತೆಗೂಡಿ ಕಡಿಮೆ ಬೆಲೆಯಲ್ಲಿ ಜಿಯೋದಿಂದ ಆಂಡ್ರಾಯ್ಡ್ ಫೋನ್!
ಹಿಯೋದ ಹಿಂದಿನ ಆಫರ್ ಹೇಗಿತ್ತು?
ಜಿಯೋ ಆರಂಭದಲ್ಲಿ ವೆಲಕಂ ಆಫರ್ ನೀಡಿತ್ತು, ಇದರಲ್ಲಿ ಗ್ರಾಹಕರು ಸೆಪ್ಟೆಂಬರ್‍ನಿಂದ ಡಿಸೆಂಬರ್ ವರೆಗೆ ಒಂದು ದಿನದಲ್ಲಿ ಎಷ್ಟು ಬೇಕಾದರೂ ಡೇಟಾವನ್ನು ಉಚಿತವಾಗಿ ಬಳಸಬಹುದಾಗಿತ್ತು. ಇದಾದ ಬಳಿಕ ಜನವರಿ ಒಂದರಿಂದ ಮಾರ್ಚ್ 31ರ ವರೆಗೆ ಹ್ಯಾಪಿ ನ್ಯೂ ಇಯರ್ ಆಫರ್ ಪ್ರಕಟಿಸಿತ್ತು. ಈ ಆಫರ್‍ನಲ್ಲಿ ಪ್ರತಿ ದಿನ ಗರಿಷ್ಠ 1 ಜಿಬಿ ಉಚಿತ ಡೇಟಾವನ್ನು ಬಳಸಬಹುದಾಗಿತ್ತು. ಈ ಡೇಟಾ ಖಾಲಿಯಾದ ಬಳಿಕ 128 ಕೆಬಿಪಿಎಸ್ ವೇಗಕ್ಕೆ ಇಳಿಯುತಿತ್ತು.
ಮತ್ತೆ ಪೈಪೋಟಿ?
ಜಿಯೋ ಆಫರ್‍ನಿಂದಾಗಿ ಟೆಲಿಕಾಂ ಕಂಪೆನಿಗಳು ಆಫರ್ ಪ್ರಕಟಿಸಿ ಸ್ಪರ್ಧೆಗೆ ಬಿದ್ದಿರುವುದು ಹಳೆ ಸುದ್ದಿ. ಈಗ ಜಿಯೋ 101 ರೂ. ನಲ್ಲಿ ಪ್ರತಿ ದಿನ ಗರಿಷ್ಠ 1ಜಿಬಿ ಡೇಟಾ ವನ್ನು ಮೂರು ತಿಂಗಳು ನೀಡುವುದಾಗಿ ಹೇಳಿದೆ. ಈ ಸರ್‍ಪ್ರೈಸ್ ಆಫರ್‍ಗೆ ಉಳಿದ ಟೆಲಿಕಾಂ ಕಂಪೆನಿಗಳು ಯಾವ ರೀತಿಯ ಆಫರ್ ಬಿಡುಗಡೆ ಮಾಡಲಿದೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.
ಇದನ್ನೂ ಓದಿ: ಡೇಟಾ ಸ್ಪೀಡ್ ಟೆಸ್ಟ್ ವಾರ್: ಏರ್‍ಟೆಲ್ ವಿರುದ್ಧ ಜಿಯೋ ದೂರು, ದೂರು ನೀಡಿದ್ದು ಯಾಕೆ? ಇಲ್ಲಿದೆ ಪೂರ್ಣ ಮಾಹಿತಿ