Connect with us

ಡೇಟಾ ಸ್ಪೀಡ್ ಟೆಸ್ಟ್ ವಾರ್: ಏರ್‍ಟೆಲ್ ವಿರುದ್ಧ ಜಿಯೋ ದೂರು, ದೂರು ನೀಡಿದ್ದು ಯಾಕೆ? ಇಲ್ಲಿದೆ ಪೂರ್ಣ ಮಾಹಿತಿ

ಡೇಟಾ ಸ್ಪೀಡ್ ಟೆಸ್ಟ್ ವಾರ್: ಏರ್‍ಟೆಲ್ ವಿರುದ್ಧ ಜಿಯೋ ದೂರು, ದೂರು ನೀಡಿದ್ದು ಯಾಕೆ? ಇಲ್ಲಿದೆ ಪೂರ್ಣ ಮಾಹಿತಿ

ನವದೆಹಲಿ: ರಿಲಯನ್ಸ್ ಜಿಯೋ ಮತ್ತು ಏರ್‍ಟೆಲ್ ಕಂಪೆನಿಗಳು ಡೇಟಾ ವಿಚಾರವಾಗಿ ಸ್ಪರ್ಧೆ ನಡೆಸುತ್ತಿರುವುದು ನಿಮಗೆ ಗೊತ್ತೇ ಇದೆ. ಈಗ ಈ ಸ್ಪರ್ಧೆ ಮತ್ತಷ್ಟು ಜೋರಾಗಿದ್ದು ತನ್ನ ವಿರುದ್ಧ ಏರ್‍ಟೆಲ್ ಜಾಹೀರಾತು ಪ್ರಕಟಿಸಿ ಗ್ರಾಹಕರಿಗೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿ ಜಿಯೋ ಈಗ ಭಾರತೀಯ ಜಾಹೀರಾತು ಗುಣಮಟ್ಟ ಮಾನದಂಡ ಮಂಡಳಿಗೆ(ಎಎಸ್‍ಸಿಐ) ದೂರು ನೀಡಿದೆ.

ತನ್ನ ದೂರಿನಲ್ಲಿ ಜಿಯೋ, ಏರ್‍ಟೆಲ್ ಓಕ್ಲಾ ಡೇಟಾ ಸ್ಪೀಡ್ ಆಪ್ ಟೆಸ್ಟ್ ನಲ್ಲಿ ಬಂದಿರುವ ಫಲಿತಾಂಶವನ್ನು ಆಧಾರಿಸಿ ದೇಶದಲ್ಲಿ ವೇಗದ ಇಂಟರ್‍ನೆಟ್ ಸಂಪರ್ಕವನ್ನು ನಾವು ನೀಡುತ್ತಿದ್ದೇವೆ ಎಂದು ಜಾಹೀರಾತು ಪ್ರಕಟಿಸಿ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದೆ. ಆದರೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮತ್ತು ಮೈ ಸ್ಪೀಡ್ ಅಪ್ಲಿಕೇಶನ್ ನಲ್ಲಿ ದೇಶದಲ್ಲಿ ವೇಗದ ಇಂಟರ್‍ನೆಟ್ ಸಂಪರ್ಕವನ್ನು ಜಿಯೋ ನೀಡುತ್ತಿದೆ ಎನ್ನುವ ಫಲಿತಾಂಶ ಬಂದಿದೆ. ಹೀಗಾಗಿ ಏರ್‍ಟೆಲ್ ನೀಡುತ್ತಿರುವ ಜಾಹೀರಾತು ಸುಳ್ಳಾಗಿದ್ದು, ಏರ್‍ಟೆಲ್ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಎಸ್‍ಸಿಐಯಲ್ಲಿ ಮನವಿ ಮಾಡಿದೆ.

ತಾನು ವೇಗದ ಇಂಟರ್‍ನೆಟ್ ಸೇವೆಯನ್ನು ನೀಡುತ್ತಿದ್ದೇನೆ ಎಂದು ದೃಢಪಡಿಸಲು ಜಿಯೋ ಎಎಸ್‍ಸಿಐಗೆ 12 ಯುಆರ್‍ಎಲ್‍ಗಳನ್ನು ನೀಡಿದೆ. ಅಷ್ಟೇ ಅಲ್ಲದೇ ಸುಳ್ಳು ಫಲಿತಾಂಶ ನೀಡಿದ್ದಕ್ಕೆ ಓಕ್ಲಾ ಕಂಪೆನಿಗೆ ಲೀಗಲ್ ನೋಟಿಸ್ ಕಳುಹಿಸಿದೆ.

ಜಿಯೋ ನೋಟಿಸ್ ಸಂಬಂಧ ಓಕ್ಲಾ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿ ಏರ್‍ಟೆಲ್ ಪರ ನಿಂತುಕೊಂಡಿದೆ. ಭಾರತದಲ್ಲಿ ನಾವು ಡ್ಯುಯಲ್ ಸಿಮ್, ನೆಟ್‍ವರ್ಕ್ ಟೆಕ್ನಾಲಜಿ, ವಿವಿಧ ಮೊಬೈಲ್‍ಗಳನ್ನು ಪರಿಗಣಿಸಿ ಡೇಟಾ ಸ್ಪೀಡ್ ಮಾಹಿತಿಯನ್ನು ನೀಡಿದ್ದೇವೆ ಎಂದು ತಿಳಿಸಿದೆ. ತನಗೆ ನೋಟಿಸ್ ನೀಡಿದ್ದಕ್ಕೆ ಓಕ್ಲಾ ಕಂಪೆನಿ ಈಗ ರಿಲಯನ್ಸ್ ಜಿಯೋಗೆ ನೋಟಿಸ್ ನೀಡಿದೆ.

ಜಿಯೋ ಸ್ಪೀಡ್ ಕಡಿಮೆ ಆಗುತ್ತಾ?
ಸಾಧಾರಣವಾಗಿ ಡ್ಯುಯಲ್ ಸಿಮ್ ಹೊಂದಿರುವ ಗ್ರಾಹಕರು ಜಿಯೋ ಸಿಮ್ ಅನ್ನು ಒಂದನೇ ಸ್ಲಾಟ್ ಮತ್ತು ಇನ್ನೊಂದು ಸಿಮ್ ಅನ್ನು ಎರಡನೇ ಸ್ಲಾಟ್‍ನಲ್ಲಿ ಹಾಕುತ್ತಾರೆ. ಒಂದು ವೇಳೆ ಎರಡನೇ ಸಿಮ್ ಸ್ಲಾಟ್‍ನಲ್ಲಿ ಜಿಯೋ ಸಿಮ್ ಹಾಕಿದ್ರೆ ಇಂಟರ್‍ನೆಟ್ ಸ್ಪೀಡ್ ಕಡಿಮೆ ಇರುತ್ತದೆ. ಹೀಗಾಗಿ ಯಾವುದೇ ಡೇಟಾ ಸ್ಪೀಡ್ ಟೆಸ್ಟ್ ಮಾಡುವ ಆಪ್‍ನಲ್ಲಿ ಚೆಕ್ ಮಾಡಿದ್ರೆ ಅದು ಮೊದಲ ಸ್ಲಾಟ್‍ನಲ್ಲಿರುವ ಕಂಪೆನಿ ನೀಡುವ ಇಂಟರ್‍ನೆಟ್ ಕಡಿಮೆ ಎಂದೇ ತೋರಿಸುತ್ತದೆ. ಈ ಕಾರಣಕ್ಕಾಗಿ ಜಿಯೋ ಸಿಮ್ ಖರೀದಿ ವೇಳೆ ವಿತರಕರು ಡ್ಯುಯಲ್ ಸಿಮ್ ಸೆಟ್ ಇದ್ದಲ್ಲಿ ಒಂದನೇ ಸ್ಲಾಟ್ ನಲ್ಲಿ ಜಿಯೋ ಸಿಮ್ ಹಾಕಿ ಎಂದು ಹೇಳುತ್ತಿದ್ದರು.

ಜಿಯೋ ಸೇವೆಯ ಆರಂಭಗೊಂಡ ದಿನಗಳಲ್ಲಿ ಡೇಟಾ ಸ್ಪೀಡ್ ಕಡಿಮೆ ಇತ್ತು. ಈ ವಿಚಾರವನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಒಪ್ಪಿಕೊಂಡಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಹಳಷ್ಟು ಸಂಖ್ಯೆಯ ಗ್ರಾಹಕರು ಜಿಯೋಗೆ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ವೇಗದಲ್ಲಿ ಡೇಟಾ ನೀಡಲು ಸಾಧ್ಯವಾಗುತ್ತಿಲ್ಲ, ಶೀಘ್ರದಲ್ಲೇ ಟವರ್‍ಗಳನ್ನು ಮತ್ತು ವೈಫೈ ಹಾಟ್‍ಸ್ಪಾಟ್‍ಗಳನ್ನು ಸ್ಪಾಪಿಸುವ ಮೂಲಕ ಸಮಸ್ಯೆಯನ್ನು ಪರಿಹಾರ ಮಾಡಲಾಗುವುದು ಎಂದು 2016ರ ಡಿಸೆಂಬರ್ 2 ರಂದು ಹೇಳಿದ್ದರು.

ಇದನ್ನೂ ಓದಿ:ಜಿಯೋ Vs ಬಿಎಸ್‍ಎನ್‍ಎಲ್: 339 ರೂ. ರಿಚಾರ್ಜ್ ಮಾಡಿದ್ರೆ ದಿನಕ್ಕೆ 2ಜಿಬಿ ಡೇಟಾ

ಆದರೆ ಇತ್ತಿಚಿಗೆ ಟ್ರಾಯ್ ಬಿಡುಗಡೆ ಮಾಡಿರುವ ಡೇಟಾ ಪ್ರಕಾರ ದೇಶದಲ್ಲಿ ವೇಗದ ಇಂಟರ್‍ನೆಟ್ ಸೇವೆ ನೀಡುವ ಕಂಪೆನಿಯಲ್ಲಿ ಜಿಯೋ ಮೊದಲ ಸ್ಥಾನದಲ್ಲಿದೆ. ಜನರು http://www.myspeed.trai.gov.in/  ಪೋರ್ಟಲ್ ಹೋಗಿ ಯಾವ ಟೆಲಿಕಾಂ ಕಂಪೆನಿ ಎಷ್ಟು ಎಂಬಿಪಿಎಸ್ ವೇಗದಲ್ಲಿ ಡೇಟಾ ನೀಡುತ್ತದೆ ಎನ್ನುವುದನ್ನು ಚೆಕ್ ಮಾಡಬಹುದು.

ಹೀಗಾಗಿ ಇಲ್ಲಿ ಟ್ರಾಯ್ ವೆಬ್‍ಸೈಟ್‍ನಲ್ಲಿ ಯಾವ ಕಂಪೆನಿಯ  ಎಷ್ಟು ವೇಗದಲ್ಲಿ ಡೇಟಾ ನೀಡುತ್ತಿದೆ ಎನ್ನುವ ಮಾಹಿತಿ, ಜಿಯೋ ಎಎಸ್‍ಸಿಐ ನೀಡಿ ದ ಯುಆರ್‍ಎಲ್ ವಿಡಿಯೋ, ಜೊತೆಗೆ ಏರ್‍ಟೆಲ್ ಜಾಹೀರಾತಿನ ಫೋಟೋವನ್ನು ನೀಡಲಾಗಿದೆ.

ಜಿಯೋಗೆ ಸಂಬಂಧಿಸಿದ  ಎಲ್ಲ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಜಿಯೋ

ಏರ್ ಟೆಲ್ ಜಾಹೀರಾತು

ಜಿಯೋ ಎಎಸ್‍ಸಿಐಗೆ ನೀಡಿದ ದೂರಿನ ಪ್ರತಿ

https://twitter.com/airtelindia/status/844099274363277312

ಜಿಯೋದ ಡೌನ್ ಲೋಡ್ ಸ್ಪೀಡ್ ಎಷ್ಟಿದೆ?

ಜಿಯೋದ ಅಪ್ಲೋಡ್ ಸ್ಪೀಡ್ ಎಷ್ಟಿದೆ?

Advertisement
Advertisement