ಗಾಂಧಿನಗರ: ತನ್ನಗಿಂತ ಹೆಚ್ಚು ಸುಂದರವಾಗಿದ್ದು, ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದ್ದಾಳೆ ಎಂಬ ಅಸೂಯೆಯಿಂದ ಸೆಕ್ಸ್ ವರ್ಕರ್ ಒಬ್ಬಳು ಮತ್ತೊಬ್ಬ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಗುಜರಾತಿನ ರಾಜ್‍ಕೋಟ್‍ನಲ್ಲಿ ನಡೆದಿದೆ.
ಚಂಪಾ(28) ಕೊಲೆಯಾದ ಮಹಿಳೆಯಾಗಿದ್ದು, ರೇಖಾ ಮ್ಯಾಂಗ್ರೋಲಿಯಾ (33) ಕೊಲೆ ಮಾಡಿದ ಆರೋಪಿಯಾಗಿದ್ದಾಳೆ. ಜೂನ್ 28 ರಂದು ಗೋಡಾಲ್ ಪೊಲೀಸ್ ಠಾಣೆಯ ಪೊಲೀಸರು ರೇಖಾರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
Advertisement
ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸರು, ಸುರೇಶ್ವರ್ ಚೌಕಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ ರೇಖಾ ತನ್ನ ನೆರೆಯ ಚಂಪಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಚಂಪಾ ತನಗಿಂತ ಸುಂದರವಾಗಿದ್ದು, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದ್ದಾಳೆ ಎಂಬ ಕೋಪದಿಂದ ಕೊಲೆ ಮಾಡಿದ್ದಾಗಿ ತಿಳಿಸಿದ್ದಾರೆ.
Advertisement
ಚಂಪಾ ಕೊಲೆಯಾದ ಬಳಿಕ ರೇಖಾ ನಾಪತ್ತೆಯಾದ ಕಾರಣ ನಾವು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ಈ ವೇಳೆ ರೇಖಾ ತನ್ನ ಕೃತ್ಯದ ಕುರಿತು ಬಾಯ್ಬಿಟ್ಟಿದ್ದಾಳೆ. ಕೊಲೆ ಮಾಡಿದ ಬಳಿಕ ಚಂಪಾ ಮುಖದ ಗುರುತು ತಿಳಿಯದಂತೆ ಮಾಡಲು ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾಗಿ ರೇಖಾ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಗಿ ಎಸ್‍ಪಿ ಜೆಬಿ ಮಿಥಾಪರ ಮಾಹಿತಿ ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv