ಬೆಂಗಳೂರು: ಅವರೊಂದು ನಿರ್ಧಾರ ಮಾಡಲಿ, ನಾವು ಎರಡು ನಿರ್ಧಾರ ಮಾಡುತ್ತೇವೆ. ಇದು ರೇವಣ್ಣ ಕುಟುಂಬದ ಹೊಸ ಸೂತ್ರನಾ? ಎಂಬ ಚರ್ಚೆ ನಡೆಯುತ್ತಿದೆ. ಹಾಸನ, ಅರಕಲಗೂಡು (Arakalagudu) ಟಿಕೆಟ್ ಯಾರಿಗೆ ಎಂದು ನಿರ್ಧಾರ ಮಾಡುವುದು ರೇವಣ್ಣನಾ (HD Revanna)? ಅರಸೀಕೆರೆ (Arsikere) ಟಿಕೆಟ್ ಯಾರಿಗೆ ಎಂದು ನಿರ್ಧಾರ ಮಾಡೋದು ಮಾಜಿ ಸಿಎಂ ಕುಮಾರಸ್ವಾಮಿನಾ (HD Kumaraswamy) ಎಂಬ ಕುತೂಹಲ ಗರಿಗೆದರಿದೆ.
Advertisement
ಹೆಚ್ಡಿಕೆಯ ಬ್ರಾಹ್ಮಣ ಸಿಎಂ ಬಾಂಬ್ ಕಿಡಿಯಲ್ಲೂ ಹಾಸನ ಸಿಂಹಾಸನ ಕದನ ಒಳಗೊಳಗೆ ಕೊತಕೊತ ಕುದಿಯುತ್ತಿದೆ. ಅರಕಲಗೂಡು ಕ್ಷೇತ್ರದಲ್ಲಿ ಎ.ಮಂಜುಗೆ ಟಿಕೆಟ್ ಕೊಡಲು ರೇವಣ್ಣ ಪುತ್ರರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಮ್ಮ ಮೇಲೆ ಕೇಸ್ ಹಾಕಿ ಹಾದಿ ಬೀದಿಯಲ್ಲಿ ಕೆಟ್ಟದಾಗಿ ಮಾತನಾಡಿದವರಿಗೆ ಟಿಕೆಟ್ ಬೇಡ, ಕುಮಾರಸ್ವಾಮಿ ಅವರು ಎರಡು ವಿಚಾರದಲ್ಲೂ ಆತುರವಾಗಿ ಮಾಧ್ಯಮಗಳಲ್ಲಿ ಘೋಷಣೆ ಮಾಡಿದ್ದಾರೆ. ಕುಟುಂಬದೊಳಗೆ ಕುಳಿತು ಚರ್ಚೆ ಮಾಡಿ ಆನಂತರ ಹೆಚ್ಡಿಕೆ ಮಾತನಾಡಬೇಕಿತ್ತು ಎಂಬುದು ರೇವಣ್ಣ ಪುತ್ರರ ಅಸಮಾಧಾನ ಎನ್ನಲಾಗಿದೆ. ಇದನ್ನೂ ಓದಿ: ಯುಪಿಎ ಅವಧಿಯದ್ದು ಭ್ರಷ್ಟಾಚಾರದ ದಶಕ, ನಮ್ಮದು ಭಾರತದ ದಶಕ: ನರೇಂದ್ರ ಮೋದಿ
Advertisement
Advertisement
ಈ ನಡುವೆ ಹಾಸನ (Hassan) ಸ್ಪರ್ಧೆ ವಿಚಾರದಲ್ಲೂ ಭವಾನಿ ರೇವಣ್ಣ ಸ್ಪರ್ಧೆ ಅನಿವಾರ್ಯತೆ ಇಲ್ಲ ಎಂದು ಹೆಚ್ಡಿಕೆ ಎಂದಿದ್ದರು. ಅರಕಲಗೂಡು ಕ್ಷೇತ್ರದಿಂದ ಎ.ಮಂಜುಗೆ ಟಿಕೆಟ್ ಕೊಡುತ್ತೇವೆ ಎಂದು ಘೋಷಿಸಿದ್ದರು. ಈ ಎರಡು ಘೋಷಣೆಗಳ ಬಗ್ಗೆ ರೇವಣ್ಣ ಕುಟುಂಬದಲ್ಲಿ ಆಂತರಿಕ ಅಸಮಾಧಾನ ಇದೆ ಎನ್ನಲಾಗುತ್ತಿದೆ. ಹೀಗಾಗಿ ಎರಡು ಕ್ಷೇತ್ರಗಳ ನಿರ್ಧಾರವನ್ನು ರೇವಣ್ಣ ಅವರೇ ಮಾಡಲಿ ಎಂಬ ಒತ್ತಡ, ಅರಸೀಕೆರೆ ವಿಚಾರದಲ್ಲಿ ಕುಮಾರಸ್ವಾಮಿ ಬೇಕಾದರೆ ನಿರ್ಧಾರ ಮಾಡಿಕೊಳ್ಳಲಿ ಎಂಬ ಸೂತ್ರ ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.
Advertisement
ಹೀಗಾದರೆ ಹಾಸನ ಜಿಲ್ಲೆಯ ಜೆಡಿಎಸ್ ಟಿಕೆಟ್ ಗೊಂದಲ ಅಧಿವೇಶನಕ್ಕೂ ಮುನ್ನ ಬಗೆಹರಿಯುತ್ತಾ? ಯಾರ ಸೂತ್ರಕ್ಕೆ ಜಯ ಸಿಗುತ್ತದೆ? ಎಂಬುದಕ್ಕೆ ಈ ತಿಂಗಳ ಅಂತ್ಯದಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಇದನ್ನೂ ಓದಿ: ಹೆಚ್ಡಿಕೆ ಜಾತಿ ಅಸ್ತ್ರಗಳಿಗೆ ಸಾಮ್ರಾಟ್ ಸಾಫ್ಟ್ ರಾಗ – ಅಶೋಕ್ ನಡೆಗೆ ಪಕ್ಷದಲ್ಲೇ ಆಕ್ಷೇಪ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k