ಮಂಡ್ಯ: ಜೆಡಿಎಸ್ (JDS) ಭದ್ರಕೋಟೆ ಕೆ.ಆರ್.ಪೇಟೆಯಲ್ಲಿ (K.R.Pet) ದಳಪತಿಗಳಿಗೆ ಮಾಸ್ಟರ್ ಸ್ಟ್ರೋಕ್ ಗ್ಯಾರಂಟಿ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಟಕ್ಕರ್ ಕೊಡಲು ಅತೃಪ್ತರು ಸಿದ್ಧತೆ ನಡೆಸಿದ್ದಾರೆ.
ಹೆಚ್.ಟಿ.ಮಂಜು ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಹೆಚ್.ಡಿ.ರೇವಣ್ಣ (H.D.Revanna) ಬೆಂಬಲಿಗರಾದ ದೇವರಾಜ ಮತ್ತು ತಂಡದವರು ಅಸಮಾಧಾನಗೊಂಡಿದ್ದಾರೆ. ಕಳೆದ ಉಪಚುನಾವಣೆಯ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಎಲ್.ದೇವರಾಜು (B.L.Devaraj) ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಇದೆ. ಇದನ್ನೂ ಓದಿ: Exit Polls: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿಗೆ ಅಧಿಕಾರ – ಮೇಘಾಲಯದಲ್ಲಿ 3ನೇ ಸ್ಥಾನ
Advertisement
Advertisement
ಶತ್ರುಗಳ ಜೊತೆ ಸೇರಿ ಜೆಡಿಎಸ್ ಹಣಿಯಲು ದೇವರಾಜು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಬಂಡಾಯ ಸಭೆ ನಡೆಸಿ ಅಭ್ಯರ್ಥಿ ಬದಲಾವಣೆಗೆ ಒತ್ತಾಯಿಸಿದರೂ ವರಿಷ್ಠರಿಂದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಸೋಲಿಸಲು ಭಿನ್ನಮತೀಯರು ಕಾಂಗ್ರೆಸ್ ಕದ ತಟ್ಟಲಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಇದಕ್ಕೆ ಸಂಬಂಧಿಸಿದಂತೆ ಮಾ.1ರಂದು ದೇವರಾಜು ಅವರು ಬೆಂಬಲಿಗರು, ಹಿತೈಷಿಗಳ ತುರ್ತು ಸಭೆ ಕರೆದಿದ್ದಾರೆ. ಅಂದೇ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆಯೂ ಸಹಸ್ರಾರು ಸಂಖ್ಯೆಯ ಬೆಂಬಲಿಗರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿದ್ದರು. ಆದರೂ ಭಿನ್ನಮತೀಯರ ಜೊತೆ ಸಂಧಾನಕ್ಕೆ ಜೆಡಿಎಸ್ ವರಿಷ್ಠರು ಬರಲಿಲ್ಲ. ಹೀಗಾಗಿ ದೇವರಾಜು ಸಭೆ ನಡೆಸಿ ನಿರ್ಧಾರ ಪ್ರಕಟಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: 5 ದಿನ ಸಿಸೋಡಿಯಾ CBI ವಶಕ್ಕೆ
Advertisement
ಪ್ರತಿಷ್ಠೆಗೆ ಬಿದ್ದು ಬಂಡಾಯ ಮುಖಂಡರ ಮನವೊಲಿಸಲು ಮಾಜಿ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿಲ್ಲ. ಹೀಗಾಗಿ ಜೆಡಿಎಸ್ ನಾಯಕರ ಕಡೆಗಣನೆಗೆ ಬೇಸತ್ತು ದೇವರಾಜು ಮತ್ತು ತಂಡದವರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.