ನವದೆಹಲಿ: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೇಘಾಲಯದಲ್ಲಿ ಮೂರನೇ ಸ್ಥಾನ ಗಳಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.
ನಾಗಾಲ್ಯಾಂಡ್, ಮೇಘಾಲಯಗಳಲ್ಲಿ ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಷ್ಟ್ರೀಯ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿವೆ. ಸಮೀಕ್ಷೆಗಳ ಪೈಕಿ ಎರಡು ಸಮೀಕ್ಷೆಗಳು ಬಿಜೆಪಿಗೆ ಪೂರ್ಣ ಬಹುಮತ ಬರಲಿದೆ ಎಂದು ತಿಳಿಸಿದರೆ ಒಂದು ಸಮೀಕ್ಷೆ ಮಾತ್ರ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದಿದೆ.
Advertisement
ಮೂರು ರಾಜ್ಯಗಳಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 31 ಸ್ಥಾನ ಗಳಿಸಬೇಕಾಗುತ್ತದೆ. ಮಾರ್ಚ್ 2 ರಂದು ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಕರ್ನಾಟಕಕ್ಕೆ ಅವಮಾನ, ಖರ್ಗೆಗೆ ಛತ್ರಿಯೇ ಸಿಗಲಿಲ್ಲ: ಮೋದಿ
Advertisement
Advertisement
ನಾಗಾಲ್ಯಾಂಡ್
ಒಟ್ಟು ಸ್ಥಾನ : 60
ಮ್ಯಾಜಿಕ್ ಸಂಖ್ಯೆ:31
ಬಿಜೆಪಿ+ 42, ಎನ್‌ಪಿಎಫ್ 6, ಕಾಂಗ್ರೆಸ್ 1
Advertisement
ತ್ರಿಪುರ
ಒಟ್ಟು ಸ್ಥಾನ 60
ಮ್ಯಾಜಿಕ್ ಸಂಖ್ಯೆ :31
ಬಿಜೆಪಿ +32, ಎಡ ಪಕ್ಷ 15, ಟಿಐಪಿಆರ್‌ಎ 12
ಮೇಘಾಲಯ
ಒಟ್ಟು ಸ್ಥಾನ 60
ಮ್ಯಾಜಿಕ್ ಸಂಖ್ಯೆ 31
ಎನ್‌ಪಿಪಿ 20, ಟಿಎಂಸಿ 11, ಬಿಜೆಪಿ 6