ಬೆಂಗಳೂರು: ಈ ಬಾರಿ ವಿಧಾನಸಭೆಯಲ್ಲಿ ಜೆಡಿಎಸ್‌ಗೆ (JDS) ಸೋಲು ಆಗಿದ್ದು ಮುಸ್ಲಿಂ ಮತಗಳಿಂದ (Muslim Vote) ಅಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಮುಸ್ಲಿಮರಿಂದ ಜೆಡಿಎಸ್‌ಗೆ ಸೋಲು ಆಗಿಲ್ಲ. ಈ ಬಾರಿ ಹಳ್ಳಿಗಾಡಿನ ಜನ ಜೆಡಿಎಸ್ ಬಿಟ್ಟು ಹೋದರು. ಕಳೆದ ಬಾರಿ 38 ಸೀಟು ಬಂದಿದ್ದಾಗ ಒಂದು ಮುಸ್ಲಿಂ ವೋಟ್ ಬಂದಿರಲಿಲ್ಲ. ಈಗ 13% ಮುಸ್ಲಿಂ ವೋಟ್ ಬಂದಿದ್ದರು 19 ಸೀಟು ಮಾತ್ರ ಬಂದಿದೆ. ಹಾಗಾದರೆ 20 ಸೀಟು ಯಾವುವು? ಯಾವ ವೋಟ್ ಜೆಡಿಎಸ್ ಬಿಟ್ಟು ಹೋಯ್ತು? ಇದರ ಬಗ್ಗೆ ಚರ್ಚೆ ಆಗಬೇಕು ಎಂದರು.
Advertisement
Advertisement
ಕಳೆದ ಬಾರಿ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ 22 ಸಾವಿರ ವೋಟ್‌ನಿಂದ ಗೆದ್ದಿದ್ದರು. ಒಂದೇ ಒಂದು ಮುಸ್ಲಿಮರ ವೋಟ್ ಬಿದ್ದಿರಲಿಲ್ಲ. ಈ ಬಾರಿ ನಿಖಿಲ್‌ಗೆ 3400 ಮುಸ್ಲಿಮರ ವೋಟ್ ಬಿದ್ದಿದ್ದರೂ ಸೋತಿದ್ದಾರೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗ್ರಾಮಾಂತರದಲ್ಲಿ ಕಡಿಮೆ ಆದಾಗ ನಗರದಲ್ಲಿ ಕೊಟ್ಟಿದ್ದಾರೆ. ಕೆಲವು ಬಾರಿ ಸಮುದಾಯದವರು ಮತ ಕೊಡ್ತಾರೆ. ದಲಿತರು, ಕುರುಬರು ಕೊಟ್ಟಿಲ್ಲ. ಇದನ್ನು ಹೇಳೋದು ಸರಿಯಲ್ಲ. ಬಿಟ್ಟು ಹೋದ ಮತ ಹೇಗೆ ವಾಪಸ್ ಪಡೆಯಬೇಕು ಎಂಬುದನ್ನು ನೋಡಬೇಕು ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮೂರನೇ ಪರ್ಯಾಯ ಶಕ್ತಿ ಸ್ಥಾಪನೆಗೆ ಮುಸ್ಲಿಂ ಸಂಘಗಳ ಪ್ರವಾಸ- ಸಿಎಂ ಇಬ್ರಾಹಿಂ
Advertisement
Advertisement
ಈಗ ಜನ ಕಾಂಗ್ರೆಸ್‌ಗೆ ಮತ ಕೊಟ್ಟು ಪಶ್ಚಾತ್ತಾಪ ಪಡುತ್ತಿದ್ದಾರೆ. ಡಿಕೆ ಶಿವಕುಮಾರ್ ನೋಡಿ ಮತ ಕೊಟ್ಟರು. ಈಗ ನಂಬಿಕೆ ದ್ರೋಹ ಆಗಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಅವರಿಗೇ ಗೊತ್ತಿರಲಿಲ್ಲ ಇಷ್ಟು ಮತ ಬರುತ್ತೆ ಅಂತ. ಬಿಜೆಪಿ ಕಾಂಗ್ರೆಸ್ ವಿರುದ್ಧ ಹೋರಾಡದೇ ನಮ್ಮ ವಿರುದ್ಧ ಹೋರಾಡಿದರು. ಅದು ಸಮಸ್ಯೆ ಆಯ್ತು. 27 ಕಡೆ ಮೋದಿ ಹೋದರು. ಜೆಡಿಎಸ್ ಬಲ ಇರೋ ಕಡೆ ಮೋದಿ ಹೋಗಿ ಅವರ ತಲೆ ಮೇಲೆ ಅವರೇ ಕಲ್ಲು ಹಾಕಿಕೊಂಡರು. ಈಗ ನಮ್ಮನ್ನು ದೂರಿದ್ರೆ ಪ್ರಯೋಜನ ಏನು? ಎಂದು ಬಿಜೆಪಿ ವಿರುದ್ಧವೂ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟಿದ್ದಕ್ಕೆ ಪಶ್ಚಾತ್ತಾಪ ಇಲ್ಲ, ಐ ಲವ್ ಮೋದಿ : ಸಿಎಂ ಇಬ್ರಾಹಿಂ
Web Stories