ಬೆಂಗಳೂರು: ಟಿಪ್ಪು ಸುಲ್ತಾನ್ ಬಗ್ಗೆ ವಿರೋಧಿ ಪಕ್ಷದ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಟಿಪ್ಪು ಒಬ್ಬ ವೀರ, ಶೂರ, ಜ್ಯಾತ್ಯಾತೀತ, ಸಹೃದಯಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಹಾಡಿ ಹೊಗಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಏರ್ಪಡಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಸಚಿವೆ ಜಯಮಾಲಾ ಅವರು ಮಾತನಾಡಿ, ಪುಲಿಕೇಶಿ, ಕೃಷ್ಣದೇವರಾಯರ ಸಾಲಿನಲ್ಲಿ ಟಿಪ್ಪು ಸುಲ್ತಾನರನ್ನು ಸೇರಿಸಿ ಗೌರವಿಸುವುದು ನಮ್ಮ ಸರ್ಕಾರದ ಉದ್ದೇಶ. ಮಸೀದಿ, ದೇವಸ್ಥಾನ, ಶಾರದಾಂಬೆ, ನಂಜನಗೂಡು ಉಳಿಸಿದವರು ಟಿಪ್ಪು ಸುಲ್ತಾನ್. ಅಲ್ಲದೇ ಶ್ರೀರಂಗನಾಥನ ಮೊದಲ ಪೂಜೆ ಮಾಡುತ್ತಿದ್ದ ವ್ಯಕ್ತಿ ಟಿಪ್ಪು ಸುಲ್ತಾನ್ ಆಗಿದ್ದು, ಇಂತಹ ವೀರನ ಬಗ್ಗೆ ವಿರೋಧ ಪಕ್ಷದವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ವಿರೋಧ ಮಾಡುವ ಮೊದಲಿಗೆ ಬಿಜೆಪಿ ನಾಯಕರು ಶೃಂಗೇರಿಯ ಶಾರದಾಂಬೆ ದೇವಾಲಯದ ದಾಖಲೆ ಓದಲಿ ಎಂದು ಕಿಡಿಕಾರಿದರು.
Advertisement
Advertisement
ಭಾರತ ಚರಿತ್ರೆಯನ್ನು ಜಾಗತಿಕ ಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದವರು ಟಿಪ್ಪು ಸುಲ್ತಾನ್. ಇಂತಹ ಟಿಪ್ಪು ಜಯಂತಿ ವಿಚಾರವಾಗಿ ಅನಗತ್ಯವಾಗಿ ಗೊಂದಲ ಮೂಡಿಸಿ ಬೇರೆ ಅರ್ಥ ಬರುವಂತೆ ವರ್ತಿಸಬಾರದು. ಶ್ರೀರಂಗಪಟ್ಟಣವನ್ನ ಕರ್ಮಭೂಮಿ ಮಾಡಿಕೊಂಡಿದ್ದ ಟಿಪ್ಪುವಿನ ಸೌಹಾರ್ದ, ಸಹಿಷ್ಣುತೆಯನ್ನ ಇವತ್ತಿನ ರಾಜಕಾರಣಿಗಳಿಗೆ ಕಲಿಸಬೇಕು. ಶಾರದಾಂಬೆ, ಶ್ರೀರಂಗಪಟ್ಟಣದ ಇತಿಹಾಸ ಬಿಜೆಪಿ ಅವರು ತಿಳಿದುಕೊಳ್ಳಲಿ. ಇತಿಹಾಸ ತಿಳಿಯದೇ ಬಿಜೆಪಿ ವಿರೋಧ ಮಾಡುತ್ತಿದೆ ಎಂದು ಆರೋಪಿಸಿದರು.
Advertisement
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದಿದ್ದಾರೆ. ಜಯಂತಿ ವ್ಯಕ್ತಿ ಪೂಜೆಯಾಗಿ ಮಾಡದೆ, ಧರ್ಮ, ಸಹಿಷ್ಣುತೆ ಸಂಕೇತವಾಗಿ ಆಚರಣೆ ಮಾಡುತ್ತಿದ್ದೇವೆ. ಸಾಮಾನ್ಯ ಜನರ ಅಭಿವೃದ್ಧಿಗೆ ಕೆಲಸ ಮಾಡಿದ ಟಿಪ್ಪು ಸುಲ್ತಾನ್, ಪ್ರಜೆಗಳಿಗಾಗಿ ಪ್ರಾಣ ಕೊಟ್ಟ ಹಾಗೂ ರಾಜ್ಯಕ್ಕಾಗಿ ತನ್ನ ಮಕ್ಕಳ ಪ್ರಾಣವನ್ನ ತ್ಯಾಗ ಮಾಡಿದ. ಕೃಷಿ ಕ್ರಾಂತಿ ಮಾಡಿ ಮೈಸೂರನ್ನ ಶ್ರೀಮಂತ ರಾಜ್ಯ ಮಾಡಿದ್ದಾರೆ. ರೈತರ ಬೆವರಿಗೆ ಬೆಲೆ ಕೊಟ್ಟ ಟಿಪ್ಪು, ಬಡವರಿಗೆ ಮನೆ, ಕ್ಷಿಪಣಿ ತಂತ್ರಜ್ಞಾನ ನೀಡಿದ್ದಾರೆ ಎಂದು ಟಿಪ್ಪು ಜಯಂತಿ ಮಾಡುವುದನ್ನು ಸಮರ್ಥಿಸಿಕೊಂಡರು.
Advertisement
ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಜಮೀರ್ ಅಹಮದ್, ಶಾಸಕ ರೋಷನ್ ಬೇಗ್, ಶಾಸಕ ಹ್ಯಾರಿಸ್, ಪರಿಷತ್ ಸದಸ್ಯ ರಿಜ್ವಾನ್ ಹರ್ಷದ್ ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews