ನಿಮ್ಮ ಕೆಟ್ಟ ದಿನಗಳು ಬೇಗ ಬರುತ್ತವೆ, ನಾನೇ ಶಾಪ ಹಾಕುತ್ತೇನೆ: ಜಯಾ ಬಚ್ಚನ್

Advertisements

ನವದೆಹಲಿ: ಮಾದಕ ವಸ್ತು ತಿದ್ದುಪಡಿ ಮಸೂದೆ ಮೇಲೆ ನಡೆಯುತ್ತಿದ್ದ ಚರ್ಚೆಯ ವೇಳೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಆಡಳಿತ ಪಕ್ಷದವರಿಗೆ ಹಿಡಿಶಾಪ ಹಾಕಿದ ಘಟನೆ ರಾಜ್ಯಸಭೆ ಕಲಾಪದ ವೇಳೆ ನಡೆದಿದೆ.

Advertisements

ರಾಜ್ಯಸಭೆ ಕಲಾಪದದಲ್ಲಿ ಮಾತನಾಡಿದ ಜಯಾ ಬಚ್ಚನ್,ನಿಮಗೆ ಧನ್ಯವಾದ ಹೇಳುವುದಿಲ್ಲ. ನೀವು ಯಾವುದೇ ಒಂದು ಪಕ್ಷಕ್ಕೆ ಬೆಂಬಲ ನೀಡದೇ ಎಲ್ಲರಿಗೂ ನ್ಯಾಯಯುತವಾಗಿರಬೇಕು. ಈ ಹಿಂದೆ ನೀವು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಂಥವರು ಎಂದು ಸಭಾಧ್ಯಕ್ಷ ಭುವನೇಶ್ವರ್ ಕಾಲಿತಾ ಅವರನ್ನ ಹೀಯಾಳಿಸಿದ್ದಾರೆ. ಆಗ ಬಿಜೆಪಿ ಸಂಸದ ರಾಕೇಶ್ ಸಿನ್ಹಾ ಮಧ್ಯ ಪ್ರವೇಶಿಸಿ, ಸದನದ ಅಧ್ಯಕ್ಷರಿಗೆ ಜಯಾ ಬಚ್ಚನ್ ಅಗೌರವ ಸಲ್ಲಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಜಯಾ ಬಚ್ಚನ್ ಮತ್ತು ಆಡಳಿತ ಪಕ್ಷ ಸದಸ್ಯರ ಮಧ್ಯೆ ಕೆಲವು ಪರ ವಿರೋಧ ಚರ್ಚೆಗಳು ಆಗಿವೆ. ಇದನ್ನೂ ಓದಿ: MES ಪುಂಡರ ವಿರುದ್ಧ ಕನ್ನಡಿಗರ ಸಮರ- ಕರ್ನಾಟಕದ ಪರ ಧ್ವನಿ ಎತ್ತದೆ ಸಂಸದರು ಸೈಲೆಂಟ್!

Advertisements

ನಮಗೆ ನ್ಯಾಯ ಬೇಕು. ನಮಗೆ ನ್ಯಾಯ ಸಿಗುತ್ತಾ? ಏನಾಗುತ್ತಿದೆ ಇಲ್ಲಿ? ಸರ್ಕಾರ ತಂದಿರುವ ಒಂದು ಮಸೂದೆ ಸುತ್ತ ಹಲವು ವಿಚಾರಗಳನ್ನ ನಾವು ಚರ್ಚಿಸುತ್ತಿದ್ದೇವೆ. ಆಡಳಿತ ಪಕ್ಷಗಳ ಸದಸ್ಯರ ಕಡೆ ತಿರುಗಿ, ನಿಮ್ಮ ಕೆಟ್ಟ ದಿನಗಳು ಬೇಗ ಬರುತ್ತಿವೆ. ನಾನೇ ನಿಮಗೆ ಶಾಪ ಹಾಕುತ್ತೇನೆ ಎಂದು ಹಿಡಿಶಾಪ ಹಾಕಿದ ಜಯಾ ಬಚ್ಚನ್, ವಿಪಕ್ಷ ಸದಸ್ಯರ ಧ್ವನಿ ಅಡಗಿಸುವ ಪ್ರಯತ್ನ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯಾ ರೈಗೆ ಇ.ಡಿ ಸಮನ್ಸ್

Advertisements
Advertisements
Exit mobile version