LatestMain PostNational

MES ಪುಂಡರ ವಿರುದ್ಧ ಕನ್ನಡಿಗರ ಸಮರ- ಕರ್ನಾಟಕದ ಪರ ಧ್ವನಿ ಎತ್ತದೆ ಸಂಸದರು ಸೈಲೆಂಟ್!

ನವದೆಹಲಿ: ಬೆಳಗಾವಿಯಲ್ಲಿ ಗಡಿ ವಿವಾದ ಭುಗಿಲೆದ್ದಿದ್ದು, ಮರಾಠಿ ಪುಂಡರು ಕನ್ನಡದ ಅಸ್ಮಿತೆಗೆ ಸವಾಲೊಡ್ಡಲು ಯತ್ನಿಸಿದ್ದಾರೆ. ಈ ಸಂಕಷ್ಟದಲ್ಲೂ ಸಂಸದರು ಕರ್ನಾಟಕದ ಪರ ನಿಲ್ಲಲಿಲ್ಲ. ಈವರೆಗೂ ಸಂಸತ್‍ನಲ್ಲಿ ಯಾವೊಬ್ಬ ಸಂಸದ ಕೂಡ ತುಟಿ ಬಿಚ್ಚಿಲ್ಲ.

28 ಮಂದಿ ಎಂಪಿಗಳು, 11 ಮಂದಿ ರಾಜ್ಯಸಭೆ ಸದಸ್ಯರು, ಮೂವರು ಕೇಂದ್ರ ಸಚಿವರು ಹಾಗೂ ಓರ್ವ ವಿಪಕ್ಷ ನಾಯಕರಿದ್ರೂ ವ್ಯರ್ಥವಾದಂತಿದೆ. ಪ್ರಭಾವಿ ಹುದ್ದೆಯಲ್ಲಿದ್ದರೂ ನಾಯಕರು ಮಾತ್ರ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಕನ್ನಡ ಧ್ವಜ ಸುಟ್ಟರೂ, ರಾಯಣ್ಣ ಪ್ರತಿಮೆ ಒಡೆದರೂ ಮೌನಕ್ಕೆ ಶರಣಾಗಿದ್ದಾರೆ. ಈ ಮೂಲಕ ನಮಗೆ ಸಂಬಂಧವೇ ಇಲ್ಲ ಅನ್ನೋವಂತೆ ಸಂಸದರು ವರ್ತಿಸುತ್ತಿದ್ದಾರೆ. ಇದನ್ನೂ ಓದಿ: ಹಿಂದಿಯನ್ನು ವಿರೋಧಿಸುವವರು, ಉರ್ದುವನ್ನು ವಿರೋಧಿಸಲ್ಲ ಯಾಕೆ: ಯತ್ನಾಳ್

ಸಂಸದರು ಸೈಲೆಂಟ್ ಇರಲು ಕಾರಣವೇನು..?
ಕನ್ನಡದ ಅಸ್ಮಿತೆಗಿಂತ ಸಂಸದರಿಗೆ ರಾಜಕಾರಣವೇ ಹೆಚ್ಚಾಯ್ತಾ ಎಂಬ ಪ್ರಶ್ನೆ ಎದ್ದಿದೆ. ಬೆಳಗಾವಿಯಲ್ಲಿರೋ ಮರಾಠಿ ವೋಟ್‍ಗಳ ಮೇಲೆ ಬಿಜೆಪಿಗೆ ಪ್ರೀತಿ ಇದ್ದಂತಿದೆ. ಹೀಗಾಗಿ ಮರಾಠಿಗರನ್ನು ಎದುರು ಹಾಕಿಕೊಂಡರೆ ಬಿಜೆಪಿಗೆ ಸೋಲುವ ಆತಂಕ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗೆ ಕಾಂಗ್ರೆಸ್ ಮೈತ್ರಿ ಹಿನ್ನೆಲೆಯಲ್ಲಿ ಎಂಇಎಸ್ ವಿರುದ್ಧ ರಾಷ್ಟ್ರೀಯ ಪಕ್ಷಗಳು ಸಾಫ್ಟ್ ಕಾರ್ನರ್ ಆಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಶಿವಾಜಿ ಪ್ರತಿಮೆಗೆ ಮಸಿ ಬಳಿದವರ ವಿರುದ್ಧ ಕ್ರಮಕ್ಕೆ ಶಿವಸೇನೆ ಪಟ್ಟು ಹಿಡಿದಿದೆ. ದೇಶದ್ರೋಹ ಕಾನೂನಿನ ಅಡಿ ಶಿಕ್ಷಿಸಲು ಅಮಿತ್ ಶಾಗೆ ಮನವಿ ಮಾಡಿದ್ದಾರೆ. ಆದರೆ ರಾಜ್ಯದ ಸಂಸದರು ಇದುವರೆಗೂ ಏನೂ ಮಾತಾಡದೆ ಮೌನವಹಿಸಿದ್ದಾರೆ. ಗೃಹ ಇಲಾಖೆಯ ಗಮನ ಸೆಳೆಯದೆ ರಾಜ್ಯದ ಸಂಸದರು ಸೈಲೆಂಟ್ ಆಗಿರುವುದು ತೀವವ್ರ ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ

Leave a Reply

Your email address will not be published.

Back to top button