ಶಾರುಖ್ ಖಾನ್‌ಗೆ (Sharukh Khan) ನಾಯಕಿಯಾಗಿ ಡ್ಯುಯೇಟ್ ಹಾಡಿದ ಮೇಲೆ ನಯನತಾರಾ (Nayanatara) ಈಗ ಹೊಸ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದಾರೆ. ಪ್ರಭಾಸ್ ಜೊತೆ ಲೇಡಿ ಸೂಪರ್ ಸ್ಟಾರ್ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ.
ವಿಷ್ಣು ಮಂಚು (Vishnu Manchu) ಮುಂದಿನ ಸಿನಿಮಾದಲ್ಲಿ ಪ್ರಭಾಸ್ (Prabhas) ಅತಿಥಿ ಪಾತ್ರದಲ್ಲಿ ಸಾಥ್ ನೀಡ್ತಿದ್ದಾರೆ. ಭಕ್ತ ಕಣ್ಣಪ್ಪ ಚಿತ್ರ ಮತ್ತೆ ಸಿನಿಮಾ ಮಾಡಲು ಚಿತ್ರತಂಡ ತಯಾರಿ ಮಾಡ್ತಿದೆ. ಕಣ್ಣಪ್ಪನಾಗಿ ವಿಷ್ಣು ಮಂಚು ಕಾಣಿಸಿಕೊಂಡರೆ, ಶಿವನಾಗಿ 10 ನಿಮಿಷಗಳ ಕಾಲ ಪ್ರಭಾಸ್ ಕಾಣಿಸಿಕೊಳ್ತಿದ್ದಾರೆ. ಪಾರ್ವತಿಯಾಗಿ ಕಾಣಿಸಿಕೊಳ್ಳಲು ನಯನತಾರಾ (Nayanatara) ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಈ ಹಿಂದೆ ಯೋಗಿ (Yogi Film) ಸಿನಿಮಾದಲ್ಲಿ ಪ್ರಭಾಸ್- ನಯನತಾರಾ ಜೋಡಿಯಾಗಿ ನಟಿಸಿದ್ದರು. ಈಗ 16 ವರ್ಷಗಳ ಬಳಿಕ ಭಕ್ತ ಕಣ್ಣಪ್ಪ ಸಿನಿಮಾದಲ್ಲಿ ಮತ್ತೆ ಜೊತೆಯಾಗ್ತಿದ್ದಾರೆ. ಇದನ್ನೂ ಓದಿ:ಸೋಲಿನ ಸುಳಿಯಲ್ಲಿ ಚಿರಂಜೀವಿ, ಹೊಸ ನಿರ್ಧಾರ ಕೈಗೊಂಡ ಮೆಗಾಸ್ಟಾರ್
ಜವಾನ್ (Jawan) ಬಳಿಕ ಬಾಲಿವುಡ್‌ನಲ್ಲೂ ನಯನತಾರಾಗೆ ಬೇಡಿಕೆಯಿದೆ. ಶಾರುಖ್ ಜೊತೆ ಹೈಲೆಟ್ ಆದ ಮೇಲೆ ನಟಿಯ ವರ್ಚಸ್ಸು ಜಾಸ್ತಿಯಾಗಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]