ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಇಂದು (ಸೆ.8) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಣ್‌ವೀರ್ ಸಿಂಗ್ (Ranveer Singh) ತಂದೆಯಾದ ಸಂಭ್ರಮದಲ್ಲಿದ್ದಾರೆ. ಇದನ್ನೂ ಓದಿ:ಗುರುದತ್ ಗಾಣಿಗ ನಿರ್ದೇಶನದ ‘ಜುಗಾರಿ ಕ್ರಾಸ್’ ಸಿನಿಮಾ ಅನೌನ್ಸ್- ಕುತೂಹಲ ಹೆಚ್ಚಿಸಿದ ಫಸ್ಟ್ ಲುಕ್
ಗೌರಿ ಗಣೇಶ ಹಬ್ಬದ ಸಂಭ್ರಮದ ನಡುವೆ ನಟಿ ದೀಪಿಕಾ ಹೆಣ್ಣ ಮಗುವಿಗೆ ಜನ್ಮ ನೀಡಿರುವುದು ಕುಟುಂಬದಲ್ಲಿ ಸಂತಸ ಮೂಡಿಸಿದೆ. ಮಗು ಮತ್ತು ದೀಪಿಕಾ ಇಬ್ಬರೂ ಆರೋಗ್ಯವಾಗಿದ್ದಾರೆ. ಸೆ.7ರಂದು ಸಂಜೆ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮನೆಗೆ ಪುಟ್ಟ ಗೌರಿಯ ಆಗಮನವಾಗಿದೆ. ಇನ್ನೂ ದೀಪಿಕಾ ಮತ್ತು ರಣ್‌ವೀರ್ ದಂಪತಿ ಫ್ಯಾನ್ಸ್, ಸ್ಟಾರ್ಸ್ ಶುಭಹಾರೈಸುತ್ತಿದ್ದಾರೆ.
ಇತ್ತೀಚೆಗೆ ನಟಿ ಮಸ್ತ್ ಆಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಪ್ರೆಗ್ನೆನ್ಸಿ ಮ್ಯಾಟರ್ ಸುಳ್ಳು ಎಂದವರಿಗೆ ಬಂಪ್ ತೋರಿಸಿ ಪತಿ ಜೊತೆ ಕ್ಯಾಮೆರಾಗೆ ದೀಪಿಕಾ ಪೋಸ್ ನೀಡಿದ್ದರು. ಪ್ರೆಗ್ನೆನ್ಸಿ ಫೋಟೋಶೂಟ್ ಸಖತ್ ವೈರಲ್ ಆಗಿತ್ತು. ಈ ಮೂಲಕ ಟ್ರೋಲ್ ಮಾಡುವವರಿಗೆ ಖಡಕ್ ಉತ್ತರ ನೀಡಿದ್ದರು.