ಟೊಕಿಯೊ: ಚೀನಾ ವಿರುದ್ಧ ಪ್ರತಿದಾಳಿ ನಡೆಸಲು ಜಪಾನ್ ಮುಂದಾಗಿದ್ದು, ಅತ್ಯಂತ ಶಕ್ತಿಶಾಲಿ ಹಾಗೂ ದೀರ್ಘ ಶ್ರೇಣಿಯ 1,000 ಕ್ರೂಸ್ ಮಿಸೈಲ್‌ಗಳನ್ನು ತನ್ನ ನೌಕಾಪಡೆಗೆ ನಿಯೋಜಿಸಲು ಜಪಾನ್ ಸಿದ್ಧವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
ಈ ಕ್ಷಿಪಣಿಗಳು 100 ಕಿ.ಮೀ ನಿಂದ ಬರೋಬ್ಬರಿ 1,000 ಕಿಮೀ ವರೆಗೆ ಗುರಿ ತಲುಪುವ ಸಾಮರ್ಥ್ಯವನ್ನು ಒಳಗೊಂಡಿವೆ. ಕ್ಷಿಪಣಿಗಳನ್ನು ಉತ್ತರ ಕೊರಿಯಾ ಮತ್ತು ಚೀನಾಕ್ಕೆ ಸಮೀಪವಿರುವ ನ್ಯಾನ್ಸಿ ದ್ವೀಪಗಳಲ್ಲಿ ನಿಯೋಜಿಸಲು ಜಪಾನ್ ಮುಂದಾಗಿದೆ ಎಂದು ವರದಿ ಹೇಳಿದೆ. ಇದನ್ನೂ ಓದಿ: ನದಿ, ಕೆರೆಗಳಲ್ಲಿ ಸ್ನಾನ ಮಾಡೋ ಮುನ್ನ ಹುಷಾರ್ – ವಿದೇಶದಲ್ಲಿ ಪತ್ತೆಯಾಗಿದೆ ಮೆದುಳು ತಿನ್ನುವ ಡೆಡ್ಲಿ ವೈರಸ್
Advertisement
Advertisement
ಈಗಾಗಲೇ ಅಸ್ತಿತ್ವದಲ್ಲಿರುವ ಹಡಗುಗಳಿಗೆ ಹಾಗೂ ಯುದ್ಧ ವಿಮಾನಗಳಿಗೆ ಕ್ರೂಸ್ ಮಿಸೈಲ್‌ಗಳನ್ನು ಅಳವಡಿಸುವ ವ್ಯವಸ್ಥೆಯನ್ನು ಉನ್ನತೀಕರಿಸಲಾಗಿದೆ. ಈ ಬಹುತೇಕ ಕ್ಷಿಪಣಿಗಳನ್ನು ನೈರುತ್ಯ ವಲಯದಲ್ಲಿ ತೈವಾನ್ ಬಳಿ ನಿಯೋಜಿಸಲು ಜಪಾನ್ ಮುಂದಾಗಿದೆ. ಚೀನಾ ಹಾಗೂ ಉತ್ತರ ಕೊರಿಯಾದ ಮಿಸೈಲ್ ಶಕ್ತಿಗೆ ಕೌಂಟರ್ ಕೊಡಲು ಜಪಾನ್ ಇಂತಹ ದೊಡ್ಡ ಯತ್ನಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.