JANI – ಜಾನಿ (Vijay Raghavendra, Janani, Milana, Rangayana Raghu, Sadhu Kokila, Suman)

Public TV
2 Min Read
jani vijay raghavendra janani m

ಜಾನಿ’ with ಜೋ…

ಆ.11, ಬೆಂಗಳೂರು : ಶುಕ್ರವಾರ ಕನ್ನಡ ಸಿನಿರಸಿಕರಿಗೆ ಸಿಹಿಸುದ್ದಿ. ವಿಜಯ್ ರಾಘವೇಂದ್ರ ಅಭಿನಯಿಸಿರುವ ‘ಜಾನಿ’ಸಿನಿಮಾ ಕನ್ನಡದ ಬೆಳ್ಳಿತೆರೆಯನ್ನು ಕಾಣಲಿದ್ದು ಖ್ಯಾತನಟ ವಿಜಯ ರಾಘವೇಂದ್ರ ‘ಜೋ’ ಎಂಬ ಹೆಸರಿನ ಶ್ವಾನದೊಂದಿಗೆ ನಟಿಸಿ ವಿಶೇಷ ಬಗೆಯಲ್ಲಿ ಪಾತ್ರ ನಿರ್ವಹಿಸಿರುವುದು ಚಿತ್ರದ ವಿಶೇಷವಾಗಿದೆ.

ಹೌದು, ಜಿಯೋಜಾನಿ ಕಾಂಟೆಸ್ಟ್ ನ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಅಲೆಯನ್ನೇ ಸೃಷ್ಟಿಸಿದ್ದ ಜಾನಿ ಮೂವೀ ಇಂದು ಬೆಳ್ಳಿತೆರೆ ಕಾಣಲಿದೆ. 140 ಚಿತ್ರಮಂದಿರಗಳಲ್ಲಿ ಸೆಟ್ಟೇರಲಿರುವ ಈ ಚಿತ್ರ ಕನ್ನಡ ಸಿನಿರಸಿಕರಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದು, ಚಿತ್ರಮಂದಿರದ ಮುಂದೆ ಸಾಲು ಭಾರೀ ಜೋರಾಗಿದೆ.

ನಟ ವಿಜಯ ರಾಘವೇಂದ್ರ ಜೊತೆ ಜನನಿ ಮತ್ತು ಮಿಲನ ನಾಗರಾಜ್ ನಾಯಕಿಯರಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಲವ್, ಕಾಮಿಡಿ ಮಾಸ್ ಎಂಟರ್‍ಟೈನ್‍ಮೆಂಟ್ ಎಲ್ಲವೂ ಇರಲಿದ್ದು, ಕನ್ನಡ ಚಿತ್ರರಂಗದ ಹೆಸರಾಂತ ಛಾಯಗ್ರಾಹಕ ಪಿ.ಕೆ.ಎಚ್.ದಾಸ್ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆಯ 25ನೇ ಚಿತ್ರ ಇದಾಗಿದ್ದು, ಹಾಡುಗಳು ಉತ್ತಮವಾಗಿ ಮೂಡಿಬಂದಿದೆ. ಜಾನಿ ಚಿತ್ರವನ್ನು ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಜೆ ಜಾನಕಿರಾಮ್ ಮತ್ತು ಎಂ.ಅರವಿಂದ್ ಅವರು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಪ್ರಭುದೇವ ಅವರ ತಂದೆ ಮೂಗೂರು ಸುಂದರಂ ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ನಟಿಸಿರುವುದು ಚಿತ್ರದ ವಿಶೇಷವಾಗಿದೆ.

ಚಿತ್ರದ ತಾರಾಗಣವೂ ವಿಶೇಷವಾಗಿದ್ದು ಸಾಧುಕೋಕಿಲ ಹಾಗೂ ರಂಗಾಯಣ ರಘುರವರ ಜೋಡಿ ‘ ಚಡ್ಡಿದೋಸ್ತ್’ ಚಿತ್ರದ ನಂತರ ಇದೇ ಮೊದಲ ಬಾರಿಗೆ ಒಂದಾಗಿದ್ದು, ಚಿತ್ರದಾದ್ಯಂತ ತಮ್ಮ ಮಸ್ತ್ ಕಾಮಿಡಿಯ ಮೂಲಕ ರಂಜಿಸಲಿದ್ದಾರೆ.

ಖ್ಯಾತ ಗಾಯಕ ವಿಜಯ್ ಪ್ರಕಾಶ್, ಶ್ರೇಯಾ ಘೋಷಾಲ್, ಉದಿತ್ ನಾರಾಯಣ್ ರವರು ಹಾಡಿರುವ ಜೆಸ್ಸಿಗಿಫ್ಟ್ ಸಂಗೀತ ಸಂಯೋಜನೆಯ ಹಾಡುಗಳು ಈಗಾಗಲೇ ಬಹಳಷ್ಟು ಕೇಳುಗರನ್ನು ತನ್ನತ್ತ ಸೆಳೆದಿದೆ.

ಇನ್ನು ಜೋ ಹೆಸರಿನ ಶ್ವಾನವೊಂದು ಚಿತ್ರದಾದ್ಯಂತ ಶ್ವಾನಪ್ರಿಯರನ್ನು ರಂಜಿಸಲಿದ್ದು, ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಸಹ ಈ ನಾಯಿ ಮಹತ್ತರ ಪಾತ್ರ ವಹಿಸಲಿದೆ.

ಒಟ್ಟಿನಲ್ಲಿ ಡ್ಯಾನಿ ಕುಟ್ಟಪ್ಪ, ಶೋಭರಾಜ್, ಮೂಗು ಸುರೇಶ್, ಪವನ್ ರವರಂತಹ ಎಲ್ಲಾ ಬಿಜಿ ಕಲಾವಿದರು ನಟಿಸಿರುವ ಈ ಚಿತ್ರ ಶುಕ್ರವಾರ ತೆರೆಕಾಣಲಿದ್ದು ಸಿನಿಪ್ರಿಯರಲ್ಲಿ ಅತ್ಯಂತ ಕುತೂಹಲ ಕೆರಳಿಸಿದೆ.

 

In Theaters – August 11th, 2017

Directed by : PKH Das

Produced by : J.Janakiram and M.Aravind

A Aishwarrya Film Productions, S.Purushotham Presentation

Cast : Vijay Raghavendra, Janani, Milana Nagaraj, Rangayana Raghu, Sadhu Kokila, Suman.


JANI – Kannada Movie Trailer


Jani Add1Jani 1

Jani 2

Jani 3

TAGGED:
Share This Article
Leave a Comment

Leave a Reply

Your email address will not be published. Required fields are marked *