ಜಮ್ಮು-ಕಾಶ್ಮೀರ: ಇಂದು ಶ್ರೀನಗರಕ್ಕೆ ರಾಜನಾಥ್ ಸಿಂಗ್ ಭೇಟಿ

Public TV
1 Min Read
Rajnath Singh 3

ಶ್ರೀನಗರ: ಭಾರತ ((India) ಮತ್ತು ಪಾಕಿಸ್ತಾನದ (Pakistan) ನಡುವೆ ಕದನ ವಿರಾಮ (Ceasefire) ಘೋಷಣೆಯಾದ 5 ದಿನಗಳ ಬಳಿಕ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಶ್ರೀನಗರಕ್ಕೆ (Srinagar) ಭೇಟಿ ನೀಡಲಿದ್ದಾರೆ.

ಏ.22 ರಂದು ಪಹಲ್ಗಾಮ್ ದಾಳಿ (Pahalgam Terrorist Attack) ಹಾಗೂ ಮೇ 07ರಂದು ನಡೆದ ಆಪರೇಷನ್ ಸಿಂಧೂರದ (Operation Sindoor) ಬಳಿಕ ರಾಜನಾಥ್ ಸಿಂಗ್ ಅವರ ಮೊದಲ ಭೇಟಿ ಇದಾಗಿದೆ. ಇದನ್ನೂ ಓದಿ: ಉಗ್ರರ ವಿರುದ್ಧ ಸಿಡಿದೆದ್ದ ಭಾರತ – ‘ಆಪರೇಷನ್‌ ಸಿಂಧೂರ’ಗೆ ಜೈ ಎಂದ ಬ್ರಿಟಿಷ್‌ ಸಂಸದ

ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha) ಜೊತೆಗಿರಲಿದ್ದು, ಸೈನಿಕರನ್ನು ಭೇಟೆಯಾಗಿ, ಚರ್ಚೆ ನಡೆಸಲಿದ್ದಾರೆ.

ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಆದಮ್‌ಪುರ ವಾಯುನೆಲೆಗೆ (Adamapur Airbase) ಭೇಟಿ ನೀಡಿ, ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಅದಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.ಇದನ್ನೂ ಓದಿ: ಮಣಿಪುರದ ಚಾಂದೆಲ್‌ನಲ್ಲಿ ಎನ್‌ಕೌಂಟರ್‌ – 10 ಉಗ್ರರನ್ನು ಹತ್ಯೆ ಮಾಡಿದ ಭಾರತೀಯ ಸೇನೆ

Share This Article