ಬೆಳಗಾವಿ: ಕಳೆದ ಎರಡು-ಮೂರು ವರ್ಷಗಳಿಂದ ನಿರಂತರ ನಷ್ಟ ಅನುಭವಿಸುತ್ತಿದ್ದ ಈರುಳ್ಳಿ ಬೆಳೆಗಾರರಿಗೆ(Onion Farmers) ಈ ಬಾರಿ ಬಂಪರ್ ಬೆಲೆ ಸಿಕ್ಕಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಬೆಳಗಾವಿ ಎಪಿಎಂಸಿ(Belagavi APMC) ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಣನೀಯವಾಗಿ ಏರಿಕೆಯಾಗಿದೆ.
ಕಳೆದ 15 ದಿನಗಳ ಹಿಂದೆ ಪ್ರತಿ ಕ್ವಿಂಟಾಲ್‌ಗೆ 2,000 ದಿಂದ 2,500 ರೂಪಾಯಿ ಇದ್ದ ದರ, ಸದ್ಯ ಕ್ವಿಂಟಾಲ್‌ಗೆ 3,500 ರಿಂದ 4,500 ರೂಪಾಯಿವರೆಗೆ ಜಿಗಿದಿದೆ. ಇದರೊಂದಿಗೆ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ 35 ರಿಂದ 45 ರೂಪಾಯಿಗೆ ತಲುಪಿದೆ.
ಬೆಳಗಾವಿ ಸೇರಿದಂತೆ ದೇಶಾದ್ಯಂತ ಮಳೆ ಕೊರತೆ ಎದುರಾದ ಹಿನ್ನೆಲೆಯಲ್ಲಿ ಈರುಳ್ಳಿ ಇಳುವರಿ ಕುಸಿದಿದ್ದು, ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಆವಕವಾಗುತ್ತಿಲ್ಲ. ಬೆಳಗಾವಿ ಎಪಿಎಂಸಿಯಿಂದ ರಾಜ್ಯದ ನಾನಾ ಭಾಗಗಳು ಹಾಗೂ ನೆರೆಯ ಗೋವಾ ರಾಜ್ಯಕ್ಕೂ ಈರುಳ್ಳಿ ಸರಬರಾಜಾಗುವುದರಿಂದ ಇಲ್ಲಿ ಬೇಡಿಕೆ ಹೆಚ್ಚಾಗಿದೆ. ಇದನ್ನೂ ಓದಿ: ನಿಜವಾದ ಶತ್ರುಗಳನ್ನು ಗುರುತಿಸಿ – ಮುಸ್ಲಿಂ ರಾಷ್ಟ್ರಗಳಿಗೆ ಮೊಜ್ತಬಾ ಖಮೇನಿ ಕರೆ
