ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Case) ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದಕ್ಕೆ ಪೂರಕವಾಗಿ ದರ್ಶನ್ ವಿರುದ್ಧ ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಆದ್ರೆ ಈ ಹತ್ಯೆ ಪ್ರಕರಣದಲ್ಲಿ ದರ್ಶನ್ (Darshan) ಅವರು ಸಿಕ್ಕಿಬಿದ್ದದ್ದು ಹೇಗೆ? ದರ್ಶನ್ ಅವರನ್ನ ಬಂಧಿಸಿದ್ದರೂ ಪೊಲೀಸರಿಗೆ ಕರೆದುಕೊಂಡು ಹೋಗೋದು ಸುಲಭವೂ ಆಗಿರಲಿಲ್ಲ, ಏಕೆ? ಆ ಒಂದು ಕ್ಷಣ ಮಿಸ್ ಆಗಿದ್ದರೆ ಏನಾಗ್ತಿತ್ತು? ಅನ್ನೋ ಸ್ಫೋಟಕ ರಹಸ್ಯಗಳನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.
ದರ್ಶನ್ ಸಿಕ್ಕಿಬಿದ್ದದ್ದೇ ರಣ ರೋಚಕ:
ಜೂನ್ 10ರ ಮಂಗಳವಾರ ಬೆಳಗ್ಗೆ 8 ಗಂಟೆಗೆ ದರ್ಶನ್ ಅವರನ್ನು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ (Mysuru Private Hotel) ಬಂಧಿಸಲಾಗಿತ್ತು. ಅಂದು ಬೆಳಗ್ಗೆ 8 ಗಂಟೆ ಸಮಯ ಮೀರಿದ್ದರೆ ದರ್ಶನ್ ಅವರನ್ನ ಹಿಡಿಯೋದು ಅಸಾಧ್ಯವಾಗ್ತಿತ್ತಂತೆ. ಪೊಲೀಸರಿ ಬೆನ್ನತ್ತಿದ್ದಾರೆ ಎಂಬ ಸಣ್ಣ ಸುಳಿವು ಸಿಕ್ಕಿದ್ದರೂ ದರ್ಶನ್ ಅವರು ತಲೆ ಮರೆಸಿಕೊಳ್ಳುವ ಸಾಧ್ಯತೆಯಿತ್ತು ಎಂದು ತನಿಖಾಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದರ್ಶನ್ ಹೆಸ್ರು ಹೇಳದಂತೆ 30 ಲಕ್ಷಕ್ಕೆ ನಡೆದಿತ್ತಾ ಡೀಲ್? – ಇಂಚಿಂಚು ಮಾಹಿತಿ ಬಾಬ್ಬಿಟ್ಟ ಆರೋಪಿ ಪ್ರದೋಶ್
ಪೊಲೀಸರು (Bengaluru Police) ದರ್ಶನ್‌ರನ್ನ ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗಿದ್ದರೆ, ತಲೆ ಮರೆಸಿಕೊಳ್ಳುತ್ತಿದ್ದರು. ಆಗ ದರ್ಶನ್ ಹುಡುಕೋದು ಅಷ್ಟು ಸುಲಭವಾಗಿರುತ್ತಿರಲಿಲ್ಲ. ಭೂಗತವಾಗಿಬಿಟ್ಟಿದ್ದರೆ ಕೇಸ್ ಹಳ್ಳ ಹಿಡಿದು ಹೋಗ್ತಿತ್ತು. ಹೀಗಾಗಿ ಬೆಳಗ್ಗೆ 8 ಗಂಟೆ ಒಳಗೆ ದರ್ಶನ್‌ನ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ದರ್ಶನ್‌ನನ್ನ ಪೊಲೀಸರು ಲಾಕ್ ಮಾಡಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಡಿಕೆಸು ಸ್ಪರ್ಧೆ ಫಿಕ್ಸಾ?- ಬುಧವಾರ ಇಡೀ ದಿನ ಚನ್ನಪಟ್ಟಣದಲ್ಲಿ ಡಿಕೆಶಿ ದೇಗುಲಗಳ ದರ್ಶನ
ದರ್ಶನ್ ಅವರನ್ನ ಬಂಧಿಸಿದ ನಂತರವೂ ಅವರನ್ನ ಬೆಂಗಳೂರಿಗೆ ಕರೆತರುವುದು ಅಷ್ಟು ಸುಲಭವಾಗಿರಲಿಲ್ಲ. ಮೈಸೂರಿಂದ ಮಂಡ್ಯ ಬಾರ್ಡರ್ ದಾಟುವವರೆಗೂ ಪೊಲೀಸರು ಫುಲ್ ಅಲರ್ಟ್ ಆಗಿದ್ದರು. ವಿಚಾರ ಲೀಕ್ ಆದ್ರೆ ಅಭಿಮಾನಿಗಳು ಮುತ್ತಿಗೆ ಹಾಕುವ ಆತಂಕದಲ್ಲೇ ಪೊಲೀಸರು ಕರೆತರುತ್ತಿದ್ದರು. ಹೀಗಾಗಿ ಪ್ರತೀ ಅರ್ಧ ಗಂಟೆಗೆ ಹಿರಿಯ ಅಧಿಕಾರಿಗಳು ಕರೆತರುತ್ತಿದ್ದ ಪೊಲೀಸರಿಗೆ ಫೋನ್ ಕಾಲ್ ಮಾಡಿ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಹೆದ್ದಾರಿ ಸವಾರರಿಗೂ ಸಹ ದರ್ಶನ್ ಜೀಪ್‌ನಲ್ಲಿರೋದು ಗೊತ್ತಾಗದಂತೆ ಕರೆತಂದಿದ್ದರು ಎಂದು ತಂಡದಲ್ಲಿದ್ದ ಪೊಲೀಸರೊಬ್ಬರು ಹೇಳಿಕೊಂಡಿದ್ದಾರೆ.
ತನಿಖೆ ಇನ್ನಷ್ಟು ತೀವ್ರ:
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಬೆಂಗಳೂರಿನ ಜಯಣ್ಣ ಶೆಡ್, ಮೈಸೂರಿನ ಹೋಟೆಲ್ ಮತ್ತು ಫಾರ್ಮ್‌ಹೌಸ್‌ನಲ್ಲಿ ಪೊಲೀಸರು ಮಹಜರು ನಡೆಸಿದ್ದಾರೆ. ಮೂರು ಬೈಕ್ ಸೀಜ್ ಮಾಡಿದ್ದಾರೆ. ಸರಿಯಾಗಿ ಊಟ ಮಾಡದ ಕಾರಣ ಅಸ್ವಸ್ಥರಾಗಿದ್ದ ನಟಿ ಪವಿತ್ರಾಗೌಡಗೆ ಮಲ್ಲತ್ತಹಳ್ಳಿ ಬಿಬಿಎಂಪಿ ಆಸ್ಪತ್ರೆಯಲ್ಲಿ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿಯನ್ನು ‘ಡಿ’ ಗ್ಯಾಂಗ್ ಪತ್ತೆ ಮಾಡಿದ್ದು ಹೇಗೆ? – ಪವಿತ್ರಾ ಗೌಡ ಜೊತೆ ಸ್ವಾಮಿ ಚಾಟ್ ಲಿಸ್ಟ್ ಲಭ್ಯ
ಇನ್ನು, ಕ್ರೈಂ ಸೀನ್‌ನಲ್ಲಿಯೇ ಇಲ್ಲದ ಕೇಶವಮೂರ್ತಿ, ನಿಖಿಲ್ ಮತ್ತು ಕಾರ್ತಿಕ್ 30 ಲಕ್ಷ ರೂ. ಆಸೆಗಾಗಿ ಕೊಲೆ ಆರೋಪ ಹೊತ್ತು ಪೊಲೀಸರ ಮುಂದೆ ಶರಣಾಗಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಈ ಮಧ್ಯೆ, ಪ್ರಕರಣದಲ್ಲಿ ಯಾವುದೇ ಒತ್ತಡ ಇಲ್ಲ. ಪೊಲೀಸರು ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದ್ದಾರೆ ಎಂದು ಪೊಲೀಸ್ ಕಮೀಷನರ್ ದಯಾನಂದ್ ಸ್ಪಷ್ಟಪಡಿಸಿದ್ದಾರೆ. ಅತ್ತ, ಚಿತ್ರದುರ್ಗದಲ್ಲಿ ಮೃತ ರೇಣುಕಾಸ್ವಾಮಿ ನಿವಾಸಕ್ಕೆ ಸಚಿವರಾದ ಪರಮೇಶ್ವರ್, ಡಿ ಸುಧಾಕರ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.