ಬೆಂಗಳೂರು: ಕಾಂಗ್ರೆಸ್ (Congress) ಎಂದರೆ ಹಿಂದೂ ವಿರೋಧಿ ಅನ್ನೋದನ್ನು ಆ ಪಕ್ಷದ ನಾಯಕರೇ ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗ (Shivamogga) ಗಲಭೆ ಪ್ರಕರಣದ ಹಿನ್ನೆಲೆ ಸ್ಥಳಕ್ಕೆ ಬಿಜೆಪಿ (BJP) ಸತ್ಯ ಶೋಧನೆ ತಂಡ ಭೇಟಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ವಾಸ್ತವತೆ ಮತ್ತು ನೊಂದ ನಾಗರಿಕರನ್ನು ಮಾತನಾಡಿಸಿ ವಾಸ್ತವ ಸ್ಥಿತಿ ಪರಿಶೀಲನೆ ಮಾಡುತ್ತೇವೆ. ಬಳಿಕ ಸರ್ಕಾರದ ಮೇಲೆ ಸೂಕ್ತ ಕ್ರಮ ವಹಿಸುವ ಬಗ್ಗೆ ಸಮಾಲೋಚನೆ ಮಾಡುತ್ತೇವೆ ಎಂದು ತಿಳಿಸಿದರು.
Advertisement
Advertisement
ಭಯದ ಭಾವನೆ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡು ಸ್ಥಳೀಯರ ಹಿತ ಸಂರಕ್ಷಣೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಅಧಿಕಾರಿಗಳಿಗೂ ಜನರಿಗೆ ನಿರ್ಭೀತಿಯಾಗಿ ವ್ಯವಸ್ಥೆ ಮಾಡಲು ಜನರ ಪ್ರತಿನಿಧಿಗಳಾಗಿ ಒತ್ತಾಯ ಮಾಡುತ್ತೇವೆ. ಆಸ್ಪತ್ರೆಗೆ ಭೇಟಿ ಕೊಡುತ್ತೇವೆ, ಗಾಯಳುಗಳನ್ನು ಭೇಟಿ ಮಾಡಿ ಬರುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಂದೇ ಬಿಡ್ತು ದಸರಾ – ಮೈಸೂರು ಅರಮನೆಯಲ್ಲಿ ಯಾವ ದಿನ ಏನು ಕಾರ್ಯಕ್ರಮ?
Advertisement
ಗಲಭೆ ವಿಚಾರವಾಗಿ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ. ದೊಡ್ಡ ಬಹುಮತ ಬಂದಿದೆ, ನಾವು ಏನು ಬೇಕಾದರೂ ಮಾಡಬಹುದು. ನಮಗೆ ಲೈಸೆನ್ಸ್ ಕೊಟ್ಟಿದ್ದಾರೆ ಅನ್ನೋ ಮನಸ್ಥಿತಿ ಇದು. ಸಣ್ಣ ಗಲಾಟೆಯಾದಾಗ ರಾಹುಲ್ ಗಾಂಧಿ, ರಾಷ್ಟ್ರೀಯ ನಾಯಕರು, ಮತ್ತೊಬ್ಬರು ಎಲ್ಲಾರು ಭೇಟಿ ಮಾಡುತ್ತಾರೆ. ಆದರೆ ಇಲ್ಲಿಗ್ಯಾಕೆ ಯಾರು ಬರ್ತಿಲ್ಲ? ಶಿವಮೊಗ್ಗಕ್ಕೆ ಭೇಟಿ ಮಾಡಿ, ಸ್ಥಳ ಪರಿಶೀಲನೆ ಮಾಡಿ ನೊಂದವರನ್ನು ಯಾಕೆ ಭೇಟಿ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
Advertisement
ಹೊಡೆಯುವುದು, ಗಲಭೆ ನಿರ್ಮಾಣಕ್ಕೆ ಪೂರಕವಾದ ಕೆಲಸ ಮಾಡುವುದೇ ಕಾಂಗ್ರೆಸ್ ಪಕ್ಷ. ಅನೇಕ ಬಾರಿ ಜನ ಕಾಂಗ್ರೆಸ್‌ಗೆ ಬುದ್ಧಿ ಕಲಿಸಿದ್ದರು. ಅವರು ಮಾತ್ರ ಹಳೇ ಬುದ್ಧಿ ಬಿಡುತ್ತಿಲ್ಲ. ರಾಮಲಿಂಗಾರೆಡ್ಡಿಯವರ ಹೇಳಿಕೆ ಕೂಡ ಮೊಂಡುತನವನ್ನು ಪ್ರದರ್ಶನ ಮಾಡುತ್ತಿದೆ. ಉದ್ದಟತನದ ಮಾತುಗಳು ಇದು. ಕಾಂಗ್ರೆಸ್ ಎಂದರೆ ಆ್ಯಂಟಿ ಹಿಂದೂ ಅನ್ನೋದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದಾರೆ ಅಷ್ಟೇ ಎಂದು ಅಶ್ವಥ್ ನಾರಾಯಣ್ ಗುಡುಗಿದರು. ಇದನ್ನೂ ಓದಿ: ಸಿಕ್ಕಿಂ ಪ್ರವಾಹ – 102 ಜನ ನಾಪತ್ತೆ, ಸಾವಿನ ಸಂಖ್ಯೆ 14ಕ್ಕೆ ಏರಿಕೆ
Web Stories