ಚೆನ್ನೈ: ಐಟಿ ಕಂಪನಿ ಸಿಇಒ, ಸೀನಿಯರ್ ಐದು ಮಂದಿ ಉದ್ಯೋಗಿಗಳಿಗೆ ದುಬಾರಿ ಬೆಲೆ ಬಾಳುವ ಬಿಎಮ್‍ಡಬ್ಲ್ಯೂ ಕಾರ್ ಉಡುಗೊರೆ ನೀಡುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೊರೊನಾ ಸಾಂಕ್ರಾಮಿಕ ಸಮಯದಲ್ಲೂ ತಮ್ಮ ಕೈಬಿಡದೆ ಜೊತೆಗಿದ್ದು, ಸಂಸ್ಥೆಯ ಉನ್ನತಿಗೆ ಶ್ರಮಿಸಿದ ಐವರು ಸೀನಿಯರ್ ಉದ್ಯೋಗಿಗಳಿಗೆ ಚೆನ್ನೈ ಮೂಲದ ಕಿಸ್ ಫ್ಲೋ ಇಂಕ್ (Kissflow Inc) ಎನ್ನುವ ಐಟಿ ಕಂಪನಿ, ಸಿಇಒ ಸುರೇಶ್ ಸಂಬಂದಂ ಅವರು BMW ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್
Advertisement
BMW ಕಾರಿನ ಬೆಲೆ 1 ಕೋಟಿ ರೂ. ಕಾರು ಉಡುಗೊರೆಯಾಗಿ ನೀಡುವ ವಿಚಾರವನ್ನು ಗೌಪ್ಯವಾಗಿರಿಸಲಾಗಿತ್ತು. ನಂತರ ಉಡುಗೊರೆ ನೀಡುವುದಕ್ಕೆ ಕೆಲವೇ ಗಂಟೆ ಮೊದಲು ಉದ್ಯೋಗಿಗಳಿಗೆ ತಿಳಿಸಲಾಗಿತ್ತು. ಕಾರು ನೀಡುವ ಸಂದರ್ಭ ಉದ್ಯೋಗಿಗಳ ಕುಟುಂಬಸ್ಥರೂ ಜೊತೆಗಿದ್ದಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಬರೋಬ್ಬರಿ 12 ಕಂಪನಿಗಳನ್ನು ಹ್ಯಾಕಿಂಗ್ ಮಾಡಿದ್ದ ಶ್ರೀಕಿ
Advertisement
ಅನೇಕ ಸೀನಿಯರ್ ಉದ್ಯೋಗಿಗಳು ಕಂಪನಿ ಬೆಳೆಯುವುದಿಲ್ಲವೆಂದು ಅರ್ಧಕ್ಕೆ ಕೆಲಸ ಬಿಟ್ಟು ಬೇರೆ ಕಂಪನಿ ಸೇರಿಕೊಂಡಿದ್ದರು. ಕೊರೊನಾ ಸಮಯದಲ್ಲಿ ಅನೇಕ ಮಂದಿ ಸಂಸ್ಥೆ ತೊರೆದಿದ್ದರು. ಆದರೆ ಐವರು ಮಂದಿ ಎಂಥ ಸಮಸ್ಯೆ ಎದುರಾದಾಗಲೂ ಸಂಸ್ಥೆಯ ಜೊತೆ ಕೈಜೋಡಿಸಿದ್ದಾರೆ ಎಂದು ಸಿಇಒ ಹೇಳಿದ್ದಾರೆ.