ಟೆಲ್ ಅವೀವ್: ತನ್ನ ವಿಮಾನ ನಿಲ್ದಾಣದ (Airport) ಮೇಲೆ ಹೌತಿ ಉಗ್ರರು ದಾಳಿ ಮಾಡಿದ್ದಕ್ಕೆ ಪ್ರತೀಯಾಗಿ ಇಸ್ರೇಲ್ (Isreal) ಯೆಮೆನ್‌ನ ಹೊಡೈದಾ ಬಂದರು (Yemen’s Hodeidah Port) ಮೇಲೆ ಬಾಂಬ್ ದಾಳಿ ನಡೆಸಿದೆ.
ಇಸ್ರೇಲ್ 30 ಯುದ್ಧ ವಿಮಾನಗಳ ಸಹಾಯದಿಂದ ಬಾಂಬ್ ದಾಳಿ ನಡೆಸಿದೆ. ಈ ದಾಳಿಗೆ ಹೊಡೈದಾ ಬಂದರು ಧ್ವಂಸಗೊಂಡಿದ್ದು ಭಾರೀ ಪ್ರಮಾಣದಲ್ಲಿ ಬೆಂಕಿಯ ಜ್ವಾಲೆಗಳು ಮೇಲಕ್ಕೆ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಭಾರತ-ಪಾಕ್ ಉದ್ವಿಗ್ನತೆ ನಡುವೆಯೂ ಹೆಚ್ಚಿದ ವೈವಾಹಿಕ ಸಂಬಂಧ – ಲವ್‌ಸ್ಟೋರಿಗಳಿಗೆ ಕಾರಣ ಏನು?
ಇರಾನ್ ಬೆಂಬಲಿತ ಹೌತಿಗಳು ಟೆಲ್ ಅವೀವ್‌ನ ಮುಖ್ಯ ವಿಮಾನ ನಿಲ್ದಾಣದ ಬಳಿ ಕ್ಷಿಪಣಿಯನ್ನು ಹಾರಿಸಿದ ಒಂದು ದಿನದ ನಂತರ ಇಸ್ರೇಲ್ ಪ್ರತೀಕಾರ ತೀರಿಸಿದೆ.
The Hodeidah port in Yemen after the Israeli strike.
We finally speak in a language terrorists understand. pic.twitter.com/UdvaLjmWwW
— Hananya Naftali (@HananyaNaftali) May 5, 2025
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ವಿಮಾನ ನಿಲ್ದಾಣದ ಬಳಿ ಹೌತಿಗಳು ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು. ಇದನ್ನೂ ಓದಿ: 1971ರ ನಂತರ ನಾಳೆ ದೇಶದಲ್ಲಿ ಯುದ್ಧದ ಡ್ರಿಲ್! – ಮಾಕ್ ಡ್ರಿಲ್ ಹೇಗಿರಲಿದೆ?
ಯೆಮೆನ್‌ನಿಂದ ಬಂದ ಹೆಚ್ಚಿನ ದಾಳಿಗಳನ್ನು ಇಸ್ರೇಲ್‌ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ತಡೆಹಿಡಿದಿದ್ದವು. ಆದರೆ ಭಾನುವಾರ ರಕ್ಷಣಾ ವ್ಯವಸ್ಥೆಯನ್ನು ಬೇಧಿಸಿ ಕ್ಷಿಪಣಿ ವಿಮಾನ ನಿಲ್ದಾಣದ ಮೇಲೆ ಬಿದ್ದಿತ್ತು.