ಟೆಲ್ ಅವೀವ್: ಕಳೆದ ಒಂದು ವಾರದಿಂದ ಇಸ್ರೇಲ್-ಹಮಾಸ್ (Israel Hamas War) ನಡುವೆ ಕದನ ವಿರಾಮ ಏರ್ಪಟ್ಟಿದೆ. ಒತ್ತೆಯಾಳುಗಳ (Hostages) ಬಿಡುಗಡೆಯಾಗಿ 4 ದಿನಗಳಿಗೆ ಸೀಮಿತವಾಗಿದ್ದ ಕದನ ವಿರಾಮ ಅವಧಿ ವಿಸ್ತರಣೆಗೊಂಡಿದೆ. ಈ ನಡುವೆಯೂ ಗಾಜಾಪಟ್ಟಿಯಲ್ಲಿ ಐವರು ಒತ್ತೆಯಾಳುಗಳು ಮೃತಪಟ್ಟಿದ್ದಾರೆ.
ಐವರು ಒತ್ತೆಯಾಳುಗಳು ಸಾವನ್ನಪ್ಪಿರುವುದಾಗಿ ಇಸ್ರೇಲ್ ಸೇನೆ (Israel Army) ಖಚಿತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಒತ್ತೆಯಾಳುಗಳಾದ ಎಲಿಯಾಹು ಮಾರ್ಗಲಿಟ್, ಮಾಯಾ ಗೊರೆನ್, ರೋನೆನ್ ಎಂಗಲ್ ಮತ್ತು ಆರ್ಯೆ ಜಲ್ಮನೋವಿಟ್ಜ್ ಅವರ ಸಾವಿನ ಬಗ್ಗೆ ಕುಟುಂಬದವರಿಗೆ ಇಸ್ರೇಲ್ ರಕ್ಷಣಾ ಪಡೆ ಹಾಗೂ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಸೇನಾ ವಕ್ತಾರ ಡೇನಿಯಲ್ ಹಗರಿ ತಿಳಿಸಿದ್ದಾರೆ. ಒಫಿರ್ ತ್ಸರ್ಪಾತಿ ಎಂದು ಗುರುತಿಸಲಾದ 5ನೇ ವ್ಯಕ್ತಿಯ ಮೃತದೇಹವನ್ನು ಇಸ್ರೇಲ್ ಸೇನೆ ಮರಳಿ ಪಡೆದಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಏರ್ಪಟ್ಟಿದ್ದು, 3 ಬ್ಯಾಚ್‌ನಲ್ಲಿ 40ಕ್ಕೂ ಹೆಚ್ಚು ಒತ್ತೆಯಾಳುಗಳನ್ನ ಹಮಾಸ್ ಬಿಡುಗಡೆ ಮಾಡಿದೆ. ಇನ್ನಷ್ಟು ಒತ್ತೆಯಾಳುಗಳ ಬಿಡುಗಡೆಗಾಗಿ ಕದನ ವಿರಾಮ ವಿಸ್ತರಿಸಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲೂ ಯೋಗಿ ಸರ್ಕಾರದ ಬುಲ್ಡೋಜರ್ ದಾಳಿ – ಕಟ್ಟಡಗಳು ಧ್ವಂಸ
ಇಸ್ರೇಲ್ ಮತ್ತು ಹಮಾಸ್ (Israel- Hamas) ನಡುವಿನ ಒಪ್ಪಂದದ ಅಡಿಯಲ್ಲಿ 50 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದರೆ, 150 ಪ್ಯಾಲೆಸ್ತೀನ್ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಬೇಕು ಎಂದು ಹೇಳಲಾಗಿತ್ತು. ಹಾಗಾಗಿ ದಿನಗಳ ಕದನ ವಿರಾಮಕ್ಕೆ ಹಮಾಸ್ ಹಾಗೂ ಇಸ್ರೇಲ್ ಒಪ್ಪಿಗೆ ಸೂಚಿಸಿತ್ತು. ಇದನ್ನೂ ಓದಿ: 4 ವರ್ಷದ ಬಾಲಕಿ ಸೇರಿ 3ನೇ ಬ್ಯಾಚ್‍ನ 17 ಮಂದಿಯ ಬಿಡುಗಡೆ ಮಾಡಿದ ಹಮಾಸ್
ಹಮಾಸ್ ಉಗ್ರರ ಗುಂಪು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7 ರಂದು ಗಾಜಾಪಟ್ಟಿಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಮೇಲೂ ದಾಳಿ ಮಾಡಿ ಸುಮಾರು 240 ಒತ್ತೆಯಾಳುಗಳನ್ನು ಅಪಹರಿಸಿದ್ದರು. ಆದ್ರೆ ಇಸ್ರೇಲ್ ದಾಳಿಗೆ 15 ಸಾವಿರ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಅದರಲ್ಲಿ 6,150 ಮಕ್ಕಳೂ ಸೇರಿದ್ದಾರೆ. ಅಲ್ಲದೇ 36,000 ಮಂದಿ ಗಾಯಗೊಂಡಿದ್ದು, 7 ಸಾವಿರಕ್ಕೂ ಹೆಚ್ಚು ಮಂದಿ ಕಾಣೆಯಾಗಿರುವುದಾಗಿ ಹಮಾಸ್ ಹೇಳಿದೆ. ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ಮೊದಲ ಮಹಿಳಾ ಕಮಾಂಡಿಂಗ್ ಅಧಿಕಾರಿ ನೇಮಕ