ಲಂಡನ್: ಬ್ರಿಟನ್‌ನ (UK) ಲೀಸೆಸ್ಟರ್ (Leicester) ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ (Muslim) ಸಮುದಾಯಗಳ ನಡುವೆ ಗುಂಪು ಘರ್ಷಣೆ ಏರ್ಪಟ್ಟಿದ್ದು, ಹಿಂದೂ ದೇವಾಲಯಗಳನ್ನು (Hindu Temple) ಧ್ವಂಸಗೊಳಿಸಲಾಗಿದೆ.
ಈ ಘಟನೆಯನ್ನು ಬಲವಾಗಿ ಖಂಡಿಸಿರುವ ಬ್ರಿಟನ್‌ನ ಭಾರತದ ಹೈಕಮಿಷನ್ (India HighCommission) ಕಚೇರಿಯು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಯುಕೆ ಅಧಿಕಾರಿಗಳವರೆಗೆ ಈ ವಿಷಯವನ್ನು ತೆಗೆದುಕೊಂಡು ಹೋಗಿರುವುದಾಗಿ ಹೇಳಿದೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್ ಶಕೆ ಅಂತ್ಯ – ಲಕ್ಷಾಂತರ ಮಂದಿ ಸಮಕ್ಷಮದಲ್ಲಿ ಅಂತಿಮ ಯಾತ್ರೆ
Advertisement
Press Release: High Commission of India, London condemns the violence in Leicester. @MIB_India pic.twitter.com/acrW3kHsTl
— India in the UK (@HCI_London) September 19, 2022
Advertisement
ಕಳೆದ ತಿಂಗಳು ಏಷ್ಯಾ ಕಪ್ (AisaCup 2022) ಕ್ರಿಕೆಟ್ ಟೂರ್ನಿಯಲ್ಲಿ (Cricket) ಭಾರತ ಹಾಗೂ ಪಾಕಿಸ್ತಾನದ (Pakistan) ನಡುವೆ ನಡೆದ ಮೊದಲ ಪಂದ್ಯದಲ್ಲಿ ಭಾರತ (Team India) ಜಯ ಸಾಧಿಸಿದ ಬಳಿಕ ಅಭಿಮಾನಿಗಳ ನಡುವೆ ಘರ್ಷಣೆ ನಡೆದಿತ್ತು. ಇದರ ಮುಂದುವರಿದ ಭಾಗವಾಗಿ ಶನಿವಾರ ಹಾಗೂ ಭಾನುವಾರ ಹಿಂಸಾಚಾರ ನಡೆದಿದೆ. ಇದನ್ನೂ ಓದಿ: ನೈತಿಕ ಪೊಲೀಸ್‍ಗಿರಿಗೆ ಯುವತಿ ಬಲಿ: ತಲೆ ಕೂದಲು ಕತ್ತರಿಸಿ, ಹಿಜಬ್ ಸುಟ್ಟು ಇರಾನಿ ಮಹಿಳೆಯರ ಆಕ್ರೋಶ
Advertisement
Muslims in Leicester hunt down Hindus as tensions rise between the two communities. MSM silent as always. pic.twitter.com/0HZXwNvuRu
— kazza mc (@sammijohnst) September 6, 2022
Advertisement
ಲೀಸೆಸ್ಟರ್‌ನಲ್ಲಿ ಭಾರತೀಯ ಸಮುದಾಯದ ವಿರುದ್ಧ ನಡೆದ ಹಿಂಸಾಚಾರವನ್ನು ಬಲವಾಗಿ ಖಂಡಿಸುತ್ತೇವೆ. ಈ ವಿಚಾರವನ್ನು ಬ್ರಿಟನ್ ಅಧಿಕಾರಿಗಳ ಗಮನಕ್ಕೆ ತಂದಿದ್ದು, ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ಅಲ್ಲದೆ ಭಾರತೀಯ ಸಮುದಾಯವರಿಗೆ ರಕ್ಷಣೆ ಒದಗಿಸಲು ಮನವಿ ಮಾಡಲಾಗಿದೆ ಎಂದು ಬ್ರಿಟನ್‌ನಲ್ಲಿರುವ ಭಾರತದ ಹೈಕಮಿಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯನ್ನು ಬಂಧಿಸಲಾಗಿದೆ ಎಂದು ಲೀಸೆಸ್ಟರ್‌ಶೈರ್ ಪೆuಟಿಜeಜಿiಟಿeಜಲೀಸರು ತಿಳಿಸಿದ್ದಾರೆ.
Our response to disorder in East Leicester pic.twitter.com/1alu5Q95er
— Leicestershire Police (@leicspolice) September 18, 2022
ಲೀಸೆಸ್ಟರ್‌ಶೈರ್‌ನಲ್ಲಿ ಯುವಕರ ಘರ್ಷಣೆ:
ಲೀಸೆಸ್ಟರ್ ಪೊಲೀಸರು ಹೇಳುವಂತೆ, ನಿನ್ನೆ ಲೀಸೆಸ್ಟರ್‌ಶೈರ್‌ನಲ್ಲಿ ಯುವಕರ ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಈ ಪ್ರಕರಣದಲ್ಲಿ ಇದುವರೆಗೆ ಕನಿಷ್ಠ 15 ಮಂದಿಯನ್ನು ಬಂಧಿಸಲಾಗಿದೆ. ಯುಕೆ ನಗರದ ಲೀಸೆಸ್ಟರ್‌ನಲ್ಲಿ ಪಾಕಿಸ್ತಾನಿ ಸಂಘಟಿತ ಗ್ಯಾಂಗ್‌ಗಳು ಹಿಂದೂಗಳನ್ನು ಹಿಂಸಿಸಿ ಅವರನ್ನು ಭಯಭೀತಗೊಳಿಸುತ್ತಿರುವುದನ್ನು ತೋರಿಸುವ ವಿವಿಧ ವೀಡಿಯೊಗಳು ಮತ್ತು ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಹಿಂಸಾಚಾರ ಸಂಭವಿಸಿದೆ ಎಂದು ಹೇಳಿದ್ದಾರೆ.