ನವದೆಹಲಿ: ಇದೇ ಜುಲೈ 10 ರಂದು ಆಚರಿಸುವ ಬಕ್ರೀದ್ (ಈದ್ ಅಲ್-ಅಧಾ) ಹಬ್ಬದ ಸಂದರ್ಭದಲ್ಲಿ ಹಸುಗಳ ಬಲಿ ಕೊಡುವುದನ್ನು ತಪ್ಪಿಸಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
Advertisement
ಅಸ್ಸಾಂನ ಧುಬ್ರಿ ಕ್ಷೇತ್ರದ ಲೋಕಸಭಾ ಸಂಸದ ಹಾಗೂ ಜಮೀಯತ್ ಉಲಮಾದ ರಾಜ್ಯಾಧ್ಯಕ್ಷ ಬದ್ರುದ್ದೀನ್ ಅಜ್ಮಲ್, ಹಿಂದೂಗಳು ಗೋವನ್ನು ತಾಯಿಯಂತೆ ಪೂಜಿಸುತ್ತಾರೆ. ಹಾಗಾಗಿ ಅವುಗಳಿಗೆ ಹಾನಿ ಮಾಡುವುದನ್ನು ತಡೆಯಬೇಕು ಎಂದು ವಿನಂತಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ದಕ್ಷಿಣ್ ಮೂಲಕ ಪ್ರಜಾಪ್ರಭುತ್ವ ಮುಕ್ತ ಭಾರತ ನಿರ್ಮಾಣವೇ ಬಿಜೆಪಿ ಗುರಿ: HDK
Advertisement
Advertisement
ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬದ್ರುದ್ದೀನ್ ಅಜ್ಮಲ್, ಹಿಂದೂಗಳು ಗೋವನ್ನು ತಾಯಿ ಎಂದು ಪರಿಗಣಿಸುತ್ತಾರೆ. ಸನಾತನ ನಂಬಿಕೆಯು ಅದನ್ನು ಪವಿತ್ರ ಸಂಕೇತವೆಂದು ಹೇಳುತ್ತದೆ. ಇಸ್ಲಾಂ ಸಮುದಾಯ ಕೂಡ ಯಾವುದೇ ಪ್ರಾಣಿಗಳ ಪ್ರಾಣಹಾನಿ ಮಾಡೋದು ಬೇಡ. ಅದಕ್ಕಾಗಿ ಇತರ ಪ್ರಾಣಿಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡುತ್ತೇನೆ.